ರಾಷ್ಟ್ರೀಯ ಪಕ್ಷಗಳಾದ 'ಕೈ-ಕಮಲ' ಬಿಟ್ಟು 'ತೆನೆ' ಹೊತ್ತ ಪ್ರಭಾವಿ ಮುಖಂಡರು...!!

05 May 2018 10:21 AM |
5104 Report

ಕ್ಷೇತ್ರದ ಜನತೆ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಿರ್ಲಕ್ಷ್ಯತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗೆಲ್ಲಿಸುವಂತೆ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಹುತ್ತೂರು, ಒಡೆಯರಪಾಳ್ಯ ,ಹುಣಸೇಪಾಳ್ಯ, ಬೈಲೂರು ಇನ್ನಿತರ ಕಡೆಗಳಲ್ಲಿ ಮತಯಾಚಿಸಿದ ಬಳಿಕ ಒಡೆಯರಪಾಳ್ಯ ಗ್ರಾಮದಲ್ಲಿ ರೋಡ್ ಶೋ ನಡೆಸಿ ನಂತರ ಮಾತನಾಡಿದ ಅವರು, ಹನೂರು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಇದುವರೆಗೂ ಆಯ್ಕೆಗೊಂಡ ಶಾಸಕರು ಕ್ಷೇತ್ರದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲರಾಗಿದ್ದು, ಕ್ಷೇತ್ರ ಅಭಿವೃದ್ಧಿಗೆ ಪ್ರಯತ್ನ ನಡೆಸಿಲ್ಲ. ಕ್ಷೇತ್ರದ ಜನತೆ ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಹೋಬಳಿ ಕೇಂದ್ರಸ್ಥಾನಗಳಲ್ಲಿ ಅಗತ್ಯ ಸೌಕರ್ಯದ ಕೊರೆತೆ ಇದೆ. ಇದರಿಂದ ಕ್ಷೇತ್ರದ ಜನತೆ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಿರ್ಲಕ್ಷ್ಯತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ನನಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕುಮಾರಸ್ವಾಮಿಯವರ ಜನಪ್ರಿಯ ಕೆಲಸ ಕಾರ್ಯಗಳಾದ ಗ್ರಾಮ ವಾಸ್ತವ್ಯ, ಲಾಟರಿ ನಿಷೇಧ, ಸಾರಾಯಿ ನಿಷೇಧ ಮತ್ತು ಜನಪ್ರಿಯ ಪ್ರಮುಖ ಪ್ರಣಾಳಿಕೆ ಅಂಶಗಳಾದ ರೈತರ ಸಾಲ ಮನ್ನಾ, 24 ಗಂಟೆ ವಿದ್ಯುತ್ ಪೂರೈಕೆ, ಹಿರಿಯ ನಾಗರೀಕರ ಮತ್ತು ವಿಶೇಷ ಚೇತನರ ಮಾಸಿಕ ವೇತನ ಹೆಚ್ಚಳ ಮುಂತಾದ ಭರವಸೆಗಳಿಂದಾಗಿ ಜನರು ಜೆಡಿಎಸ್ ನತ್ತ ವಾಲುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಹುತ್ತೂರು ಗ್ರಾಪಂ ಅಧ್ಯಕ್ಷ ಬಸವಣ್ಣ, ಪಿ.ಜಿ.ಪಾಳ್ಯ ಗ್ರಾಪಂ ಉಪಾಧ್ಯಕ್ಷ ಸಿದ್ದರಾಜು, ಕುಮಾರ್, ನಾಗರಾಜು, ಮಲ್ಲು, ಶಿವದಾಸ, ಪರಶಿವ, ಕೆಂಪಮ್ಮ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಅಭ್ಯರ್ಥಿ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Edited By

Shruthi G

Reported By

hdk fans

Comments