ನಾಡಿಗೆ ನೀರುಣಿಸುವ, ದೇಶ ಕಾಯುವ ಕೊಡಗಿನ ಸಂಕಷ್ಠಕ್ಕೆ ಮಿಡಿಯುತ್ತಿರುವ ರೇಷ್ಮೆನಗರ

19 Aug 2018 9:15 AM |
1145 Report

ನಮ್ಮ ರಾಜ್ಯದ ಕೊಡಗು ಜಿಲ್ಲೆ ಹಿಂದೆಂದೂ ಕಾಣದಷ್ಟು ಜಲಪ್ರಳಯಕ್ಕೆ ಸಿಕ್ಕಿದೆ, ಸಹಸ್ರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ, ನಿಲ್ಲಲು ನೆಲೆ ಇಲ್ಲದೆ, ತಿನ್ನಲು ಆಹಾರವಿಲ್ಲದೆ ಅಸಹಾಯಕರಾಗಿ ಪರದಾಡುತ್ತಿದ್ದಾರೆ. ಎಂದೂ ಯಾರ ಮುಂದೆಯೂ ಕೈಚಾಚದ ಕೊಡಗಿಗೆ ಇಂದು ಸಂಕಷ್ಠ ಎದುರಾಗಿ ಸಹಾಯ ಹಸ್ತ ಬೆಕಾಗಿದೆ, ಅವರ ಕಷ್ಟಕ್ಕೆ ಮರುಗಿ ನಮ್ಮ ರೇಷ್ಮೆ ನಗರದ ಮಂದಿ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ ನೆನ್ನೆ ರಾತ್ರಿ ಊರಿನ ನಮೋ ಸೇನೆ, ಹಿಂದೂ ಜಾಗರಣಾ ವೇಧಿಕೆ ಮತ್ತು ಶ್ರೀ ರಾಮ ಸೇನೆ ಯುವಕರ ಹದಿನೆಂಟು ಮಂದಿ ಬಚ್ಚಳ್ಳಿ ಕೆಂಪೇಗೌಡರ ನೇತೃತ್ವದಲ್ಲಿ ದಾನಿಗಳು ನೀಡಿದ ಆಹಾರ, ಬಿಸ್ಕತ್, ರಗ್ಗು, ಬಟ್ಟೆಗಳನ್ನು ತೆಗೆದುಕೊಂಡು ಅಲ್ಲಿಗೆ ತಲುಪಿದ್ದಾರೆ, ಸ್ಥಳೀಯ ವಾಸವಿ ಮಂಡಲಿಯ ಪದಾಧಿಕಾರಿಗಳು ಒಂದು ಲೋಡ್ ಆಹಾರ, ನೀರು, ಅಕ್ಕಿ, ಬಟ್ಟೆ, ಬಿಸ್ಕತ್, ಔಷದ ತೆಗೆದುಕೊಂಡು ವಿತರಿಸಲು ಹೊರಟಿದ್ದಾರೆ. ಈ ದಿನ ಹೊರಡುವ ಒಂದು ಲೋಡ್ ಲಾರಿಯಷ್ಟು ಪದಾರ್ಥಗಳನ್ನು ತೆಗೆದುಕೊಂಡು ಮಂಜುನಾಥ್, ಅನಿಲ್, ಶ್ರೀನಿವಾಸ್ ಮತ್ತು ತಂಡದವರು ಬೆಂಗಳೂರಿನಲ್ಲಿರುವ ಕೊಡವ ಸಮಾಜಕ್ಕೆ ತಲುಪಿಸಲಿದ್ದಾರೆ, ಊರಿನ ನಗರೇಶ್ವರಸ್ವಾಮಿ ಸೇವಾ ಟ್ರಸ್ಟ್ ಹಾಗೂ ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ ವತಿಯಿಂದ 25ರಂದು ನೆರವು ನೀಡಲು ಹೊರಟಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ಸಾಕಷ್ಟು ಆಹಾರ ಈಗಾಗಲೆ ಕೊಡಗಿಗೆ ಬಂದು ತಲುಪಿದೆ, ಸಹಾಯ ನೀಡುವವರು ಸಾದ್ಯವಾದಷ್ಟೂ ರಗ್ಗು, ಬಟ್ಟೆ, ಹೆಂಗಸರು ಮತ್ತು ಮಕ್ಕಳ ಒಳ ಉಡುಪುಗಳನ್ನು ನೀಡಲು ಕೊಡವ ಸಮಾಜದ ಪ್ರಮುಕರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮಂಜುನಾಥ್ - 9060759008,9738844587,8971434747  ನಗರೇಶ್ವರಸ್ವಾಮಿ ಸೇವಾ ಟ್ರಸ್ಟ್- 9448882134,9342207015,9945382272  ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್-9964600200,8884999000,9886949553   

Edited By

Ramesh

Reported By

Ramesh

Comments