ಮಣ್ಣಿನ ಮಗನನ್ನು ಬೆಂಬಲಿಸುತ್ತಿರುವ ಮಂಡ್ಯದ ಮಗ

07 May 2018 1:39 PM |
9704 Report

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜಕೀಯದ ಅಖಾಡ ರಂಗೇರುತ್ತಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಅಂಬರೀಶ್ ಅವರಿಗೆ ದೇವೇಗೌಡರು ಮತ್ತು ನಮ್ಮ ಬಗ್ಗೆ ಅಭಿಮಾನವಿದೆ. ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನನ್ನು ತಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಜನಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಭಿಲಾಷೆ ಎಂದಿದ್ದಾರೆ.

ಈಗಿನ ವ್ಯವಸ್ಥೆ ಸರಿಪಡಿಸಲು ತಾವೇ ಮುಖ್ಯಮಂತ್ರಿಯಾಗುವಂತೆ ಅಂಬರೀಶ್ ಸಲಹೆ ನೀಡಿದ್ದಾರೆಂದು ಎಚ್‍ಡಿಕೆ ಬಹಿರಂಗ ಹೇಳಿಕೆ ನೀಡಿದ್ರು. ಇದ್ರಿಂದ ಅಂಬರೀಶ್ ಆಪ್ತರು ಜೆಡಿಎಸ್ ಕಡೆ ಮುಖ ಮಾಡಿದ್ದು, ಅವರ ಪರ ಕೆಲಸ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.ಇತ್ತ ಅಂಬರೀಶ್ ಕುಮಾರಸ್ವಾಮಿ ಭೇಟಿ ಬೆನ್ನಲ್ಲೆ ಮಂಡ್ಯದಲ್ಲಿ ಜೆಡಿಎಸ್ ಮುಖಂಡರು ಆಪರೇಷನ್ ಜೆಡಿಎಸ್ ಗೆ ಮುಂದಾಗಿದ್ದಾರೆ.

ಅಂಬಿ ಬೆಂಬಲಿಗರು ಜೆಡಿಎಸ್ ನಾಯಕರ ಜೊತೆ ಮಾತುಕತೆ ಆರಂಭಿಸಿದ್ದಾರೆ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಯಾರ ಪರವಾಗಿ ಪ್ರಚಾರಕ್ಕೂ ಹೋಗಲ್ಲ ಎಂದಿದ್ದಾರೆ. ಈ ಮೂಲಕ ಸೈಲೆಂಟ್ ಆಗಿ ದಾಳ ಉರುಳಿಸಿ ತಾವು ಜೆಡಿಎಸ್ ಪರ ಒಲವು ಹೊಂದಿದ್ದೇನೆ ಎಂಬ ಮೆಸೇಜನ್ನು ತಮ್ಮ ಬೆಂಬಲಿಗರಿಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಅಂಬರೀಶ್ ಮತ್ತು ಜೆಡಿಎಸ್ ನಡೆಯಿಂದ ಈಗ ಕಾಂಗ್ರೆಸ್ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಂಬರೀಶ್ ಭೇಟಿ ಕುರಿತು ಸಿಎಂ ಸಿದ್ದರಾಮಯ್ಯ ವ್ಯಂಗ್ಯಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಅವರಲ್ಲಿ ಈಗ ವ್ಯಂಗ್ಯ, ಕೋಪ, ಆಕ್ರೋಶ ಎಲ್ಲವೂ ಎದ್ದು ಕಾಣುತ್ತಿದೆ. ಜನ ಈಗಾಗಲೇ ಸಿದ್ದರಾಮಯ್ಯ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

 

Edited By

hdk fans

Reported By

hdk fans

Comments