ಸಿಹಿಸುದ್ದಿ : ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಘೋಷಿಸಿದ ಕುಮಾರಣ್ಣ..!!

23 Jul 2018 5:09 PM |
5524 Report

ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ ವಿತರಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ‌‌. ಕುಮಾರಸ್ವಾಮಿ ತಿಳಿಸಿದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್.ಡಿ‌‌. ಕುಮಾರಸ್ವಾಮಿ ಅವರು‌, ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವ ವಿಚಾರದಲ್ಲಿ ಸರ್ಕಾರ ಬದ್ದವಾಗಿದ್ದು, ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಆ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಅಂತ ಹೇಳಿದ ಅವರು ನಾಳೆ ಅಧಿಕಾರಿಗಳ ಸಭೆ ಕರೆದು ಈ ತೀರ್ಮಾನ ಮಾಡಲಾಗುತ್ತದೆ ಅಂತ ಹೇಳಲಾಗಿದೆ. 

ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಶಾಲೆಗೆ ಸೇರಿಸುವವರಿಗೆ ಉಚಿತ ಬಸ್ ಪಾಸ್ ಅಗತ್ಯ ಇಲ್ಲ‌. ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟುಕೊಂಡು ಈ ರಾಜಕೀಯ ಮಾಡುವುದು ಬೇಡ.‌ ನನಗೆ ಅವರಿಗಿಂತ ಚೆನ್ನಾಗಿ ರಾಜಕೀಯ ಮಾಡಲು ಗೊತ್ತು ಎಂದರು. ಪ್ರತ್ಯೇಕ ರಾಜ್ಯ ವಿವಾದ ಹುಟ್ಟು ಹಾಕುತ್ತಿರುವವರಿಗೆ ಈ ರಾಜ್ಯವನ್ನು ಮುನ್ನಡೆಸುವ ತಾಕತ್ತು ಇಲ್ಲ‌. ಬೆಂಗಳೂರಿನ ಶೇ 65 ರಷ್ಟು ಅನುದಾನ ಉತ್ತರ ಕರ್ನಾಟಕದ ಅಭಿವೃದ್ದಿಗೆ ಬಳಕೆ ಆಗುತ್ತಿರುವುದನ್ನು ಅವರು ಮರೆಯಬಾರದು ಎಂದು ಟೀಕಿಸಿದರು. ಸಂಪೂರ್ಣ ಸಾಲ ಮನ್ನಾಕ್ಕೆ ಉತ್ತರ ಕರ್ನಾಟಕದ ಕೆಲವು ರೈತರು ಒತ್ತಾಯಿಸಿದ್ದಾರೆ. ನಿಮಗೆ ಮತ ಹಾಕುವಾಗ ಮಾತ್ರ ನನ್ನ ನೆನಪಾಗಲಿಲ್ಲ. ಜಾತಿ, ಧರ್ಮ ನೋಡಿ ಓಟು ಹಾಕಿದವರಿಗೆ ನನ್ನನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದರು

 

Edited By

Shruthi G

Reported By

hdk fans

Comments