ದೇವೇಗೌಡರನ್ನು ಹಾಡಿ ಹೊಗಳಿದ ಉಪರಾಷ್ಟ್ರಪತಿ..!

28 Aug 2018 6:02 PM |
747 Report

ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಹಾಗೂ ಶ್ರೀ ಚನ್ನವೀರ ದೇಶಿಕೇಂದ್ರ ಗುರುಕುಲ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ದೇವೇಗೌಡರು ದೆಹಲಿಗೆ ಹೋದರೂ ಯಾವತ್ತೂ ತಮ್ಮ ಮಾತೃಭೂಮಿ, ಮಾತೃಭಾಷೆಯನ್ನು ಎಂದಿಗೂ ಮರೆತಿಲ್ಲ ಎಂದು ಹಾಡಿ ಹೋಗಳಿದರು.

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು  ರವರು ಮಾತನಾಡಿ ಇಂದಿನ ಯುವ ಜನತೆ ನಮ್ಮ ಮಾತೃ ಭೂಮಿಯನ್ನು ಪ್ರೀತಿಸಬೇಕು. ಸ್ಥಳೀಯ ಭಾಷೆಗಳು ಬೆಳೆಯಬೇಕು. ನಮ್ಮ ಮಾತೃ ಭಾಷೆ ಕಣ್ಣಿದ್ದಂತೆ. ಇತರ ಭಾಷೆ ಕನ್ನಡಕ ವಿದ್ದಂತೆ. ಕಣ್ಣು ಬಹಳ ಮುಖ್ಯವಾದುದ್ದು ಎಂದು ಸಲಹೆ ನೀಡಿದರು.

 ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸುತ್ತೂರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ 50ಲಕ್ಷ ರೂ. ದೇಣಿಗೆಯನ್ನು ನೀಡಲಾಯಿತು. ಜಗದ್ಗುರು ಶ್ರೀ ದೇಶೀಕೇಂದ್ರ ಮಹಾಸ್ವಾಮಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚೆಕ್ ಹಸ್ತಾಂತರಿಸಿದರು.

Edited By

hdk fans

Reported By

hdk fans

Comments