ಬಜೆಟ್ ಮಂಡನೆ ಹಿನ್ನಲೆ ಸಿದ್ದುಗೆ ಲೀಗಲ್ ಬಗ್ಗೆ ಭಯ ಹುಟ್ಟಿಸಿದ ಸಿಎಂ ಎಚ್’ಡಿಕೆ

26 Jun 2018 3:47 PM |
6635 Report

ಲೋಕಸಭೆ ಚುನಾವಣೆ ಬಳಿಕ ಬಜೆಟ್ ಮಂಡಿಸಿ ಎನ್ನುತ್ತಿದ್ದಾರೆ. ಈಗಾಗಲೇ ಸಹಕಾರಿ ಬ್ಯಾಂಕ್​​ಗಳಲ್ಲಿನ 8 ಸಾವಿರ ಕೋಟಿ ಸಾಲಮನ್ನಾ ಆಗಿದೆ. ಇನ್ನೂ 10 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಬೇಕು. ಮುಂದಿನ ಮಾರ್ಚ್ ಅಂತ್ಯದವರೆಗಿನ ಸಾಲಮನ್ನಾಗೆ ಒತ್ತಾಯವಿದೆ.

ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿರುವುದರಿಂದ 16,000 ಕೋಟಿ ರೂ. ಹೆಚ್ಚಿನ ಹೊರೆಯಾಗಿದೆ. ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಯವರು ತಮ್ಮ ಬಜೆಟ್​ನ್ನು‌ ಮುಂದುವರಿಸಿ ಎಂದು ಹೇಳುತ್ತಿದ್ದಾರೆ. ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅವರು ಸೋಮವಾರ ಸಾಲಮನ್ನಾ ವಿಚಾರ ಕುರಿತು ಇಂದು ವಿಧಾನಸೌಧದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು ಇದೇ ವೇಳೆ ಅವರು ಮಾತನಾಡಿ ಕೆಲವರು ಈ ಹಿಂದಿನ ಬಜೆಟ್ ಅನ್ನು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ಕಳೆದ ಬಾರಿ ಬಜೆಟ್ ಗೆ ಒಪ್ಪಿಗೆ ಸೂಚಿಸಿದ ಸರಿ ಸುಮಾರು 100 ಮಂದಿ ಶಾಸಕರು ಈ ಬಾರಿ ಆಯ್ಕೆಯಾಗಿಲ್ಲ, ಈ ಬಾರಿ ಹೊಸದಾಗಿ 100 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಒಂದು ವೇಳೆ ನಾನು ಹೊಸದಾಗಿ ಬಜೆಟ್ ಮಂಡನೆ ಮಾಡದೇ ಹೋದರೆ ನನ್ನ ವಿರುದ್ದ ಹಕ್ಕು ಚ್ಯುತಿ ಮಂಡನೆ ಮಾಡಿದರೆ ನಾನು ಎನು ಮಾಡಲಿ ಅಂತ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಕಾನೂನತ್ಮಕ ವಿಷಯನ್ನು ಮುಂದಿಟ್ಟುಕೊಂಡು ಹೇಳಿದರು.

Edited By

Shruthi G

Reported By

hdk fans

Comments