ಎಚ್ ಡಿ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರಬರೆದ ರೈತರು..!

27 Aug 2018 12:21 PM |
3332 Report

ಶಿರಾ ತಾಲೂಕಿನ ಗ್ರಾಮಸ್ಥರು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ತಮ್ಮನ್ನು ನೇಣು ಕುಣಿಕೆಯಿಂದ ಪಾರು ಮಾಡಿ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಮದಲೂರು ಕೆರೆಗೆ ನೀರು ಹರಿಸುವ ಮಾರ್ಗದಲ್ಲಿಯೂ ಸುಮಾರು ಕೆರೆಗಳಿಗೆ ನೀರು ತುಂಬಲಿವೆ. ಮದಲೂರು ಕೆರೆ ಸುತ್ತಮುತ್ತ ಇರುವ ಕಸಬಾ ಹೋಬಳಿ, ಹುಲಿಕುಂಟೆ, ದಿಡಗನಹಳ್ಳಿ ಅರೆಹಳ್ಳಿ, ಹೊನ್ನಗೊಂಡನಹಳ್ಳಿ, ಕೊಟ್ಟ, ಪಟ್ಟನಾಯಕನಹಳ್ಳಿಯ ಪ್ರದೇಶದಲ್ಲಿಯೂ ಅಂತರ್ಜಲ ಅಭಿವೃದ್ಧಿಯಾಗಲಿದ್ದು, ಕೂಡಲೇ ಹೇಮಾವತಿ ನೀರನ್ನು ಹರಿಸಿ  ಎಂದು ಭಾನುವಾರ ಮದಲೂರು ಕೆರೆ ಅಂಗಳದಲ್ಲಿ ಸೇರಿದ ರೈತರು ಎಲ್ಲರ ರಕ್ತ ಸಂಗ್ರಹಿಸಿ ಪತ್ರ ಬರೆದು ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ

Edited By

hdk fans

Reported By

hdk fans

Comments