ನಾವು 5 ವರ್ಷ ಆಡಳಿತವನ್ನುಯಾವುದೇ ಗೊಂದಲವಿಲ್ಲದೇ ನಡೆಸುತ್ತೇವೆ ಉಪಮುಖ್ಯಂತ್ರಿ ಪರಂ

30 May 2018 8:24 PM |
1305 Report

ಕೊರಟಗೆರೆ ಮೇ. 30:-  ರಾಜ್ಯದ ಜನ ನಮ್ಮ ಸರ್ಕಾರದ ಬಗ್ಗೆ ಅನುಮಾನ ಪಡುವುದು ಬೇಡ ನಾವು 5 ವರ್ಷ ಅಧಿಕಾರ ಪೂರೈಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದರು.      ಪಟ್ಟಣದಲ್ಲಿ  ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆಯಲ್ಲಿ ‘ಚೈತನ್ಯ ಯಾತ್ರೆ’ ಕಾರ್ಯಕ್ರಮದಲ್ಲಿ  ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

       ಕ್ಷೇತ್ರದ ಜನರು ನನ್ನಿಂದ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ, ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಪ್ರತೀ ಗ್ರಾಮಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಪ್ರತಿಯೊಂದ ಸಮಸ್ಯೆಯನ್ನು ಅರಿತ್ತಿದ್ದು ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಬೇಕಿದ್ದು ಇವೆಲ್ಲಾ ಸೇರಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತೇನೆ ಎಂದರು.

       ರೈತರ ಸಾಲ ಮನ್ನಾಕ್ಕೆ ಕಾಂಗ್ರೇಸ್ ಸರ್ಕಾರ ಬದ್ದವಾಗಿದೆ, ಕಾಂಗ್ರೇಸ್ ಸರ್ಕಾರ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವಿತ್ತು ಆದರೆ ಜನರ ತೀರ್ಪು ಬೇರೆಯಾಗಿ ಯಾರಿಗೂ ಸ್ಪಷ್ಟ ಬಹುತ ಬರದ ಹಿನ್ನೆಲೆಯಲ್ಲಿ ರಾಜ್ಯದ ಹಿತಕ್ಕಾಗಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಯಾವುದೇ ಗೊಂದಲವಿಲ್ಲದೇ ಎಲ್ಲಾ ಸಮುದಾಯದ ಜನರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ಸಂಪುಟದಲ್ಲಿ ಗೊಂದಲವಿಲ್ಲ:- ನಮ್ಮ ಮತ್ತು ಜೆಡಿಎಸ್ ನಡುವೆ ಯಾವುದೇ ಗೊಂದಲವಿಲ್ಲ  ಕಾಂಗ್ರೇಸ್-22 ಮತ್ತು ಜೆಡಿಎಸ್ 11 ಮಂತ್ರಿಗಳು ಸೇರಿ ಒಟ್ಟು 34 ಮಂತ್ರಿಮಂಡಲ ನಿಶ್ವಯಿಸಿದ್ದು ನಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಎಲ್ಲರಿಗೂ ಒಂದೇ ಪರಿಹಾರ:- ಎತ್ತಿನ ಹೊಳೆ ಯೋಜನೆ ಅನುಷ್ಠಾನದಲ್ಲಿ ಜಮೀನು ಕಳೆದುಕೊಳ್ಳುವಂತಹ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೊರಟಗೆರೆ ರೈತರಿಗೂ ಏಕರೂಪ ಪರಿಹಾಕ್ಕೆ ಸರ್ಕಾರ ಬದ್ಧವಾಗಿದ್ದು ಎಲ್ಲರಿಗೂ ಒಂದೇ  ಪರಿಹಾರ ನೀಡಲಾಗುವುದು.

ನಿರೀಕ್ಷೆಗೂ ಮೀರಿದ ಆಡಳಿತ ನೀಡುತ್ತೇವೆ:- ನಮ್ಮ ಮೈತ್ರಿ ಸರ್ಕಾರದ ಮೇಲೆ ಹಲವು ನಿರೀಕ್ಷೆಗಳಿವೆ… ಅದೇ ರೀತಿ ಅನುಮಾನಗಳು ಇವೆ ಇವೆರಡನ್ನೂ ಮೆಟ್ಟಿ ನಿಂತು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ನಮ್ಮ ಮೈತ್ರಿ ಸರ್ಕಾರ ಬದ್ಧವಾಗಿದ್ದು ಪಕ್ಷಭೇದವಿಲ್ಲದೇ ಅಭಿವೃದ್ಧಿಯೊಂದೇ ನಮ್ಮ ಅಜೆಂಡಾ ಎಂದರು.     

ವರಿಷ್ಠರಿಗೆ ನಾನು ಋಣಿ:- ನನಗೆ ಎಲ್ಲರೂ ಬೇರೆಡೆ ಸ್ಪರ್ಧೆ ಮಾಡಲು ತಿಳಿಸಿದ್ದರು ನಾನು ಇಲ್ಲೇ ಸ್ಪರ್ಧೇ ಮಾಡುತ್ತೇನೆ ಎಂದು ಎಂದು ಮನವಿ ಮಾಡಿದ್ದೆ ನನ್ನ ಮನ್ನಣೆಯನ್ನು ಸ್ವೀಕರಿಸಿ ಇಲ್ಲೇ ಸ್ಪರ್ಧೆ ಮಾಡಲು ಅವಕಾಶ ನೀಡಿದ್ದಕ್ಕೆ ನಾನು ಚಿರ ಋಣಿಯಾಗಿದ್ದು ಅದೇ ರೀತಿ  ಮತದಾರರಿಗೂ ನಾನು ಋಣಿ ಎಂದರು.

       ಈ ಬಾರಿ ನನ್ನ ಚುನಾವಣೆಯಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಯುವಕರು ಸ್ವಯಂ ಪ್ರೇರಿತರಾಗಿ ಮತಯಾನೆ ಮಾಡಿ ನನ್ನ ಗೆಲುವಿಗೆ ಕಾರಣಾಗಿದ್ದು ಇವರೆಲ್ಲರಿಗೂ ಅಭಿನಂಧಿಸುತ್ತೇನೆ  ಎಂದು ಹೇಳಿದರು.

       ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದಂತಹ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಗೊಂದಲವಿಲ್ಲದೇ ಚುನಾವಣೆ ನಡೆಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

Edited By

Raghavendra D.M

Reported By

Raghavendra D.M

Comments