ರಾಷ್ಟ್ರೀಯ ಪಕ್ಷಗಳಿಗೆ ಬೆಚ್ಚಿ ಬೀಳಿಸಿದ ಕರುನಾಡ ನಾಡಿ ಮಿಡಿತ...ತೆನೆ ಹೊತ್ತ ಪಕ್ಷಕ್ಕೆ ಗೆಲುವು

11 May 2018 5:06 PM |
24912 Report

ಕರ್ನಾಟಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ.ಪತ್ರಿಕೆಗಳು ಚುನಾವಣಾ ಸಮೀಕ್ಷೆಗಳನ್ನು ಮಾಡಿದ್ದು, ಇವುಗಳ ನಡುವೆಯೇ ಈ ಬಾರಿ ಎಲ್ಲಾ ಸಮೀಕ್ಷೆಗಳು ಉಲ್ಟಾ ಹೊಡೆದಿದೆ ಎನ್ನುವ ಅಭಿಪ್ರಾಯಗಳು ಭಾರೀ ಚರ್ಚೆಯಲ್ಲಿವೆ. ರಾಷ್ಟ್ರೀಯ ಪಕ್ಷಗಳಿಗೆ ಬೆಚ್ಚಿ ಬೀಳಿಸಿದೆ ಕರುನಾಡ ನಾಡಿ ಮಿಡಿತ. ಗೆಲಿವು ಯಾರಾ ಮೂಡಿಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್...

ಕಾಂಗ್ರೆಸ್ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡಿದೆ :

ಈ ಬಾರಿ ಕಾಂಗ್ರೆಸ್ ಮತ ಕಳೆದುಕೊಳ್ಳಲು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಗೂಂಡಾಗಿರಿಯೇ ಮುಖ್ಯಕಾರಣವಾಗಲಿದೆ ಎನ್ನುವ ಮಾತುಗಳು ಭಾರೀ ಚರ್ಚೆಯಲ್ಲಿವೆ. ಉಳಿದಂತೆ ಕಾಂಗ್ರೆಸ್ ನ ದಲಿತ ವಿರೋಧಿ ನೀತಿಗಳಿಂದಾಗಿ ದಲಿತರ ಬೆಂಬಲವನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ. ಕಾಂಗ್ರೆಸ್ ಸರಕಾರ ಕೇವಲ ಭಾಗ್ಯಗಳನ್ನು ತೋರಿಸಿ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ದಲಿತರ ಅಭಿವೃದ್ಧಿಗಾಗಿ ಇರಿಸಲಾಗಿದ್ದ ಅನುದಾನವನ್ನು ರೈತರ ಸಾಲ ಮನ್ನಾಕ್ಕೆ ಬಳಸಿರುವುದರಿಂದಾಗಿ ಕಾಂಗ್ರೆಸ್ ಸರಕಾರ ರಾಜ್ಯದ ಬಹುಸಂಖ್ಯಾತರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯರು ಬಹುತೇಕ ಪ್ರಕರಣಗಳ ಬಗ್ಗೆ ಅಸಡ್ಡೆಯಿಂದ ಉತ್ತರಿಸಿರುವುದೂ ಜನರಲ್ಲಿ ನೋವನ್ನುಂಟುಮಾಡಿದೆ ಎನ್ನಲಾಗಿದೆ.

ಬಿಜೆಪಿಯ ಸಂಘಟನೆಗಳ ಕ್ರೂರ ನಿಲುವುಗಳು ಈ ಬಾರಿ ಬಿಜೆಪಿಗೆ ಭಾರೀ ಹೊಡೆತ :

