ನಿಮ್ಮ ಬಳ್ಳಿ ಬಿಪಿಎಲ್ ಕಾರ್ಡ್ ಇದ್ಯಾ..!ಹಾಗಾದ್ರೆ ಈ ಬಂಪರ್ ಕೊಡುಗೆ ನಿಮ್ಮದಾಗಿಸಿಕೊಳ್ಳಿ..!!

06 Jul 2018 1:30 PM |
25097 Report

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್ನಲ್ಲಿ ಕೆಲವು ಹೊಸ ಕಾರ್ಯಕ್ರಮಗಳಿಗೆ ಆಗುವ ಹೆಚ್ಚುವರಿ ವೆಚ್ಚ ಭರಿಸಲು ಸಾಕಷ್ಟು ಸರ್ಕಸ್ ಮಾಡಲಾಗಿದೆ.

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ನ.1 ರಿಂದ ಜಾರಿ ಮಾಡಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮೂರು ತಿಂಗಳ ಅವಧಿಗೆ ಮಾಸಿಕ 1,000 ರೂ. ನಂತೆ ಒಟ್ಟು 6,000 ರೂ. ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

  •  ಮಾತೃಶ್ರೀ ಯೋಜನೆಗೆ 350 ಕೋಟಿ ರೂ. ಅನುದಾನ ನಿಗದಿ.
  • 'ಆಧಾರ' ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚ 1 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದ್ದು, ಅದರಲ್ಲಿ ಶೇ.50 ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50 ರಷ್ಟು ಸಹಾಯಧನ ನೀಡಲಾಗಿದೆ.
  • 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿ ಎಲ್ಲಾ 21 ವಿಧದ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ರೂ.ಅನುದಾನ.
  • ಪ್ರಸ್ತುತ ಜಿಲ್ಲೆಗೆ ಒಂದರಂತೆ ಇರುವ ವೃದ್ಧಾಶ್ರಮವನ್ನು ರಾಜ್ಯದ ಎಲ್ಲಾ ಉಪಭಾಗಗಳಿಗೆ ತಲಾ ಒಂದರಂತೆ ವಿಸ್ತರಣೆ. 
  • ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮದಿಂದ ವಿಕಲಚೇತರಿಗೆ ನೀಡಿರುವ ಸಾಲ ಮತ್ತು 2014 ರಿಂದ ಸುಸ್ತಿಯಾಗಿರುವ ಬಡ್ಡಿ ಮೊತ್ತ ಮನ್ನಾ ಮಾಡಲು 4 ಕೋಟಿ ರೂ.ಅನುದಾನ.
  • ವಿಕಲಚೇತನ ಪಾಲನೆ ಹಾಗೂ ನಿರ್ವಹಣೆ ಬಗ್ಗೆ ಪಾಲಕರಿಗೆ ತರಬೇತಿ ನೀಡಲು 20 ಎಕರೆ ಜಾಗದಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ವಿಕಲಚೇತನರ ಕ್ಯಾಂಪಸ್ ಪ್ರಾರಂಭ.
  • ಬೆಂಗಳೂರಿನ ಇಂದಿರಾನಗರದಲ್ಲಿರುವ ಸರಕಾರಿ ಕಿವುಡು ಮಕ್ಕಳ ಶಾಲೆಯ ಕಟ್ಟಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಶಿಕ್ಷಕರ ಶಿಕ್ಷಣಕ್ಕಾಗಿ ತರಬೇತಿ ಕೇಂದ್ರ ಹಾಗೂ ವಿಶೇಷ ಬಿಇಡಿ ಕಾಲೇಜನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.
  • ಪಿಎಚ್‌ಡಿ ಮಾಡುತ್ತಿರುವ ಹಾಗೂ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಕೈಗೊಳ್ಳುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1 ಕೋಟಿ ರೂ. ಅನುದಾನ.
  • ವಿವಿಧ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಲೈಂಗಿಕ ಕಾರ್ಯಕರ್ತೆಯರ ಜೀವನಕ್ಕೆ ಭದ್ರತೆ ಒದಗಿಸುವ ಕಾರ್ಯಕ್ರಮ ಜಾರಿ.

Edited By

Shruthi G

Reported By

hdk fans

Comments