ಬಿಜೆಪಿಗೆ ಎಲ್ಲೆಡೆ ಉತ್ತಮ ವಾತಾವರಣವಿದೆ: ಮಾಜಿ ಶಾಸಕ ವೀರಭಧ್ರಯ್ಯ

03 May 2018 1:47 PM |
470 Report

ಕೊರಟಗೆರೆ ಮೇ. 2:-  ರಾಜ್ಯದಲ್ಲಿ ಈ ಬಾರಿ ರಾಜಕೀಯ ವಾತಾವರಣ ಬದಲಾಗಿದೆ ಬಿಜೆಪಿಯ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ ಎಂದು ಮಾಜಿ ಶಾಸಕ ಸಿ. ವೀರಭದ್ರಯ್ಯ ತಿಳಿಸಿದರು.        ತಾಲೂಕಿನ ಎಲೆರಾಂಪುರ ವೀರಭದ್ರಸ್ವಾಮಿ ದೇವಾಲಯದ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

       ನಾನು 60 ವರ್ಷ ರಾಜಕಾರಣ ಮಾಡಿದ್ದೇನೆ ಒರ್ವ ರಾಜಕಾರಣಿ ಸಾಮಾನ್ಯ ಜನರ ಸಮಸ್ಯೆಗಳನ್ನು ಅರಿತು ಅವರಿಗೆ ಸ್ಪಂಧಿಸಿದ್ದರೆ ಜನರು ಅವರನ್ನು ಗುರುತಿಸುತ್ತಾರೆ ಎಂದರು.

       ಕೊರಟಗೆರೆ ವಿಧಾನ ಸಭಾ ಬಿಜೆಪಿ ಅಭ್ಯರ್ಥಿಯಾಗಿರುವ ವೈ.ಹೆಚ್ ಹುಚ್ಚಯ್ಯ ಉತ್ತಮ ನಡೆತೆಯುಳ್ಳ, ಸ್ವಚ್ಚ ರಾಜಕಾರಣಿ ರಾಜ್ಯಧ್ಯಕ್ಷ ಬಿ.ಎಸ್ ಯಡ್ಯೂರಪ್ಪ ಕ್ಷೇತ್ರದಲ್ಲಿ ಹಲವು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದರೂ ಹುಚ್ಚಯ್ಯರಿಗೆ ಟಿಕೆಟ್ ನೀಡಿದ್ದು ಪ್ರತಿಯೊಬ್ಬರೂ ಅವರ ಬೆಂಬಲಕ್ಕೆ ನಿಂತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದು ಮಾನವಿ ಮಾಡಿದರು.

       ಕೇಂದ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡ್ಯೂರಪ್ಪರ ರಾಜ್ಯ ನಿರ್ಮಾಣಕ್ಕೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಿದ್ದು ಇದನ್ನು ಪ್ರತಿಯೊಬ್ಬ ಮತದಾರರೂ ನಿರ್ಧಾರ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ವೈ.ಹೆಚ್ ಹುಚ್ಚಯ ಹೇಳಿದರು.

       ಇದೇ ಸಂದರ್ಭದಲ್ಲಿ ಮಾಜಿ ತಾ.ಪಂ ಸದ್ಯರೂ ಜೆಡಿಎಸ್ ನ ಜಿಲ್ಲಾ ಎಸ್ ಸಿ ಘಟಕದ ಕಾರ್ಯಧ್ಯಕ್ಷ ಹೆಚ್. ಮುನಿಯಪ್ಪ ಜೆಡಿಎಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿ ಮಾತನಾಡಿ.. ನಾನು ಕಳೆದ 20 ವರ್ಷದಿಂದಲೂ ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದ ಪಕ್ಷ ನನಗೆ ರಾಜಕೀಯವಾಗಿ ನನಗೆ ಯಾವುದೇ ಅವಕಾಶಗಳನ್ನು ಮಾಡಿಕೊಡಲಿಲ್ಲ ಮತ್ತು ದಲಿತ  ಎನ್ನುವ ಕಾರಣಕ್ಕೆ ನಮಗೆ ಮನ್ನಣೆಯನ್ನು ನೀಡದೇ ಇದ್ದ ಕಾರಣ ನಾನು ಜೆಡಿಎಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ನನ್ನಂತೆಯೇ ನನ್ನ ಬೆಂಬಲಿಗರು ಬಿಜೆಪಿ ಅಭ್ಯರ್ಥಿಯ ಪರವಾಗಿ ಇರುತ್ತೇವೆ ಎಂದರು. 

       ಕೋಳಾಲ ಹೋಬಳಿಯ ಅಧ್ಯಕ್ಷ ಪ್ರಸನ್ನಕುಮಾರ್, ಆಳಾಲಸಂದ್ರ ಶಕ್ತಿ ಕೇಂದ್ರದ ಕುಮಾರ್, ತಾಲೂಕು ಒಬಿಸಿ ಉಪಾಧ್ಯಕ್ಷ ಸುರೇಶ್, ತಾಲೂಕು ಎಸ್ ಸಿ ಮೋರ್ಚಾ ಅಧ್ಯಕ್ಷ ಬ್ಯಾಲ್ಯ ಮೂರ್ತಿ, ಉಪಾಧ್ಯಕ್ಷ ಬಾಲಕೃಷ್ಣ, ಬಿ.ಕೆ ನರಸಿಂಹಮೂರ್ತಿ, ಎಸ್ ಸಿ ಮೋರ್ಚಾ ಕಾರ್ಯದರ್ಶಿ ಹನುಂತರಾಯಪ್ಪ,  ಮುಖಂಡರಾದ ರುದ್ರೇಶ್, ಕಿರಣ್ ಕುಮಾರ್, ನಾಗೇಶ್, ಮೋರಗಾನಹಳ್ಳಿ ಲೋಕೇಶ್, ಓಬಳೇಶ್ದ ಸೇರಿದಂತೆ ಇತರರು ಇದ್ದರು. 

Edited By

Raghavendra D.M

Reported By

Raghavendra D.M

Comments