ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ,ಶಾಸಕ ಸಿ.ಟಿ.ರವಿ ಭೇಟಿ, ಸಮಾರೋಪ ಸಮಾರಂಭಕ್ಕೆ ಆಹ್ವಾನ ನೀಡಿದ ಮೋದಿ ಬಾಯ್ಸ್

07 Sep 2018 10:29 AM |
413 Report

ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗಳು ದಿನಾಂಕ 16-9-2018 ಭಾನುವಾರ ಮತ್ತು 17-9-2018 ಸೋಮವಾರದಂದು ನೆಡೆಯಲಿವೆ, ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಲು ಇಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ,ಶಾಸಕ ಸಿ.ಟಿ.ರವಿ ಮತ್ತು ಬೆಂ.ಗ್ರಾ. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡರಿಗೆ ಆಹ್ವಾನ ನೀಡಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಹೆಚ್.ಎಸ್. ಶಿವಶಂಕರ್ ನೇತೃತ್ವದಲ್ಲಿ ಯುವ ಮೋರ್ಚ ಉಪಾಧ್ಯಕ್ಷ ಶಿವು, ಮೋದಿ ಬಾಯ್ಸ್ ಮುಖಂಡರಾದ ರಾಮು,ರವಿ,ಭಕ್ತ,ನರೇಂದ್ರ,ಗುರು ಮತ್ತಿತರರು ಇದ್ದರು.

Edited By

Ramesh

Reported By

Ramesh

Comments