ಮಾತೃಶ್ರೀ ಯೋಜನೆಯ ಸೌಲಭ್ಯವನ್ನು ಪಡೆಯಲು ಈ ದಾಖಲಾತಿಗಳು ಕಡ್ಡಾಯ..! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವುದರ ಕಂಪ್ಲೀಟ್ ಡೀಟೇಲ್ಸ್..!!

11 Jul 2018 10:54 AM |
5458 Report

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರಿಗಾಗಿ ಮಾತೃಶ್ರೀ ಯೋಜನೆಯನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರದ ಮೊದಲನೇಯ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಮಾತೃಶ್ರೀ ಯೋಜನೆಯಡಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾದ ದಾಖಲಾತಿಗಳು, ಸಿಗುವ ಮೊತ್ತ ಇತ್ಯಾದಿಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಮಾತೃಶ್ರೀ ಯೋಜನೆಯ ವಿವರಗಳು..

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಈ ಯೋಜನೆ ಪ್ರಕಟಿಸಿದೆ. ಈಗಾಗಲೇ ರಾಜ್ಯಸರ್ಕಾರದ ಮಾತೃಪೂರ್ಣ ಮತ್ತು ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಗಳು ಕೂಡ ಜಾರಿಯಲ್ಲಿವೆ. ಇವುಗಳೊಂದಿಗೆ ಕುಮಾರಸ್ವಾಮಿಯವರು ಮಾತೃಶ್ರೀ ಯೋಜನೆಯನ್ನು ಹೊಸದಾಗಿ ರೂಪಿಸಿದ್ದಾರೆ. ಮಾತೃಶ್ರೀ ಯೋಜನೆ ಮುಖಾಂತರ ಫಲಾನುಭವಿಗಳು ಒಟ್ಟು ರೂ. 6೦೦೦ ಪಡೆಯಬಹುದಾಗಿದೆ. ಇದನ್ನು ಎರಡು ಹಂತದಲ್ಲಿ ನೀಡಲಾಗುತ್ತದೆ. ಮೊದಲನೆಯದು ಹೆರಿಗೆ ಪೂರ್ವದ ಮೂರು ತಿಂಗಳಿಗೆ ತಲಾ ಒಂದು ಸಾವಿರ ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ನೀಡಲಾಗುತ್ತದೆ.

ಅಂಗನವಾಡಿ ಮೇಲುಸ್ತುವಾರಿ : ಮಾತೃಶ್ರೀ ಯೋಜನೆಯ ಮೇಲುಸ್ತುವಾರಿಯನ್ನು ಆಯಾ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಿಗೆ ಅಥವಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದೇಗೆ?

ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಕಾರ್ಯಕರ್ತೆಯರ ಬಳಿ ನೀವು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಿ ಪರಿಪೂರ್ಣ ಮಾಹಿತಿ ಪಡೆಯಿರಿ.

ಬೇಕಾಗುವ ದಾಖಲಾತಿಗಳು :

ತಾಯಿ ಕಾರ್ಡ್; ಆಧಾರ್ ಕಾರ್ಡ್; ಚುನಾವಣಾ ಚೀಟಿ; ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ಖಾತೆ; ಪತಿಯ ಆಧಾರ್ ಮತ್ತು ಚುನಾವಣಾ ಚೀಟಿ.

ಯೋಜನೆ ಜಾರಿ, ನಿಯಮದ ವಿವರಗಳು..

ನವೆಂಬರ್ 1 ರಿಂದ ಮಾತೃಶ್ರೀ ಯೋಜನೆ ಜಾರಿಯಾಗಲಿದ್ದು, ಈ ಯೋಜನೆ ಎರಡು ಮಕ್ಕಳಿಗೆ ಅನ್ವಯವಾಗಲಿದೆ. ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ಈ ಮೊತ್ತ ಜಮೆಯಾಗುತ್ತದೆ.

 

Edited By

Shruthi G

Reported By

hdk fans

Comments