ವಿಧಾನ ಪರಿಷತ್ ಗೆ ಜೆಡಿಎಸ್ ನಿಂದ ಅಖಾಡಕ್ಕಿಳಿಯಲಿರುವ ಈ ಪ್ರಭಾವಿ ಅಭ್ಯರ್ಥಿ..!ದೇವೇಗೌಡ್ರ ಮಹತ್ವದ ನಿರ್ಧಾರ..!!

20 Sep 2018 10:40 AM |
13525 Report

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಉಳಿದ ಅವಧಿಗೆ ಆಯ್ಕೆಯಾಗಲಿರುವ ಮೂರು ಸ್ಥಾನಗಳಿಗೆ ಜೆಡಿಎಸ್ ನಲ್ಲಿ ಭಾರಿ ಲಾಬಿ ಆರಂಭವಾಗಿದ್ದ, ಜೆಡಿಎಸ್ ಗೆ ದಕ್ಕಬಹುದಾದ ಒಂದು ಸ್ಥಾನಕ್ಕೆ ಐದಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಮೂರು ಸ್ಥಾನಗಳಲ್ಲಿ ಎರಡು ಕಾಂಗ್ರೆಸ್ ಗೆ ದಕ್ಕಲಿದ್ದು, ಒಂದು ಸ್ಥಾನ ಜೆಡಿಎಸ್ ಪಾಲಾಗಲಿದೆ. ಮೂಲಗಳ ಪ್ರಕಾರ ಮಾಜಿ ಶಾಸಕರಾದ ಮಧು ಬಂಗಾರಪ್ಪ, ವೈಎಸ್ ವಿ ದತ್ತ ಹಾಗೂ ರಮೇಶ್ ಬಾಬು ಪ್ರಬಲ ಆಕಾಂಕ್ಷಿಗಳಾಗಿದ್ದು, ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಹಾಗೂ ಜೆಡಿಎಸ್ ಮುಖಂಡ ಅಮರ್ ನಾಥ್ ಅವರ ಹೆಸರು ಕೂಡ ಕೇಳಿಬರುತ್ತಿದೆ. ಜೆಡಿಎಸ್ ವರಿಷ್ಠರು ತಮ್ಮ ಮಾನದಂಡ ಗಳಿಗೆ ಅನುಸಾರ ಟಿಕೆಟ್ ಹಂಚಿಕೆ ಮಾಡಲಿದ್ದಾರೆ. ಎಚ್‌ಡಿ ದೇವೇಗೌಡರ ನೇತೃತ್ವದಲ್ಲಿ ಇಂದು(ಸೆ.20)ರಂದು ಸಭೆ ನಡೆಯಲಿದ್ದು, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ ಖಾಲಿ ಇರುವ ಮೂರು ಸ್ಥಾನಗಳಿಗೆ ವಿಧಾನಸಭೆಯ ಸದಸ್ಯರು ಮೂವರು ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ, ಸೆ.22ರಂದು ನಾಮಪತ್ರಕ್ಕೆ ಕೊನೆಯ ದಿನವಾಗಿದೆ. ಸೆ.26 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಅಂತಿಮ ಸಭೆ ನಡೆಯಲಿದ್ದು, ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ, ಜೆಡಿಎಸ್ ವರಿಷ್ಠ ಎಚ್‌.ಡಿ ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್, ಸಚಿವ ಎಚ್‌.ಡಿ ರೇವಣ್ಣ, ಇತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Edited By

Shruthi G

Reported By

hdk fans

Comments