ಸಚಿವ ಸಂಪುಟ ವಿಸ್ತರಣೆ : ಸಿಎಂ ಎಚ್'ಡಿಕೆಯ ಅಚ್ಚರಿ ನಿರ್ಧಾರ..!!ಯಾರಿಗೆ ಯಾವ ಖಾತೆ ಫೈನಲ್ ಆಗಿದೆ ಗೊತ್ತಾ ?

09 Jun 2018 3:36 PM |
8028 Report

ಎಚ್.ಡಿ ಕುಮಾರಸ್ವಾಮಿ ಅವರು ಸಾಕಷ್ಟು ಚಿಂತನೆಯನ್ನು ನಡೆಸಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ವತಿಯಿಂದ 25 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಕುಮಾರಸ್ವಾಮಿ ಅವರು ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಗೆ ಇಂಧನ ಖಾತೆಯನ್ನು ನೀಡಿಲ್ಲ. ಈ ಹಿಂದೆ ಹಂಚಿಕೆಯಾದಂತೆ ಇಂಧನ ಖಾತೆ ಜೆಡಿಎಸ್ ನಲ್ಲೇ ಉಳಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಪ್ರಬಲ ಖಾತೆಯನ್ನು ಬಿಟ್ಡುಕೊಟ್ಟರೆ ಮಾತ್ರ ಶಿವಕುಮಾರ್ ಗೆ ದಕ್ಕಲಿದೆ.ಅಲ್ಲಿಯವರೆಗೆ ಇದು ಮುಖ್ಯಮಂತ್ರಿ ಬಳಿಯೇ ಇರಲಿದೆ ಎಂದು ತಿಳಿದು ಬಂದಿದೆ.

ಸಿಎಂ, ಡಿಸಿಎಂ ಹಾಗೂ 25 ಸಚಿವರುಗಳಿಗೆ ಖಾತೆ ಹಂಚಿಕೆಯ ಪಟ್ಟಿ ಪ್ರಕಟ.. ಯಾರ್ಯಾರಿಗೆ ಯಾವ ಖಾತೆ ಗೊತ್ತಾ?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ – ಹಣಕಾಸು, ಅಬಕಾರಿ, ಗುಪ್ತಚರ ಇಲಾಖೆ ; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ – ಇಂಧನ, ಸಾರ್ವಜನಿಕ ಉದ್ದಿಮೆ ಖಾತೆ ; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ – ಜವಳಿ ಖಾತೆ, ಕ್ಯಾಬಿನೆಟ್ ವ್ಯವಹಾರಗಳು ; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ – ವಾರ್ತೆ, ಯೋಜನೆ ಮತ್ತು ಸಾಂಖ್ಯಿಕ ; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ – ಮೂಲ ಸೌಕರ್ಯಖಾತೆ, ಡಿಪಿಎಆರ್ ; ರಮೇಶ್ ಜಾರಕಿಹೊಳಿ – ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ; ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಖಾತೆ ; ಯು.ಟಿ.ಖಾದರ್ – ನಗರಾಭಿವೃದ್ಧಿ ಹಾಗೂ ವಸತಿ ಖಾತೆ ; ಸಾ.ರಾ.ಮಹೇಶ್ – ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ; ಜಮೀರ್ ಅಹ್ಮದ್ – ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ ; ಎನ್.ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ; ವೆಂಕಟರಾವ್ ನಾಡಗೌಡ – ಪಶುಸಂಗೋಪನಾ ಮತ್ತು ಮೀನುಗಾರಿಕೆ ; ಶಿವಾನಂದ್ ಪಾಟೀಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ; ವೆಂಕಟರಮಣಪ್ಪ – ಕಾರ್ಮಿಕ ; ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ; ಸಿ.ಎಸ್.ಪುಟ್ಟರಾಜು – ಸಣ್ಣ ನೀರಾವರಿ ಖಾತೆ ; ಡಾ.ಜಿ.ಪರಮೇಶ್ವರ್ – ಗೃಹ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ ; ಡಾ.ಜಿ.ಪರಮೇಶ್ವರ್ – ಯುವ ಸಬಲೀಕರಣ ಹಾಗೂ ಕ್ರೀಡಾ ಖಾತೆ ; ಎಚ್.ಡಿ.ರೇವಣ್ಣ – ಲೋಕೋಪಯೋಗಿ ; ಡಿ.ಕೆ.ಶಿವಕುಮಾರ್ – ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ; ಆರ್.ವಿ.ದೇಶಪಾಂಡೆ – ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ; ಬಂಡೆಪ್ಪ ಕಾಶೆಂಪೂರ್ – ಸಹಕಾರ ; ಕೆ.ಜೆ.ಜಾರ್ಜ್ – ಬೃಹತ್ ಕೈಗಾರಿಕೆ ಹಾಗೂ ಐಟಿ ಮತ್ತು ಬಿಟಿ ಖಾತೆ ; ಎನ್.ಎಚ್.ಶಿವಶಂಕರ್ ರೆಡ್ಡಿ – ಕೃಷಿ ; ಡಿ.ಸಿ.ತಮ್ಮಣ್ಣ – ಸಾರಿಗೆ ; ಕೃಷ್ಣ ಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ; ಕೃಷ್ಣ ಬೈರೇಗೌಡ – ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ; ಎಂ.ಸಿ.ಮನಗೂಳಿ – ತೋಟಗಾರಿಕೆ ಇಲಾಖೆ ; ಜಿ.ಟಿ.ದೇವೇಗೌಡ – ಉನ್ನತ ಶಿಕ್ಷಣ ;ಎಸ್.ಆರ್.ಶ್ರೀನಿವಾಸ್ – ಸಣ್ಣ ಕೈಗಾರಿಕೆ ಇಲಾಖೆ ; ಜಯಮಾಲಾ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ; ಆರ್.ಶಂಕರ್ – ಅರಣ್ಯ ಮತ್ತು ಪರಿಸರ ಮತ್ತು ಜೀವವೈವಿಧ್ಯ ಇಲಾಖೆ ; ಸಿ.ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

Edited By

Shruthi G

Reported By

hdk fans

Comments