ನಿಮ್ಮ ಸಮಸ್ಯೆಗೆ ನಾನು ಸ್ಪಂಧಿಸುವೆ... ನಾನು ರಾಕೀಯ ಪಕ್ಷದ ಅಭ್ಯರ್ಥಿಯಲ್ಲ… ನಾನು ನಿಮ್ಮ ಪ್ರತಿನಿಧಿ: ಆಗ್ನೇಯ ಶಿಕ್ಷಕ ಕ್ಷೇತ್ರ ಆಭ್ಯರ್ಥಿ. ಕೆ ನಾಗರಾಜ

31 May 2018 6:19 PM |
701 Report

ಕೊರಟಗೆರೆ ಮೇ. 31:- ಶಿಕ್ಷಕರಿಗೆ ಹಲವು ರೀತಿಯ ಸಮಸ್ಯೆಗಳು ಇವೆ ಇವುಗಳನ್ನು ಶಾಶ್ವತವಾಗಿ ನಿವಾರಿಸುವುದೇ ನನ್ನ ಗುರಿ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಕೆ ನಾಗರಾಜ ತಿಳಿಸಿದರು.        ಪಟ್ಟಣದ ಸೇರಿದಂತೆ ತಾಲೂಕಿನ ಹಲವು ಶಾಲೆಗಳಲ್ಲಿನ ಶಿಕ್ಷಕರನ್ನು ಭೇಟಿ ಮಾಡಿ ಮತಯಾನೆ ಮಾಡಿ ಮಾತನಾಡಿದರು.

       ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಬಂದಿಲ್ಲ… ನಾನು ರಾಜಕಾರಣಿಯಲ್ಲ…ನಾನು ನಿಮ್ಮೆಲ್ಲರ ಪ್ರತಿನಿಧಿಯಾಗಲು ಬಂದಿರುವ ವ್ಯಕ್ತಿ ಎಂದರು. ಎಲ್ಲಾ ಇಲಾಖೆಯಲ್ಲಿಯೂ ಮಹತ್ತರ ಬದಲಾವಣೆಯಾದರೂ ಸಹ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ವೇತನ ತಾರತಮ್ಯ ನಿವಾರಣೆಯಾಗಿಲ್ಲ.. ಕುಮಾರನಾಯ್ಕ ವರದಿಯನ್ನು ಅನುಷ್ಠಾನಕ್ಕೆ ಹೋರಾಟಗಳನ್ನು ಮಾಡುವುದು ಸೇರಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವವರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಉದ್ಯೋಗ ಖಾಯಂ, ಜ್ಯೋತಿ  ಸಂಜೀವನಿ ಯೋಜನೆಯನ್ನು ಅನುಧಾನಿದ ಮತ್ತು ಖಾಸಗಿ ಶಾಲೆ ಶಿಕ್ಷಕರಿಗೂ ಸರ್ಕಾರ ನೀಡವಂತೆ ಒತ್ತಾಯ ಮಾಡುವುದಾಗಿ ಹೇಳಿದರು.

       ಪಟ್ಟಣದ ಸರ್ಕಾರಿ ಪದವಿ ಕಾಲೇಜು, ಪದವಿಪೂರ್ವ ಕಾಲೇಜು,ಬಾಲಕಿಯ ಪ್ರೌಢಶಾಲೆ, ಕಾಳಿದಾಸ ಪ್ರೌಢಶಾಲೆ, ರವೀಂದ್ರಭಾರತಿ ಪ್ರೌಢಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಭೇಟಿ ನೀಡಿದರು.

       ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ ಪಾಂಡುರಂಗ, ಶಿಕ್ಷಕರಾದ ಶೋಭಾ ರಾಣಿ, ಯುಮುನಾರಾಣಿ, ಹೆಚ್.ಆರ್ ಪ್ರಕಾಶ್, ಎನ್.ಎಸ್ ಮೈಲಾಪರಪ್ಪ, ಎಂ.ಆರ್ ಶ್ರೀನಿವಾಸ ಮೂರ್ತಿ, ಕೃಷ್ಣಪ್ಪ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments