ಸಹಾಯ ಹಸ್ತ ನೀಡಲು ಕೊಡಗಿಗೆ ಹೊರಟ ಕೋಟೆ ಗರಡಿ ಪೈಲ್ವಾನರು

22 Aug 2018 8:19 AM |
690 Report

ಇಂದು ಬೆಳಗಿನ ಜಾವ ದೊಡ್ಡಬಳ್ಳಾಪುರದ ರಾಜಕಮಲ್ ಚಿತ್ರಮಂದಿರ ರಸ್ತೆಯಲ್ಲಿರುವ ಕೋಟೆ ಗರಡಿ ವ್ಯಾಯಾಮಶಾಲೆ ಸಂಘದ ವತಿಯಿಂದ ಕೊಡಗಿನಲ್ಲಿ ನೆರೆಹಾವಳಿಗೆ ತುತ್ತಾಗಿರುವ ಬಂಧುಗಳಿಗೆ ಸಹಾಯ ಹಸ್ತ ನೀಡಲು ಹೊರಟರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಹಿತೈಷಿಗಳು ಮತ್ತು ಸ್ನೇಹಿತರ ಸಹಾಯದಿಂದ ಔಷಧಿಗಳು, ಬೆಡ್ ಷೀಟ್, ಪೆಟ್ಟಿಕೋಟ್, ಮಹಿಳೆಯರು ಮತ್ತು ಮಕ್ಕಳ ಒಳ ಉಡುಪುಗಳು, ಲೋಟ,ತಟ್ಟೆ, ಬಕೆಟ್, ಟಿ ಷರ್ಟ್, ಸೀರೆಗಳು, ಜೀನ್ಸ್ ಪ್ಯಾಂಟ್, ಟವೆಲ್, ಟೂತ್ ಪೇಸ್ಟ್, ನೀರಿನ ಬಾಟಲ್, ಮತ್ತಿತರ ಸಾಮಾಗ್ರಿಗಳನ್ನು ಸಂಘದ ನಿರ್ದೇಶಕರಾದ ಬಿ.ಜಿ.ಶ್ರೀನಿವಾಸ್, ಲಕ್ಷ್ಮೀನಾರಾಯಣ್, ಕೆ.ಆರ್.ವಿಶ್ವನಾಥ್, ರಮಾಕಾಂತ್, ಆಂಜಿನಪ್ಪ, ಪರಪ್ಪ ಕಾರ್ಯದರ್ಶಿ ಎ.ಎಸ್.ಗೋಪಿ ನೇತೃತ್ವದಲ್ಲಿ ಮಡಿಕೇರಿಗೆ ಹೊರಟರು, ಇವರನ್ನು ಕೋಟೆ ಗರಡಿ ವ್ಯಾಯಾಮ ಶಾಲೆ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಿರ್ದೇಶಕರಾದ ಪೈಲ್ವಾನ್ ಚೌಡಪ್ಪ, ಪೈಲ್ವಾನ್ ಪಿಳ್ಳಪ್ಪ, ಕಳುಹಿಸಿಕೊಟ್ಟರು.

ಭಾನುವಾರ ರಾತ್ರಿ ಮಡಿಕೇರಿಗೆ ಹೋಗಿದ್ದ ನಗರದ ಭಜರಂಗದಳ, ಆರ‍್ಯ ವೈಶ್ಯ ಮಂಡಲಿ, ಶ್ರೀ ರಾಮ ಸೇನೆ, ಹಿಂದೂ ಜಾಗರಣ ವೇಧಿಕೆ ಯುವಕರ ತಂಡ ಎರಡು ದಿನಗಳ ಕಾಲ ಸೇವೆ ಸಲ್ಲಿಸಿ ಊರಿಗೆ ಹಿಂದಿರುಗಿದ್ದಾರೆ, ದಿನಾಂಕ 25ರ ರಾತ್ರಿ ಶ್ರೀ ನಗರೇಶ್ವರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಹಳೇ ಬಸ್ ನಿಲ್ದಾಣದ ಅಂಗಡಿಗಳ ಮಾಲೀಕರು ಮಡಿಕೇರಿಗೆ ಹೊರಟಿದ್ದಾರೆ, ಸಹಾಯ ಮಾಡುವವರು ಸಂಪರ್ಕಿಸಿ: ಹಳೇ ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ಬೇಕರಿ ಸತೀಶ್ ಮತ್ತು ಶಬರಿ ಬೇಕರಿ ಅಮರನಾಥ್.

Edited By

Ramesh

Reported By

Ramesh

Comments