ನೆರೆ ಸಂತ್ರಸ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾಡಿದ್ದೇನು ಗೊತ್ತಾ?

20 Aug 2018 9:46 AM |
3967 Report

ಕೇರಳ ಹಾಗೂ ಕೊಡಗು ನೆರೆ ಸಂತ್ರಸ್ತರಿಗೆ ನನ್ನ 2 ತಿಂಗಳ ಸಂಬಳ ನೀಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಮಳೆಯನ್ನು ನೋಡಿಯೇ ಇಲ್ಲ. ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನನ್ನ ಎರಡು ತಿಂಗಳ ಸಂಬಳ ನೀಡುವುದಾಗಿ ತಿಳಿಸಿದರು.

ಕೊಡಗು ಹಾಗೂ ಕೇರಳಕ್ಕೆ ತಲಾ ಒಂದು ತಿಂಗಳ ಸಂಬಳ ನೀಡುತ್ತೇನೆ. ಪ್ರವಾಹ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳ ಜತೆಗೆ ಹಣಕಾಸಿನ ನೆರವು ನೀಡಿದರೆ ಅನುಕೂಲವಾಗಲಿದೆ. ಮಳೆಯಿಂದ ತತ್ತರಿಸಿರುವ ಜಿಲ್ಲೆಗೆ ಸಹಾಯ ಮಾಡಲು ಎಲ್ಲರೂ ಮುಂದಾಗಬೇಕು. ರಾಜ್ಯದ ಮುಖ್ಯಮಂತ್ರಿಗಳ ನಿಧಿಗೆ ಧನ ಸಹಾಯ ನೀಡಿ ಎಂದು ಮಾಜಿ ಪ್ರಧಾನಿ ಮನವಿ ಮಾಡಿದ್ದಾರೆ.

Edited By

Shruthi G

Reported By

hdk fans

Comments