ನಮೋ ಸೇನೆ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

23 Aug 2018 6:22 PM |
913 Report

ದೊಡ್ಡಬಳ್ಳಾಪುರ ತಾಲ್ಲೂಕಿನ ನಮೋ ಸೇನೆ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 26-8-2018 ಭಾನುವಾರ ಬೆಳಿಗ್ಗೆ 11 ಘಂಟೆಗೆ ನಗರದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಲಾಗಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾನಿಮಠ, ಚಿಕ್ಕ ಬೆಳವಂಗಲ ಶ್ರೀ ಶ್ರೀ ಶ್ರೀ ಬಸವರಾಜ ಸ್ವಾಮಿ ವಹಿಸಲಿದ್ದಾರೆ, ವಕೀಲ ರವಿ ಮಾವಿನಕುಂಟೆ ಉಪಸ್ಥಿತಿಯಲ್ಲಿ ನಿವೃತ್ತ ಜಂಟಿ ನಿರ್ದೇಶಕರು, ಕೆ.ಎಂ.ಎಫ್, ಸಹಕಾರ ಭಾರತಿ ಪ್ರಮುಖ ಮಂಜೇನಹಳ್ಳಿ ರಾಮಚಂದ್ರಾಚಾರ್ ಅನಂತ್, ಉಪನ್ಯಾಸ ನೀಡಲಿದ್ದಾರೆ.

ಸಾಧಕರ ಪಟ್ಟಿ: ಹೆಚ್. ಸದಾನಂದಗೌಡರು, ಸಮಗ್ರ ಕೃಷಿ ಪದ್ದತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು [ತಪಸೀ ಹಳ್ಳಿ]  ಎಂ.ಜೆ ರಾಜಶೇಖರ್ ಶೆಟ್ಟಿ, ಸಂಪಾದಕರು. ಹಾಯ್ ದೊಡ್ಡಬಳ್ಳಾಪುರ [ದೊಡ್ಡಬಳ್ಳಾಪುರ] ಲಕ್ಷ್ಮೀಗೌಡರು, ಸಾವಯವ ಕೃಷಿ ಮತ್ತು ಹೈನುಗಾರಿಕೆ, [ಕುಂಟನಹಳ್ಳಿ]  ಬಿ.ಎಂ. ಮಂಜುನಾಥ್, ಸೈನಿಕರು, [ಬಲ್ಲೇನಹಳ್ಳಿ]  ಚನ್ನಮಾರಯ್ಯ, ನಿವೃತ್ತ ಸೈನಿಕರು, [ಸೊನ್ನೇನ ಹಳ್ಳಿ] ಡಾ.ಚೌಡಯ್ಯ, ವೈದ್ಯಕೀಯ ಕ್ಷೇತ್ರ, [ದೊಡ್ಡಬಳ್ಳಾಪುರ]  ಮಹಾಲಿಂಗಯ್ಯ, ನಿವೃತ್ತ ಶಿಕ್ಷಕರು, [ದೊಡ್ಡಬಳ್ಳಾಪುರ] ರಾಜಶೇಖರ್, ಶಿಕ್ಷಕರು, [ದೊಡ್ಡಬಳ್ಳಾಪುರ] ಪಂಜಿನಿ ವೆಂಕಟೇಶ, ವಾಣೀಜ್ಯೋದ್ಯಮಿಗಳು ಮತ್ತು ಸಮಾಜ ಸೇವಕರು, [ದೊಡ್ಡಬಳ್ಳಾಪುರ] ಹಾಗೂ ವೆಂಕಟೇಶ ಲೇಖಕರು, ಇತಿಹಾಸ ಸಂಶೋಧಕರು, [ದೊಡ್ಡಬಳ್ಳಾಪುರ] ಇವರಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ,  ಕಾರ್ಯಕ್ರಮಕ್ಕೆ ಎಲ್ಲಾ ನಮೋ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಸ್ವಾಗತವನ್ನು ದೊಡ್ಡಬಳ್ಳಾಪುರ ನಮೋ ಸೇನೆ ಸಂಘಟಕರು ಕೋರುತ್ತಾರೆ.

Edited By

Ramesh

Reported By

Ramesh

Comments