ಕೊರಟಗೆರೆ ಪ.ಪಂ ಗದ್ದುಗಾಗಿ ಹೋರಾಟ

10 Sep 2018 7:58 PM |
1836 Report

ಕೊರಟಗೆರೆ ಸೆ :- ಯಾರಿಗೆ ದಕ್ಕಲಿದೆ ಪ.ಪಂ ಗದ್ದುಗೆ ಜೆಡಿಎಸ್ ಗೋ ಅಥವಾ ಕಾಂಗ್ರೆಸ್ ಗೋ ಇಲ್ಲಾ ಕಾಂಗ್ರೇಸ್-ಜೆಡಿಎಸ್ ಮೈತ್ರಿಗೋ ಎನ್ನುವ ಗೊಂದಲ ಸೃಷ್ಟಿಯಾಗಿದೆ.       ಒಟ್ಟು 15 ಜನ ಸದಸ್ಯರಿರುವ ಪ.ಪಂ ನಲ್ಲಿ 8 ಜೆಡಿಎಸ್,5 ಕಾಂಗ್ರೇಸ್, ತಲಾ ಒಂದು ಬಿಜೆಪಿ ಮತ್ತು ಒಂದು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ.

 

      ಮೊದಲಿಗೆ ಜೆಡಿಎಸ್ ಗೆ ಸರಳ ಬಹುಮತ ಸಿಕ್ಕಿದೆ ಅಧಿಕಾರ ಹಿಡಿಯಲಿದ್ದಾರೆ ಎನ್ನುವ ಲೆಕ್ಕಾಚಾರವಿತ್ತು ಆದರೆ ರಾಜಕೀಯ ಲೆಕ್ಕಾಚಾರದಲ್ಲಿ ಸರಳ ಬಹುತಕ್ಕೆ 9 ಸದಸ್ಯರ ಅವಶ್ಯಕತೆಯಿದ್ದು  ಎರಡೂ ಪಕ್ಷಕ್ಕೂ ಇದು  ಅಷ್ಟು ಸುಲಭವಲ್ಲ ಎನ್ನುವ ವಿಷಯ ತಿಳಿದಂತಿದೆ.

ಕಾಂಗ್ರೇಸ್ ಸಾಧ್ಯತೆಗಳು:- ಕಾಂಗ್ರೇಸ್ ಪಕ್ಷದ 5 ಜ ಸದಸ್ಯರು, ಬಿಜೆಪಿ ಮತ್ತು ಪಕ್ಷೇತರ ತಲಾ ಒಂದು , ಶಾಸಕ ಮತ್ತು ಸಂಸದರ ಮತ ಸೇರಿ ಒಟ್ಟು  9 ಜ ಆಗಲಿದ್ದು ಇದು ಸರಳ ಬಹುಮತಕ್ಕೆ ಸರಿಯಾಗಿದ್ದು ನಾವೇ ಸ್ವತಂತ್ರವಾಗಿ ಅಧಿಕಾರ ಮಾಡುತ್ತೇವೆ ಎನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ.

ಜೆಡಿಎಸ್ ಸಾಧ್ಯತೆಗಳು: ಜೆಡಿಎಸ್ ಪಕ್ಷದ 8 ಸದಸ್ಯರು, ಬಿಜೆಪಿ ಮತ್ತು ಪಕ್ಷೇತರ ತಲಾ ಒಂದೊಂದು  ಸೇರಿ 10 ಜನ ಆಗಲಿದೆ ಆದರೆ ಪಕ್ಷೇತ ಮತ್ತು ಬಿಜೆಪಿ ಸದಸ್ಯರನ್ನು ಓಲೈಕೆ ಮಾಡಲು ಜೆಡಿಎಸ್ ಗೆ ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೆಚ್ಚು ಸ್ಥಾನ ಗೆದ್ದರೂ ಸಹ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗ ಸ್ಥಿತಿಯಲ್ಲಿ ಜೆಡಿಎಸ್ ಇದೆ.

ರಾಜ್ಯಸರ್ಕಾರದ ರೀತಿ ಮೈತ್ರಿಕೆ ಚರ್ಚೆ:- 8 ಸ್ಥಾನ ಗಳಿಸಿರುವ ಜೆಡಿಎಸ್ ಮತ್ತು 5 ಸ್ಥಾನ ಗಳಿಸಿರುವ ಜೆಡಿಎಸ್  ಸೇರಿ ಮೈತ್ರಿಯನ್ನು  ಮಾಡಿಕೊಂಡು ಅಧಿಕಾರ ವಹಿಸಿಕೊಳ್ಳೋಣ ರಾಜ್ಯದ ಹಿತಕ್ಕಾಗಿ ಅಲ್ಲಿ ಮೈತ್ರಿಯಾಗಿದ್ದು, ಕೊರಟಗೆರೆ ಪಟ್ಟಣದ ಹಿತಕ್ಕಾಗಿ ನಾವು ಮೈತ್ರಿಮಾಡಿಕೊಳ್ಳೋಣ ಎನ್ನು ಚರ್ಚೆಗಳು ನಡೆಯುತ್ತಿದ್ದು ಈ ವಿಚಾರ ಈಗ ರಾಜ್ಯ ನಾಯಕರ ಬಳಿ ಇದ್ದು ಅವರ ಕೈಗೊಳ್ಳುವ ನಿರ್ಧಾರದಂತೆ ಪ.ಪಂ ಗದ್ದುಗೆ ಹಂಚಿಕೆಯಾಗಲಿದೆ.

