ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ರೈತರಿಗೆ ಗುಡ್ ನ್ಯೂಸ್..!ಸಿಎಂ ಎಚ್'ಡಿಕೆಯ ಮಹತ್ವದ ನಿರ್ಧಾರ..!!

23 Jun 2018 5:50 PM |
7750 Report

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ಕಂತುಗಳ ಪಾವತಿಗೆ ರಾಜ್ಯ ಸರ್ಕಾರದ ಪಾಲು 655 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಕಾನೂನು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆ ನಡೆದ ಬಳಿಕ, ಮಾಧ್ಯಮಗಳಿಗೆ ಸಭೆಯಲ್ಲಿ ತೆಗೆದುಕೊಂಡು ಮಾಹಿತಿಗಳನ್ನು ಮಾಧ್ಯಮಗಳಿಗೆ ತಿಳಿಸಿದರು. ಇದೇ ವೇಳೆ ಸಭೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.

ವರ್ಗಾವಣೆ ನೀತಿ ಜಾರಿಗೆ ಒಪ್ಪಿಗೆ ನೀಡಿದ್ದು, ಜುಲೈ ಅಂತ್ಯದೊಳಗಾಗಿ ಒಟ್ಟು ನೌಕರರ ಶೇ. 6 ರ ಬದಲು ಶೇ. 4ರಷ್ಟನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆಗೆ ಸಚಿವ ಸಂಪುಟ ಅಸ್ತು ಎಂದಿದೆ. ಏಪ್ರಿಲ್ -ಮೇನಲ್ಲಿ ಆಗಬೇಕಿದ್ದ ಸರ್ಕಾರಿ ನೌಕರರ ವರ್ಗಾವಣೆ ಈಗ ನಡೆಸಲು ಒಪ್ಪಿಗೆ ನೀಡಿದೆ ಎಂದರು. ಉನ್ನತ ಶಿಕ್ಷಣ ಗುಣಮಟ್ಟ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ಗುಣಮಟ್ಟ ಸುಧಾರಣೆ ಅಭಿಯಾನಕ್ಕೆ ರಾಜ್ಯದ ಪಾಲು 460 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಒಪ್ಪಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದ 333 ಕೋಟಿ ರೂ. ಸಾಲ ಮರುಪಾವತಿ ಅವಧಿ 10 ವರ್ಷ ಮುಂದೂಡಿಕೆ. ಜತೆಗೆ ಎರಡನೆ ರನ್ ವೇ ನಿರ್ಮಾಣ ಮತ್ತು ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದಕ್ಕೆ ಹೆಚ್ಚುವರಿ ಬಂಡವಾಳ ನೆರವು ನೀಡುವ ಬದಲು ಸಾಲ ಮರುಪಾವತಿ ಅವಧಿ ಮುಂದೂಡಲು, ಚನ್ನರಾಯಪಟ್ಟಣ ತಾಲೂಕಿನ 27 ಕೆರೆ ತುಂಬಿಸುವ ಯೋಜನೆಗೆ ಒಪ್ಪಿಗೆ ನೀಡಿದೆ ಎಂದರು. ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳಿಗೆ ಹೆಸರು ಶಿಫಾರಸು ಮಾಡಲು ಸಿಎಂಗೆ ಅಧಿಕಾರ ನೀಡಿದ್ದು, ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ತಲಾ 300 ರೂ. ಮೌಲ್ಯದ ಎರಡನೇ ಜತೆ ಸಮವಸ್ತ್ರ ವಿತರಣೆ ಹಾಗೂ ಆಯಾ ಶಾಲೆಗಳ ಎಸ್‌ಡಿಎಂಸಿ ಮೂಲಕವೇ ಸಮವಸ್ತ್ರ ವಿತರಣೆ ಮಾಡಲು 115 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

 

 

Edited By

Shruthi G

Reported By

hdk fans

Comments