ಕುಡಿತದ ದುಷ್ಪರಿಣಾಮಗಳ ಕುರಿತ ಜಾಗೃತ ಶಿಬಿರ

23 Aug 2018 5:16 PM |
1602 Report

ನಗರಸಭೆ ಮತ್ತು ಶ್ರೀ ರಾಮ ಆಸ್ಪತ್ರೆ, ದೊಡ್ಡಬಳ್ಳಾಪುರ ಇವರ ವತಿಯಿಂದ ಬೆಳಿಗ್ಗೆ ಹತ್ತು ಘಂಟೆಗೆ ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ರಾಜ್ ಕಲಾಮಂದಿರದಲ್ಲಿ ಪೌರಕಾರ್ಮಿಕರಿಗೆ ಕುಡಿತದ ದುಷ್ಪರಿಣಾಮಗಳ ಕುರಿತು ಪ್ರಾತ್ಯಕ್ಷಿಕೆ, ಜಾಗೃತಿ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಆಸ್ಪತ್ರೆಯ ಡಾ.ವಿಜಯಕುಮಾರ್, ನಗರಸಭಾ ಉಪಾಧ್ಯಕ್ಷೆ ಜಯಲಕ್ಷ್ಮಿ, ಮಾಜಿ ನಗರಸಭಾ ಅಧ್ಯಕ್ಷ ಮುದ್ದಪ್ಪ ಮತ್ತು ನಗರಸಭಾ ಸದಸ್ಯ ಭಾಸ್ಕರ್ ಹಾಜರಿದ್ದರು. ನಗರಸಭೆಯ ಒಟ್ಟು ನೂರ ಅರವತ್ತು ಮಂದಿ ಪೌರಕಾರ್ಮಿಕರು ಹಾಜರಿದ್ದು ಬಿ.ಪಿ. ಮತ್ತು ಸಕ್ಕರೆ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡರು. ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪೌರ ಕುಡಿತದಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ ಪೌರ ಕಾರ್ಮಿಕರು ಸಾಧ್ಯವಾದಷ್ಟೂ ಕುಡಿತದಿಂದ ದೂರ ಇರುವಂತೆ ಸಲಹೆ ನೀಡಿದರು.

Edited By

Ramesh

Reported By

Ramesh

Comments