ಜಿಟಿಡಿಯವರ ಉನ್ನತ ಶಿಕ್ಷಣ ಸಚಿವ ಸ್ಥಾನ ಕುರಿತು ಬಂದ ಟೀಕೆಗೆ ತಿರುಗೇಟು ಕೊಟ್ಟ ಸಿಎಂ ಎಚ್’ಡಿಕೆ  

10 Jun 2018 6:41 PM |
12537 Report

ಎಂಟನೇ ತರಗತಿಯಷ್ಟೇ ಓದಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡಗೆ ಉನ್ನತ ಶಿಕ್ಷಣ ಸಚಿವಾಲಯ ನೀಡಿರುವುದಕ್ಕೆ ಬಂದಿರುವ ಟೀಕೆಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಈ ರೀತಿ ತಿರುಗೇಟು ನೀಡಿದ್ದಾರೆ.  'ನಾನು ಏನು ಮಹಾನ್ ಓದಿದ್ದೇನೆ? ಆದರೂ ಮುಖ್ಯಮಂತ್ರಿಯಾಗಿ ಕೆಲಸ ಮಾಡ್ತಿಲ್ವಾ?' ಹೀಗೆಂದು ಕುಮಾರಸ್ವಾಮಿ ಸುದ್ದಿಗಾರರಿಗೆ ಪ್ರಶ್ನಿಸಿದ್ದಾರೆ.

'ಒಂದು ಇಲಾಖೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವವರ ಅಗತ್ಯವಿದೆ. ಕೆಲಸ ಮಾಡಲು ಶಿಕ್ಷಣ ಇಲಾಖೆ ಮತ್ತು ಸಣ್ಣ ನೀರಾವರಿ ಖಾತೆಗಿಂತ ದೊಡ್ಡ ಇಲಾಖೆ ಬೇಕೇ?' ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Edited By

Shruthi G

Reported By

hdk fans

Comments