ಮೈತ್ರಿಯಾದರೆ ಯಾರಿಗೆ ಯಾವ ಪಟ್ಟ:- ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು  ಜೆಡಿಎಸ್-ಕಾಂಗ್ರೇಸ್ ಮೈತ್ರಿಯಾದರೆ   ಅಧ್ಯಕ್ಷಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ 15 ನೇ ವಾರ್ಡ್ ನಿಂದ ಮೊದಲ ಬಾರಿ ಆಯ್ಕೆಯಾಗಿರುವ ಭಾರತಿ ಸಿದ್ದಮಲ್ಲಯ್ಯರಿಗೆ ಬಿಟ್ಟುಕೊಡುವುದು ಅದೇ ರೀತಿ ಎಸ್.ಸಿ ಗೆ ಮೀಸಲಿರುವ ಉಪಾಧ್ಯಕ್ಷ ಸ್ಥಾನವನ್ನು ಎನ್.ಕೆ ನರಸಿಂಹಪ್ಪ ನೀಡಬಹುದು ಎನ್ನುವ ಚರ್ಚೆ ಇದೆ.

ಕಾಂಗ್ರೇಸ್ ಪಕ್ಷವೇ ಸ್ವತಂತ್ರವಾಗಿ ಅಧಿಕಾರ ಪಡೆದರೆ!:-  ಅಧ್ಯಕ್ಷ ಸ್ಥಾನಕ್ಕೆ 12 ನೇ ವಾರ್ಡ್ ನಿಂದ ಮೊದಲ ಬಾರಿ ಆಯ್ಕೆಯಾಗಿರುವ ಹೇಮಲತಾ ಮಂಜುನಾಥ್ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಕೆ.ಎನ್ ನಟರಾಜ್ ಗೆ ನೀಡುವ ಚಿಂತನೆಗಳು ನಡೆಯುತ್ತಿವೆ.

      ಪಟ್ಟಣದ ಜನತೆ ನೀವ್ಯಾರದ್ರೂ ಅಧಿಕಾರ ಹಿಡಿರಪ್ಪಾ… ನಮ್ಮೂರನ್ನು ಅಭಿವೃದ್ಧಿ ಮಾಡ್ರಪ್ಪಾ… ನಿಮ್ಮ ರಾಜಕೀಯ ಲೆಕ್ಕಾರವೇನೇ ಮಾಡ್ಕ್ರು ಚಿಂತೆಯಿಲ್ಲ… ನಮಗೆ ಬೇಕಾಗಿರೋ ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ ಎಂದು ಪಟ್ಟಣವಾಸಿಗಳು ಹೇಳುತ್ತಿದ್ದಾರೆ.

ಪ್ರತಿಕ್ರಿಯೆ:-     

      ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ… ಡಾ. ಜಿ ಪರಮೇಶ್ವರ್ ಬಳಿ ಇನ್ನೂ ಈ ವಿಚಾರ ಚರ್ಚಿಸಿಲ್ಲ… ಸಾಧಕ-ಭಾದಕಗಳನ್ನು ಚಿಂತಿಸಿ ನಿರ್ಧಾರ ಕೈಗೊಳ್ಳುತ್ತೇವೆ.

            -ಕೋಡ್ಲಹಳ್ಳಿ ಅಶ್ವಥನಾರಾಯಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ, ಕೊರಟಗೆರೆ

 

      ಈಗಾಗಲೇ ಪಕ್ಷೇತ ಮತ್ತು ಬಿಜೆಪಿ ಸದಸ್ಯರನ್ನು ಭೇಟಿ ಮಾಡಿದ್ದೇವೆ ಯವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ… ಕೊರಟಗೆರೆ ಪಟ್ಟಣದ ಅಭಿವೃದ್ಧಿಗಾಗಿ ನಮ್ಮ ತೀರ್ಮಾನವಿರುತ್ತದೆ.

ಜೆ.ಎನ್ ನರಸಿಂಹರಾಜು, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ

 

 

 

Edited By

Raghavendra D.M

Reported By

Raghavendra D.M

Comments