ಶೀಘ್ರದಲ್ಲೇ ಕಾವೇರಿ ನದಿ ಬಗ್ಗೆ ಕಿರು ಪುಸ್ತಕವನ್ನು ಹೊರ ತರಲಿದ್ದಾರೆ ಸಿಎಂ ಎಚ್'ಡಿಕೆ

26 Jun 2018 2:25 PM |
1063 Report

ಶೀಘ್ರದಲ್ಲೇ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒಳಗೊಂಡ ಕಿರು ಪುಸ್ತಕವೊಂದನ್ನು ಹೊರ ತರಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತೀರ್ಮಾನಿಸಿದ್ದಾರೆ.

ಸುಮಾರು 45 ಪುಟಗಳ ಈ ಪುಸ್ತಕದಲ್ಲಿ ತಮಿಳಿಗೆ ಭಾಷಾಂತರಿಸಿ, ಅದನ್ನು ತಮಿಳುನಾಡು ಸಚಿವರಿಗೆ, ಶಾಸಕರಿಗೆ, ಸಂಸದರಿಗೆ ಹಾಗೂ ಪ್ರತಿಪಕ್ಷ ನಾಯಕರಿಗೆ ಉಚಿತವಾಗಿ ನೀಡಲು ಸಿಎಂ ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಾಲಾವಕಾಶ ನೀಡದೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಿದ್ದರಿಂದ ರಾಜ್ಯಕ್ಕೆ ಆಗಬಹುದಾದ ಸಾಧಕ-ಬಾಧಕ ಕುರಿತು ಪುಸ್ತಕದಲ್ಲಿ ಮಾಹಿತಿ ಇರಲಿದೆ. ಈ ಮೂಲಕ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಉದ್ದೇಶವಿದೆ ಎನ್ನಲಾಗಿದೆ. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿರ್ದೇಶನದಂತೆ ಸಿಎಂ ಕುಮಾರಸ್ವಾಮಿ ಅವರು ಈ ಪುಸ್ತಕ ಹೊರತರಲು ನಿರ್ಧರಿಸಿದ್ದು, 15-20 ದಿನಗಳಲ್ಲಿ ಈ ಪುಸ್ತಕ ಹೊರ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಪುಸ್ತಕದಲ್ಲಿ ಏನೆಲ್ಲಾ ಮುಖ್ಯ ಅಂಶಾಗಳು ಇರಲ್ಲಿದೆ ಗೊತ್ತಾ?

ಕಾವೇರಿ ನದಿಯ ಇತಿಹಾಸ, ನೀರಿನ ಪ್ರಮಾಣ, ವಿವಾದ, ನ್ಯಾಯ ಮಂಡಳಿ ತೀರ್ಪು, ಸುಪ್ರೀಂಕೋರ್ಟ್ ಅಂತಿಮ ತೀರ್ಪು, ನೀರು ನಿರ್ವಹಣಾ ಮಂಡಳ ರಚನೆ, ಕಾನೂನು ಹೋರಾಟಗಳ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿರುತ್ತದೆ. ಯಾವ ಪಕ್ಷ ಆಡಳಿತದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯ -ಅನುಕೂಲವಾಗಿದೆ. ಕಾಲಾನುಕ್ರಮದಲ್ಲಿ ನದಿ ನೀರು ಬಳಕೆ ಸಂಬಂಧ ಆಯಾ ಸರ್ಕಾರಗಳ ನಿಲುವು, ರಾಜ್ಯದ ಜನತೆ, ರೈತರು ಎದುರಿಸಿದ್ದ ಸಂಕಷ್ಟಗಳ ಮಾಹಿತಿ ಇರಲಿದೆ. ಆದರೆ, ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ.

Edited By

Shruthi G

Reported By

hdk fans

Comments