ದೊಡ್ಡಬಳ್ಳಾಪುರ ಯುವಾ ಬ್ರಿಗೇಡ್ ವತಿಯಿಂದ ಮತ್ತೊಮ್ಮೆ ದಿಗ್ವಿಜಯ ಶೋಭಾಯಾತ್ರೆ

03 Sep 2018 7:23 AM |
638 Report

ಸೆಪ್ಟೆಂಬರ್ 11, 1893 ರಂದು ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದಲ್ಲಿ ಭಾರತದ ಸನಾತನ ಧರ್ಮದ ಸಾರವನ್ನ ಜಗತ್ತಿಗೆ ತಿಳಿಸಿದ ದಿನ. ಆ ಐತಿಹಾಸಿಕ ಭಾಷಣಕ್ಕೆ ಈ ವರ್ಷ 125 ನೇ ವರ್ಷವಾಗಲಿದೆ. ಇದರ ಅಂಗವಾಗಿ ಯುವಾ ಬ್ರಿಗೇಡ್ ಮತ್ತೊಮ್ಮೆ ದಿಗ್ವಿಜಯ ಹೆಸರಿನಲ್ಲಿ ಸ್ವಾಮಿಜಿ ಹಾಗೂ ಸ್ವಾಮಿ ವಿವೇಕಾನಂದರಿಂದ ಪ್ರೇರಿತಳಾಗಿ ಭಾರತೀಯರ ಸೇವೆಯಲ್ಲಿ ತನ್ನ ಬದುಕನ್ನೇ ಸಮರ್ಪಿಸಿದ ಅಕ್ಕ ನಿವೇದಿತಾಳ 150 ನೇ ಜಯಂತಿ ರಥಯಾತ್ರೆಯನ್ನು ರಾಜ್ಯಾದ್ಯಂತ ಮಾಡಲಿದೆ. ಈ ರಥವು ದೊಡ್ಡಬಳ್ಳಾಪುರಕ್ಕೆ ಸೆಪ್ಟೆಂಬರ್ 6 ಬರಲಿದೆ ರಥದ ಜೊತೆಯಲ್ಲಿ ಪುಸ್ತಕ ಮಳಿಗೆ, ಪ್ರದರ್ಶನ ಮತ್ತು ಮಾರಾಟ ಕೂಡ ಇರುತ್ತದೆ.

ಬೆಳಿಗ್ಗೆ 9.30 ಕ್ಕೆ ಶೋಭಾಯಾತ್ರೆ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಮುಂಭಾಗದಿಂದ ಪ್ರಾರಂಭವಾಗಲಿದೆ, ಹಾಗೂ ಸಭಾ ಕಾರ್ಯಕ್ರಮ ಬೆಳಿಗ್ಗೆ 10.30 ಕ್ಕೆ ಭಗತ್ ಸಿಂಗ್ ಕ್ರೀಡಾಂಗಣ ರಸ್ತೆ, ದೊಡ್ಡಬಳ್ಳಾಪುರ. ಇಲ್ಲಿ ನಡೆಯಲಿದೆ, ದಿಕ್ಸೂಚಿ ಭಾಷಣವನ್ನು ನಿತ್ಯಾನಂದ ವಿವೇಕ ವಂಶಿ ಮಾಡಲಿದ್ದಾರೆ, ಭಾರತದ ಗೌರವವನ್ನು ಉತ್ತುಂಗಕ್ಕೇರಿಸಿದ ಸಿಡಿಲ ಸಂತನ ಸಿಂಹ ಘರ್ಜನೆಯ ಸ್ಮರಣೆಯಲ್ಲಿ ಭಾಗಿಯಾಗಲು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲ ಜಿಲ್ಲೆಗಳಿಗಿಂತ ವಿಶೇಷವಾಗಿ ಕಾರ್ಯಕ್ರಮ ನಡೆಸಿ ರಥವನ್ನು ಮುಂದಿನ ಜಿಲ್ಲೆಗೆ ಕಳುಹಿಸಿಕೊಡಲು ದೊಡ್ಡಬಳ್ಳಾಪುರ ಯುವಾ ಬ್ರಿಗೇಡ್ ಪದಾಧಿಕಾರಿಗಳು ಕೋರಿದ್ದಾರೆ.

ಸಂಪರ್ಕ ಸಂಖ್ಯೆ :- 8088335247

Edited By

Ramesh

Reported By

Ramesh

Comments