28-7-2018 ಮಂಗಳವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ

20 Aug 2018 3:40 PM |
677 Report

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ದಿನಾಂಕ 27-8-2018 ನೇ ಸೋಮವಾರದಿಂದ ದಿ. 30-8-2018 ನೇ ಗುರುವಾರದವರೆಗೆ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿರುತ್ತದೆ, ದಿನಾಂಕ 27ರ ಸೋಮವಾರದಂದು ಪ್ರಾತಃಕಾಲ ಮಧು ಅಭಿಷೇಕ ಮತ್ತು ಪಾತ್ರಃ ಸಂಕಲ್ಪಗದ್ಯ ಹೋಮ, ಸಂಜೆ 6ರಿಂದ 7ರವರೆಗೆ ಸ್ಥಳೀಯ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ, ಸಂಜೆ 7 ಘಂಟೆಗೆ ಸಂಗೀತ ಕಛೇರಿ ಸಂಗೀತ ವಿದುಷಿ ಶ್ರೀಮತಿ ಇಂದಿರಾ ಶರ್ಮ ರವರಿಂದ. ಮುಖ್ಯ ಆರಾಧನೆ ದಿ.28 ರ ಮಂಗಳವಾರದಂದು ಪ್ರಾತಃಕಾಲ ಸಹಸ್ರ ಕ್ಷೀರಾಭಿಷೇಕ ಮತ್ತು ಶ್ರೀ ಹರಿವಾಯು ಸುತ್ತಿ ಹೋಮ ನಡೆಯುತ್ತದೆ, ಸಂಜೆ 6 ರಿಂದ 7ರವರೆಗೆ ಸ್ಥಳೀಯ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ, ರಾತ್ರಿ 7ಘಂಟೆಗೆ ಸಂಗೀತ ಕಛೇರಿ, ಸಂಗೀತ ವಿಧುಷಿ ಜೆ.ಕೆ.ಯೋಗ ಕೀರ್ತನ ರವರಿಂದ.

ದಿನಾಂಕ 29 ರ ಬುಧವಾರ ಪ್ರಾತಃಕಾಲ ಮಧು ಅಭಿಷೇಕ ಮತ್ತು ಶ್ರೀ ಗುರುಗುಣ ಸ್ತವನ ಹೋಮ ಹಾಗೂ ಪುರ ಪ್ರಮುಖ ಬೀದಿಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ರಥೋತ್ಸವ, ಸಂಜೆ 6ರಿಂದ 7ರವರೆಗೆ ಸ್ಥಳೀಯ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ, ಸಂಜೆ 7 ಘಂಟೆಗೆ ಸಂಗೀತ ಕಛೇರಿ ಸಂಗೀತ ಕಛೇರಿ ಸಂಗೀತ ವಿದ್ವಾನ್ ಗಾನಕಲಾಶ್ರೀ ಶ್ರೀ ಎಲ್.ವಿ.ಮುಖುಂದ್ ರವರಿಂದ. ದಿ. 30ರಂದು ಪ್ರಾತಃಕಾಲ ಮಧು ಅಭಿಷೇಕ ಮತ್ತು ಶ್ರೀ ರಾಘವೇಂದ್ರ ಸ್ತೋತ್ರ ಹೋಮ, ಸಂಜೆ 6 ರಿಂದ 7ರವರೆಗೆ ಸ್ಥಳೀಯ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ, ರಾತ್ರಿ 7ಘಂಟೆಗೆ ನಾಗಸ್ವರ ಕಛೇರಿ, ನಾಗಸ್ವರ ವಿದ್ವಾನ್ ಶ್ರೀ ಎಂ.ರಂಗಪ್ಪ ರವರಿಂದ. ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಕುಟುಂಬ ಸಮೇತರಾಗಿ ಬಂದು ಗುರುಗಳ ಸೇವೆ ಮಾಡಿ ತಿರ್ಥ,ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿರುತ್ತಾರೆ.

Edited By

Ramesh

Reported By

Ramesh

Comments