ಗಿಡ ನೆಡುವ ಮೂಲಕ ದೊಡ್ಡಬಳ್ಳಾಪುರ ನಮೋ ಸೇನೆಗೆ ಅಧಿಕೃತ ಚಾಲನೆ

05 Aug 2018 1:51 PM |
505 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ಗ್ರಾಮದ ಹಿರಿಯರಿಂದ ಗಿಡ ನೆಡುವ ಮೂಲಕ ನಮೋ ಸೇನೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು, ನಮೋ ಸೇನೆಯ ಹುಟ್ಟಿಗೆ ಕಾರಣರಾದವರಲ್ಲಿ ಒಬ್ಬರಾದ ಬಸವರಾಜ್ ಪ್ರಾಸ್ತಾವಿಕವಾಗಿ ನಮೋ ಸೇನೆಯ ಹುಟ್ಟಿನ ಕುರಿತು ಮಾತನಾಡಿ ನಮ್ಮ ಉದ್ದೇಶ ಒಂದೇ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪ್ರಧಾನ ಮಂತ್ರಿಯಾಗಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಮಾಡುವುದು, ಅದಕ್ಕಾಗಿ ದುಡಿಯಲು ಸಮಾನ ಮನಸ್ಕರು ಒಂದಾಗಿದ್ದೇವೆ ದೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ನಮೋ ಸೇನೆಯ ಒಂದೊಂದು ಘಟಕವನ್ನು ಸ್ಥಾಪಿಸಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರಿಗೆ ಬರುವ ಎಲ್ಲಾ ಅನುಕೂಲಗಳನ್ನು ಎಲ್ಲರಿಗೂ ಮುಟ್ಟುವಂತೆ ಮಾಡುವುದು ನಮೋ ಸೇನೆಯ ಕೆಲಸ ಎಂದು ಹೇಳಿದರು. ನಮೋ ಸೇನೆಯ ಕೆಂಪೇಗೌಡ, ರಮೇಶ್, ಸತೀಶ್, ಚೇತನ್, ರಾಮಾಂಜಿನಪ್ಪ, ಕೊನಘಟ್ಟ ಗ್ರಾಮದ ಹಿರಿಯರು, ಅಕ್ಕ ಪಕ್ಕದ ಹಳ್ಳಿಗಳಲ್ಲಿರುವ ಮೋದಿ ಅಭಿಮಾನಿ ಯುವಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಮೋ ಸೇನೆ ಕರೆಗೆ ಓಗೊಟ್ಟು ಗುಲ್ಬರ್ಗ ನಗರದ ಹಿರಿಯರು ಮೋದಿ ಅಭಿಮಾನಿಗಳು ಆದ ಬಸವರಾಜ್ ದೋನಿ ಆಗಮಿಸಿದ್ದು ವಿಶೇಷವಾಗಿತ್ತು.

Edited By

Ramesh

Reported By

Ramesh

Comments