ಹುಟ್ಟು ಹಬ್ಬದ ಸಂಭ್ರಮ ರಾಗಾಗೆ, ಗಿಫ್ಟ್ ಸಿಕ್ಕ ಸಂಭ್ರಮ ಸಿಎಂ ಎಚ್'ಡಿಕೆ ಗೆ..!!

19 Jun 2018 5:13 PM |
4441 Report

ಹೊಸ ಬಜೆಟ್‌ ಮಂಡನೆಗೆ ಕಾಂಗ್ರೆಸ್‌ ಹೈಕಮಾಂಡ್ ನಿಂದ ಸಿಕ್ಕಿದೆ ಗ್ರೀನ್ ಸಿಗ್ನಲ್.. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸಾಬೀತಾಗಿದೆ. ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಡದ ಕಾಂಗ್ರೆಸ್ ಹೈಕಮಾಂಡ್. ಹೊಸ ಬಜೆಟ್ ಬೇಡ, ಪೂರಕ ಬಜೆಟ್ ಇದ್ರೆ ಸಾಕು ಎನ್ನುತ್ತಿದ್ದ ಸಿದ್ದರಾಮಯ್ಯಗೆ ಮುಖಭಂಗವಾಗಿದೆ.

ಮುಂದಿನ ತಿಂಗಳು ಮಂಡಿಸೋ ಹೊಸ ಬಜೆಟ್‌ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಸ್ತು ಎಂದಿದ್ದಾರೆ. ನಿನ್ನೆ ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ರಾಹುಲ್ ಗಾಂಧಿ ಅಭಯ ಕೂಡ ನೀಡಿದ್ದಾರೆ. ಇದರಿಂದ ರಾಹುಲ್ ಗಾಂಧಿ ಕೂಡ ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಟ್ಟಿಲ್ಲ. ಇದರಿಂದ ಸಿದ್ದರಾಮಯ್ಯ ಅವರು ಸರ್ಕಾರ ಆಡಳಿತದಲ್ಲಿ ಮೂಗು ತೂರಿಸದಂತೆ ಪರೋಕ್ಷ ಸೂಚನೆ ನೀಡಿದಂತಾಗಿದೆ. ಹೊಸ ಬಜೆಟ್ ಮಂಡನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದಾರೆ. ಸಿಎಂ ಎಚ್’ಡಿಕೆ ಎದುರು ಮಾಜಿ ಸಿಎಂ ಸಿದ್ದರಾಮಯ್ಯ ಮುಖಭಂಗ ಅನುಭವಿಸಿದಂತಾಗಿದೆ.  ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಹೈಕಮಾಂಡ್ ಸ್ಕೆಚ್ ಹಾಕಿದೆ ಎಂಬ ವದಂತಿಗಳು ಕೇಳಿಬಂದಿದೆ.

Edited By

Shruthi G

Reported By

hdk fans

Comments