ಸಿದ್ದರಾಮಯ್ಯಗೆ ಬಜೆಟ್ ನಲ್ಲಿ ಸಿಎಂ ಎಚ್'ಡಿಕೆ ನೀಡಿದ್ದೇನು? ಕೇಳಿದ್ರೆ ಶಾಕ್ ಆಗ್ತೀರಾ..!

06 Jul 2018 9:53 AM |
5601 Report

ಮೈತ್ರಿ ಸರ್ಕಾರ ತನ್ನ ಮೊದಲ ಬಜೆಟ್ ಅನ್ನು ಮಂಡನೆ ಮಾಡಲು ಮುಂದಾಗಿದ್ದ ವೇಳೆಯಲ್ಲಿ ಖುದ್ದು ಸಿದ್ದರಾಮಯ್ಯನವರು ವಿರೋಧ ವ್ಯಕ್ತಪಡಿಸಿದ್ದರು, ಇವೆಲ್ಲದರ ನಡುವೆ ಅದು ಇದು ಮಾತುಕತೆಯಾದ ಬಳಿಕ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಬಜೆಟ್ ಗೆ ಒಪ್ಪಿಗೆ ನೀಡಿದರು.

ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು ಏನ್ ಗೊತ್ತಾ?

ಹೌದು, ತಮ್ಮ ಕ್ಷೇತ್ರದಲ್ಲಿ ಜವಳಿ ಪಾರ್ಕ್, ಬಾದಾಮಿಯ ಕೆಂಧೂರು ಕೆರೆ ತುಂಬಿಸುವುದು ಸೇರಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಾಗೂ ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಬನಶಂಕರಿ, ಮಹಾಕೂಟಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಸೌಲಭ್ಯ ಕಲ್ಪಿಸುವಂತೆ ಕೋರಿದ್ದರು. ಇದಲ್ಲದೇ ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಮೂರು ಪತ್ರವನ್ನು ಬರೆದ್ದಿದರು ಎನ್ನಲಾಗಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಬಹು ದೊಡ್ಡ ಮಟ್ಟಿನ ಚರ್ಚೆಯಾಗಿತ್ತು, ಹಾಗೇ ಬಜೆಟ್ ನಲ್ಲಿ ಈ ಬಗ್ಗೆ ಯಾವ ರೀತಿ ನಡೆದುಕೊಳ್ಳಲಿದ್ದಾರೆ ಅನ್ನೊಂದು ಎಲ್ಲರ ಕೂತೂಹಲಕ್ಕೆ ಕಾರಣವಾಗಿತ್ತು. ಈ ನಡುವೆ ಗುರುವಾರ ಮಂಡನೆಯಾದ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಬಾಗಲಕೋಟೆ ಜಿಲ್ಲೆಗೆ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾಮಗಾರಿ ಕಾರ್ಯಕ್ಕೆ ವೇಗ ನೀಡುವ ಬಗ್ಗೆ ಹೇಳಿರುವುದನ್ನು ಬಿಟ್ಟರೆ ಮತ್ಯಾವ ಯೋಜನೆಗಳನ್ನು ಕೂಡ ಬಾಗಲಕೋಟೆಗೆ ಈ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ.

Edited By

Shruthi G

Reported By

hdk fans

Comments