ಇನ್ನು ರಾಜ್ಯ ಬಿಜೆಪಿಯ ಸಂಘಟನೆಗಳ ಕ್ರೂರ ನಿಲುವುಗಳು ಈ ಬಾರಿ ಬಿಜೆಪಿಗೆ ಭಾರೀ ಹೊಡೆತವನ್ನು ನೀಡಲಿದೆ ಎನ್ನುವ ಮಾಹಿತಿಗಳು ಲಭಿಸಿವೆ.ಕೋಮುಗಲಭೆ, ಕೊಲೆ, ದಾನಮ್ಮಳಂತಹ ಮುಗ್ಧೆಯ ಅತ್ಯಾಚಾರದಲ್ಲಿ ಬಿಜೆಪಿಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಗಳಾಗಿರುವುದು ಬಿಜೆಪಿಗೆ ದೊಡ್ಡಹೊಡೆತವನ್ನುನೀಡಿದೆ ಎಂದು ಹೇಳಲಾಗಿದೆ. ಈಗಾಗಲೇ ಬಿಜೆಪಿ ಆಯೋಜಿಸಿದ್ದ ಹಲವು ಚುನಾವಣಾ ಪ್ರಚಾರ ಸಭೆಯಲ್ಲಿ ರಾಷ್ಟ್ರೀಯ ನಾಯಕರಿಗೇ ಖಾಲಿಕುರ್ಚಿಗಳ ದರ್ಶನವಾಗಿದ್ದು, ಜನತೆಯ ವಿಶ್ವಾವನ್ನು ಬಿಜೆಪಿ ಕಳೆದುಕೊಂಡಿದೆ ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಬಿಜೆಪಿನಾಯಕರ ಸಂವಿಧಾನ ವಿರೋಧಿ ಹೇಳಿಕೆಗಳು ಮುಖ್ಯವಾಗಿ ಬಿಜೆಪಿಗೆ ದೊಡ್ಡಹೊಡೆತವನ್ನೇ ನೀಡಲಿದೆ ಎನ್ನಲಾಗಿದೆ.

ಜನರ ವಿಶ್ವಾಸಗಳಿಸುತ್ತಿರುವ ಜೆಡಿಎಸ್ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ :

ರಾಜ್ಯದಲ್ಲಿ ಕಾಂಗ್ರೆಸ್- ಬಿಜೆಪಿಯ ಆಡಳಿತ್ತಕೆ ಬೇಸತ್ತಿರುವ ರಾಜ್ಯದ ಜನರು ಜೆಡಿಎಸ್ ನತ್ತ ವಾಲ್ಲಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜೆಡಿಎಸ್ ಗೆಲುವಿಗಾಗಿ ಈ ವಯಸ್ಸಿನಲ್ಲೂ ಚುರುಕಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಬಿಎಸ್ಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಜೆಡಿಎಸ್ ಗೆ ಆನೆ ಬಲ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ತಿಕ್ಕಾಟಕ್ಕೆಪರ್ಯಾಯಶಕ್ತಿಯಾಗಿ ಜೆಡಿಎಸ್ ಅಧಿಕಾರವನ್ನು ಹಿಡಿಯಲಿದೆ ಎಂಬ ಮಾತುಗಳು ಕೇಳಿ ಬಂದಿವೆ.ಅಲ್ಲದೆ ಹಲವು ಅನ್ಯ ಪಕ್ಷದ ಪ್ರಭಾವಿ ಮುಖಂಡರು ಜೆಡಿಎಸ್ ಗೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಪ್ಲಸ್ ಪಾಯಂಟ್ ಆಗಲಿದೆ. ಜೆಡಿಎಸ್ ಅಭ್ಯರ್ಥಿಗಳು ಸಹ ತಮ್ಮ ಕ್ಷೇತ್ರಗಳಲ್ಲಿ ಎಲ್ಲ ಚಟುವಟಿಕೆಗಳಲು ತೊಡಗಿಕೊಂಡಿದ್ದಾರೆ. ರಾಜ್ಯದೆಲ್ಲೆಡೆ ಅಬ್ಬರದ ಪ್ರಚಾರ ನಡೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜನರ ಮನ ಗೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಸಮಾವೇಶಕ್ಕೆ ಮತ್ತು ಪ್ರಚಾರದ ವೇಳೆ ಹರಿದು ಬಂದ ಜನಸಾಗರ. ಅದರಲ್ಲೂ ರಾಜ್ಯದೆಲ್ಲೆಡೆ ಕುಮಾರಸ್ವಾಮಿ ಯವರ ವರ್ಚಸ್ಸು ರಾರಾಜಿಸುತ್ತಿರುವುದರಿಂದ ಈ ಬಾರಿ ಜೆಡಿಎಸ್ ರಾಜ್ಯದಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನಲಾಗಿದೆ.

Edited By

Shruthi G

Reported By

hdk fans

Comments