ನನ್ನ ರಾಜಕೀಯದಲ್ಲಿ ಬೆಳೆಸಿದ ಊರು ಹೊಳವನಹಳ್ಳಿ..... ನಾನೂ ಎಂದೂ ಈ ಊರಿಗೆ ಚಿರರಣಿ.... ಈ ಬಾರಿ ಮೊದನೆ ಪ್ರಾಶಿತ್ಯವಾಗಿ ಹೊಳವನಹಳ್ಳಿಯನ್ನು ಗ್ರಾ.ಪಂ ನಿಂದ ಪ.ಪಂ ಮೇಲ್ದರ್ಜೆಗೆ ಹೇರಿಸುತ್ತೇನೆ ಶಾಸಕ ಪಿ.ಆರ್ ಸುಧಾಕರ್ ಲಾಲ್

09 May 2018 8:07 PM |
1462 Report

ಕೊರಟಗೆರೆ:- ನನಗೆ ರಾಜಕಿಯ ಭವಿಷ್ಯದ ಜನ್ಮ ನೀಡಿದ ಹೊಳವನಹಳ್ಳಿ ಜಿಪಂ ಕ್ಷೇತ್ರ. ಕೊರಟಗೆರೆ ಕ್ಷೇತ್ರದಲ್ಲಿ ನಾನು ಗೆದ್ದ ಮರುಕ್ಷಣವೇ ಹೊಳವನಹಳ್ಳಿ ಗ್ರಾಪಂಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದೇ ನನ್ನ ಮೊದಲ ಗುರಿ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ಭರವಸೆ ನೀಡಿದರು.


      ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಅಕ್ಕಿರಾಂಪುರ ಮತ್ತು ಬೈಚಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬುಧವಾರ  ಮತಯಾಚನೆ  ಮಾಡಿ  ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
      2013 ಚುನಾವಣೆಯಲ್ಲಿ ನಾನು ಗೆದ್ದ ಮರುಕ್ಷಣದಿಂದ ಪ್ರತಿಯೊಂದು ಇಲಾಖೆಗೆ ಬರುವ ಅನುಧಾನವನ್ನು ರೈತರಿಗೆ ಮತ್ತು ಬಡಜನರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡಿದ್ದೇನೆ. ನನ್ನ 5ವರ್ಷದ ಅವಧಿಯಲ್ಲಿ ಒಂದು ನಯಾಪೈಸೆಯೂ ಸಹ ಸರಕಾರಕ್ಕೆ ಹಿಂದೆ ಕಳುಹಿಸಿಲ್ಲ..... ಕೊರಟಗೆರೆ ಕ್ಷೇತ್ರದಿಂದ ಅನುಧಾನ ಹಿಂದಕ್ಕೆ ಹೋಗಿರುವುದು 2013ರ ಚುನಾವಣೆಯ ಹಿಂದೆ ಹೋಗಿರುವ ಅನುಧಾನವನ್ನು ನಾನು ಮಾಡಲು ಸಾದ್ಯವೇ ಎಂದು  ಹರಿಹಾಯ್ದರು.
       ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಬೇಕು. ರಾಜಕೀಯ ವಿರೋಧಿಗಳ ಸುಳ್ಳು ಭರವಸೆ ಮತ್ತು ಆಶ್ವಾಸನೆಯನ್ನು ನಂಬಬಾರದು. ಕ್ಷೇತ್ರದಲ್ಲಿ ಶಾಸಕನಿಲ್ಲದೇ ಯಾವುದೇ ಕೆಲಸ ಆಗಲು ಸಾಧ್ಯವಿಲ್ಲ. ಕಳೆದ 5ವರ್ಷದಿಂದ ನಾನು ಮಾಡಿದ ಕೆಲಸವನ್ನು 5 ತಿಂಗಳ ಹಿಂದೆ ಬಂದು ನಾವು ಮಾಡಿದ್ದೇವೆ ಎಂದು ಸುಳ್ಳು ಸುದ್ದಿ  ಹಬ್ಬಿಸುತ್ತಿದ್ದಾರೆ ಇವರನ್ನು ನಾನು ಏನೆಂದು ಕರೆಯಲಿ ಎಂದು ಕುಟುಕಿದರು. 
     ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕರಕಲಘಟ್ಟ, ದುಗ್ಗೇನಹಳ್ಳಿ, ಹೊಳವನಹಳ್ಳಿ, ಇಂದಿರಾಕಾಲೋನಿ, ಜನತಾಕಾಲೋನಿ, ಹನುಮೇನಹಳ್ಳಿ, ಗೋಡ್ರಹಳ್ಳಿ, ಸೋಂಪುರ, ಅಕ್ಕಿರಾಂಪುರ, ಬೈಚಾಪುರ, ಹೊಸಹಳ್ಳಿ, ಕಾದಲಾಪುರ, ಚಿಕ್ಕನಹಳ್ಳಿ, ಗ್ರಾಮ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮದಲ್ಲಿ ಮಾಜಿ ತಾಪಂ ಸದಸ್ಯ ಪ್ರಕಾಶ್, ಜೆಡಿಎಸ್ ಮುಖಂಡ ಕಿಶೋರ್ ಮತ್ತು ಶಾಸಕ ಪಿ.ಆರ್.ಸುಧಾಕರಲಾಲ್ ಮತಯಾಚನೆ ಮಾಡಿದರು.
     ಮತಯಾಚನೆ ವೇಳೆಯಲ್ಲಿ ತಾಪಂ ಸದಸ್ಯ ಕೆಂಪಣ್ಣ, ಜೆಡಿಎಸ್ ಯುವಅಧ್ಯಕ್ಷ   ಕೋಡ್ಲಹಳ್ಳಿ ವೆಂಕಟೇಶ್, ಗ್ರಾ.ಪಂ ಸದಸ್ಯರಾದ ಆರ್.ಜಿ ಬಸವರಾಜು, ನಯಾಜ್, ವೆಂಕಟರೆಡ್ಡಿ,  ರಾಜಣ್ಣ,ಮಾಜಿ ಸದಸ್ಯ ಗುಂಡಣ್ಣ,  ಮುಖಂಡರಾದ ಹುಚ್ಚಣ್ಣ, ನಳೀನಾ,  ಓಬಳೇಶ್ , ನಾಸೀರ್, ಮರುಡಪ್ಪ, ಕೆ.ರಂಗಪ್ಪ, ಕಾಮಣ್ಣ, ನಜೀರ್, ನವಾಬ್   ಹನುಮಂತರಾಯಪ್ಪ,    ಸಮೀವುಲ್ಲಾ, , ಮೈಲಾರಪ್ಪ, ದೊಡ್ಡಯ್ಯ, ಸುರೇಶ್, ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ್, ರಾಮಚಂದ್ರಯ್ಯ, ತಿಮ್ಮೆಎಲಗಯ್ಯ ಸೇರಿದಂತೆ ಇತರರು ಇದ್ದರು. ಇತರರು ಇದ್ದರು.
 

Edited By

Raghavendra D.M

Reported By

Raghavendra D.M

Comments