ಬ್ರೇಕಿಂಗ್ ನ್ಯೂಸ್ : ಸಾಲಮನ್ನಾ ಯಾರಿಗೆ ಎಷ್ಟು ಲಾಭ? ಪ್ರಯೋಜನವೇಷ್ಟು, ಪಡೆದುಕೊಳ್ಳೋದೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

06 Jul 2018 3:33 PM |
6814 Report

ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಅವರು ನಡೆಸಿರುವ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಸಾಲಮನ್ನವನ್ನು ಯಾವ ಜಾತಿಯವರು ಎಷ್ಟರ ಮಟ್ಟಿಗೆ ಲಾಭವಾಗಲಿದೆ ಹಾಗೂ ಅದರ ಪ್ರಯೋಜವನ್ನು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಾಲಮನ್ನಾದ ಲಾಭವನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಒಕ್ಕಲಿಗರು ಪಡೆಯಲಿದ್ದಾರೆ. ಹೌದು.. ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕುಮಾರಸ್ವಾಮಿಯವರು 2 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರಿಂದ 33% ಒಕ್ಕಲಿಗರ ಸಾಲ ಮನ್ನಾ ಆಗಲಿದೆ. ಅದರ ವಿವರವನ್ನು ನೋಡುವುದಾದರೇ ಜಾತಿವಾರು ಲೆಕ್ಕಾಚಾರದ ವಿವರ ಹೀಗಿದೆ.

ಜಾತಿವಾರು ಲೆಕ್ಕಾಚಾರ :
ಒಕ್ಕಲಿಗ- ಶೇ.32
ಇತರೆ- ಶೇ.15.6
ಗೊಲ್ಲ- ಶೇ. 12.1
ಆದಿ ಕರ್ನಾಟಕ- ಶೇ.11.9
ಲಿಂಗಾಯತ- ಶೇ.10.9
ಕುರುಬ- ಶೇ.4.8
ಮಾದಿಗ- ಶೇ.4.3
ನಾಯಕ- ಶೇ.3.9
ಮುಸ್ಲಿಂ- ಶೇ.2.4
ಗಾಣಿಗ- ಶೇ.2.1

ಮೊದಲ ಹಂತದಲ್ಲಿ 2017 ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ತೀರ್ಮಾನಿಸಿದ್ದಾರೆ. ರೈತರ ಸಾಲಮನ್ನಾದಿಂದ 34 ಸಾವಿರ ಕೋಟಿ ಮೈತ್ರಿ ಸರ್ಕಾರಕ್ಕೆ ಹೊರೆಯಾಗಲಿದೆ. ಇದರಿಂದ ರೈತರಿಗೆ ಸುಮಾರು 40 ಲಕ್ಷ ಸಾಲಮನ್ನಾದ ಪ್ರಯೋಜನವಾಗಿದೆ. ಅಕ್ಟೋಬರ್ 30, 2018 ಒಳಗೆ ಪೂರ್ತಿ ತೆರಿಗೆ ಪಾವತಿಸುವವರಿಗೆ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುವುದು. ಇನ್ನು ಸಕಾಲದಲ್ಲಿ ಸಾಲ ಪಾವತಿಸಿರುವ ರೈತರಿಗೆ 25 ಸಾವಿರ ನಗದು ವಾಪಸ್ ಕೊಡಲಾಗುವುದು. ಅಷ್ಟೇ ಅಲ್ಲದೇ ರೈತರಿಗೆ ಹೊಸ ಸಾಲ ನೀಡಲು 6 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಆದರೆ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರ ಸಾಲ ಮತ್ತು ಇತರೆ ಅನರ್ಹ ಕೃಷಿ ಸಾಲಗಾರರ ಸಾಲ ಮನ್ನಾ ಕೂಡ ಇಲ್ಲವಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರಗಳ ಅಧಿಕಾರಿ ಕುಟುಂಬಗಳ ಸಾಲ ಮನ್ನಾ ಮಾಡಿಲ್ಲ.

Edited By

Shruthi G

Reported By

hdk fans

Comments