ಆಪರೇಷನ್ 'ಕಮಲ'ಕ್ಕೆ ಕುತ್ತು ತಂದ ಸಿಎಂ ಎಚ್'ಡಿಕೆ..! ಬಿಜೆಪಿ ಯ ಈ ಪ್ರಭಾವಿ ಶಾಸಕ ಜೆಡಿಎಸ್ ಗೆ...!!

20 Sep 2018 1:41 PM |
24740 Report

ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿ ಆಪರೇಷನ್ ನೀಡಲು ಮುಂದಾಗಿದ್ದಾರೆ ಎಂದು ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಬಿಜೆಪಿ ಶಾಸಕರನ್ನು ಸೆಳೆಯಲು ಖುದ್ದು ಸಿಎಂ ಎಚ್ ಡಿ ಕುಮಾರಸ್ವಾಮಿ ಯವರೇ ಪ್ರಯತ್ನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಇದೀಗ ಸಿಎಂ ಎಚ್'ಡಿಕೆ ಪ್ರತಿ ಆಪರೇಷನಗೆ ರೆಡ್ಡಿಯಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ಶಾಸಕರನ್ನು ಸೆಳೆಯಲು ಖುದ್ದು ಸಿಎಂ ಎಚ್'ಡಿಕೆ ಅಖಾಡಕ್ಕಿಳಿದ್ದಿದ್ದಾರೆ ಎನ್ನಲಾಗಿದೆ. ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ಅವರು  ಗಾಳ ವನ್ನು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕಲಬುರಗಿ ಪ್ರವಾಸದ ವೇಳೆ ಆಳಂದ ಶಾಸಕರಿಗೆ ಸಿ ಎಂ ಎಚ್'ಡಿಕೆ ಗಾಳವನ್ನ  ಹಾಕಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಬಿಟ್ಟು ಬಿ ಜೆ ಪಿ ಶಾಸಕರಾಗಿರೋ ಸುಭಾಷ್ ಗುತ್ತೇದಾರ್ ಅವರು ಇದೀಗ ಮತ್ತೆ ಜೆ ಡಿ ಎಸ್ ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿಗೆ ಬಂದು ಮಾತನಾಡಲು ಸಿಎಂ ಎಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

Edited By

Shruthi G

Reported By

hdk fans

Comments