ಮಕ್ಕಳಿಗೆ ಪ್ರಾಯೋಗಿಕ ಕಲಿಕೆಗೆ ಅವಕಾಶ ಮಾಡಿಕೊಡಿ: ಎಂ.ಜಿ ಸುಧೀರ್ ಸಲಹೆ

14 Jul 2018 6:25 PM |
731 Report

ಕೊರಟಗೆರೆ ಜುಲೈ :- ಸ್ಪರಧಾತ್ಮಕ ಜಗತ್ತಿನಲ್ಲಿ ಎಲ್ಲವನ್ನೂ ಮಕ್ಕಳಿಗೆ ಪೂರ್ವಪ್ರಾಥಮಿಕ ಹಂತದಲ್ಲಿಯೇ ಕಲಿಸಬೇಕು ಎಂದು ಕನ್ನಿಕಾ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಎಂ.ಜಿ ಸುಧೀರ್ ತಿಳಿಸಿದರು. ಶುಕ್ರವಾರ ಶಾಲೆಯಲ್ಲಿ ಆಯೋಜಿಸಿದ್ದ ರೆಡ್ ಡೇ ಆಚರಣೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ವಿವಿಧ ಬಣ್ಣಗಳ ಬಗ್ಗೆ ಪರಿಚಯವನ್ನು ಮಾಡಿ ಮಾತನಾಡಿದರು. ಜಗತ್ತು ಅತೀ ವೇಗವಾಗಿದೆ ಈಗಿನ ಮಕ್ಕಳು ಸಹ ತಾಂತ್ರಿಕತೆಯನ್ನು ಕ್ಷಿಪ್ರವಾಗಿ ಕಲಿಯುತ್ತಿದ್ದಾರೆ ಈ ಹಿನ್ನೆಯಲ್ಲಿ ಪೋಷಕರು ಮಕ್ಕಳೊಂದಿಗೆ ಮಕ್ಕಳಾಗಿ ಅವರಲ್ಲಿ ಮೂಡುವಂತಹ ಪ್ರಶ್ನೆಗಳಿಗೆ ಬೇಸರಿಸದೆ ಉತ್ತರಿಸಬೇಕು ಎಂದರು.

ಶಾಲೆಯ ಕಾರ್ಯದರ್ಶಿ ಕೆ.ಎಸ್.ವಿ ರಘು ಮಾತನಾಡಿ ಶಾಲೆಯಲ್ಲಿ ಕಲಿಕೆಯಲ್ಲಿ ಹಲವು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಪ್ರಯೋಗಾಧರಿತ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ ಮಾತನಾಡಿ ಪ್ರತಿಯೊಂದು ಮಗುವೂ ಸಹ ವಿಭಿನ್ನವಾಗಿದ್ದು ಅವರಲ್ಲಿರುವಂತಹ ಪ್ರತಿಭೆ ಅನಾವರಣಕ್ಕೆ ಪ್ರಾಯೋಗಿಕ ಶಿಕ್ಷಣ ಉಪಯೋಗಕಾರಿಯಾಗಿದ್ದು ಪೋಷಕರು ಮನೆಯಲ್ಲಿಯೂ ಮಕ್ಕಳಿಗೆ ಈ ರೀತಿಯ ಕಲಿಕೆಗೆ ಪೋಷಕರು ಅವಕಾಶ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮಮದಲ್ಲಿ ಶಿಕ್ಷಕಿಯರಾದ ಎಂ.ಆರ್ ದಿವ್ಯಶ್ರೀ, ಚಂದ್ರಕಲಾ, ಶಿಲ್ಪಾ, ಶಾರದ, ನೂರ್ ಅಯಿಶಾ, ಮಂಜುಳಾ ಸೇರಿದಂತೆ ಇತರರು ಇದ್ದರು.(ಚಿತ್ರಗಳು ಇವೆ )

Edited By

Raghavendra D.M

Reported By

Raghavendra D.M

Comments