ಜೆಡಿಎಸ್ ನ ಏಳು ಬಂಡಾಯ ಶಾಸಕರ ಹೆಗಲೇರಿದೆ ಶನಿ... ದೊಡ್ಡಗೌಡ್ರು ತೋಡಿದ್ದಾರೆ ಖೆಡ್ಡಾ...!!

02 May 2018 11:22 AM |
29714 Report

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಜೆಡಿಎಸ್​ನಿಂದ ಕಾಂಗ್ರೆಸ್​​ಗೆ ಹೋದ ಮಾಜಿ ಶಾಸಕರನ್ನು ಬುಡ ಸಮೇತ ಕಿತ್ತು ಹಾಕಲು ಮುದಾಗಿದ್ದಾರೆ . ಹೀಗಾಗಿ ರೆಬೆಲ್​​ಗಳನ್ನ ಸೋಲಿಸಲು ದೊಡ್ಡಗೌಡ್ರು ಖೆಡ್ಡಾ ತೋಡಿದ್ದಾರೆ. ಜಮೀರ್, ಬಾಲಕೃಷ್ಣ, ಚಲುವರಾಯಸ್ವಾಮಿ ಸೇರಿದಂತೆ ಏಳೂ ರೆಬೆಲ್ಸ್​ಗಳನ್ನ ಸೋಲಿಸೋಕೆ ಸ್ಟ್ರಾಂಗ್ ಅಭ್ಯರ್ಥಿಗಳನ್ನೇ ಅಖಾಡಕ್ಕೆ ಧುಮುಕಿಸಿದ್ದಾರೆ.

ನಾಗಮಂಗಲ ಕ್ಷೇತ್ರ: ಚೆಲುವರಾಯಸ್ವಾಮಿ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡರನ್ನು ಅಖಾಡಕ್ಕಿಳಿಸಿದ್ದು, ಈಗಾಗಲೇ ಸುರೇಶ್ ಗೌಡ ಅವರು ಹಲವು ಚಟುವಟಿಕೆಯಲ್ಲಿ ತೋಡಗಿ  ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದಾರೆ.ಈ ಬಾರಿ ನಾಗಮಂಗಲ ಕ್ಷೇತ್ರವನ್ನು ಜೆಡಿಎಸ್ ವಶಕ್ಕೆ ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾಗಡಿ: ಬಾಲಕೃಷ್ಣ ವಿರುದ್ದ ಕಾಂಗ್ರೆಸ್ ಜಿ.ಪಂ ಸದಸ್ಯ ಮಂಜು ಅಭ್ಯರ್ಥಿ. ಮಾಗಡಿ ಮಂಜು ಡಿಕೆಶಿ ಮಾಜಿ ಶಿಷ್ಯ. ಬಾಲಕೃಷ್ಣಗೆ ಟಪ್ ಫೈಟ್ ಗ್ಯಾರೆಂಟಿ. ಈಗಾಗಲೇ ಕ್ಷೇತ್ರದಲ್ಲಿ   ಬಾಲಕೃಷ್ಣರವರ ಬಲ ಕೂಗಿದ್ದು, ಕ್ಷೇತ್ರರದ ಜನರು ಮಂಜು ಅವರಿಗೆ ಆರ್ಶೀವದಿಸಲು ಜೆಡಿಎಸ್ ನತ್ತ ಒಲವು ತೋರಿಸಿದ್ದಾರೆ.

ಶ್ರೀರಂಗಪಟ್ಟಣ -ರಮೇಶ್ ಬಂಡಿಸಿದ್ದೇಗೌಡ ವಿರುದ್ದ ರವೀಂದ್ರ ಶ್ರೀಕಂಠಯ್ಯ ಅಖಾಡಕ್ಕೆ. ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕ.

ಚಾಮರಾಜಪೇಟೆ: ಜಮೀರ್ ಅಹಮದ್ ವಿರುದ್ದ ಕಾಂಗ್ರೆಸ್ ಲೀಡರ್ ಅಲ್ತಾಫ್ ಅಭ್ಯರ್ಥಿ. ಇಮ್ರಾನ್ ಪಾಷಾ ಜೆಡಿಎಸ್​ಗೆ ಬೆಂಬಲ. ಜಮೀರ್ ಅಹಮದ್ ನನ್ನು ಮಣಿಸಲು ಬಿಜೆಪಿ ಯ ಮಾಜಿ ಕಾರ್ಪೊರೇಟರ್ ಕೂಡ ಅಲ್ತಾಫ್ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.

ಪುಲಿಕೇಶಿನಗರ : ಅಖಂಡ ಶ್ರೀನಿವಾಸಮೂರ್ತಿ ವಿರುದ್ದ ಕೈ ನಾಯಕ ಪ್ರಸನ್ನಕುಮಾರ್ ಅಭ್ಯರ್ಥಿ ಪ್ರಸನ್ನಕುಮಾರ್ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ, ಟಫ್ ಫೈಟ್ ಕೊಟ್ಟಿದ್ರು, ಈ ಬಾರಿ ಕ್ಷೇತ್ರವನ್ನು ವಶಕ್ಕೆ ಪಡೆಯಲು ರಣತಂತ್ರ ರೂಪಿಸಿದ್ದಾರೆ.

ಗಂಗಾವತಿ : ಇಕ್ಬಾಲ್ ಅನ್ಸಾರಿ ವಿರುದ್ದ ಕುರುಬ ಮುಖಂಡ ಮಾಜಿ ಎಂಎಲ್​ಸಿ ಶ್ರೀನಾಥ್ ಕಣಕ್ಕಿಳಿದಿದ್ದಾರೆ.ಈಗಾಗಲೇ ಕ್ಷೇತ್ರದ ಜನರು ಅನ್ಸಾರಿಗೆ ತಕ್ಕ ಪಾಠ ಕಳಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಸರಳ ಬಹುಮತ ಪಡೆದು ಕ್ಷೇತ್ರವನ್ನು ವಶಕ್ಕೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಹಗರಿಬೊಮ್ಮನಹಳ್ಳಿ : ಭೀಮಾನಾಯ್ಕ ವಿರುದ್ದವೂ ಪ್ರಬಲ ಅಭ್ಯರ್ಥಿ ಕೃಷ್ಣನಾಯ್ಕ .ಒಟ್ಟಿನಲ್ಲಿ  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮಾಜಿ ರೆಬೆಲ್​ಗಳ ಮೇಲೆ ಕೆಂಡದಂತಹ ಕೋಪವನ್ನೇ ಇಟ್ಟುಕೊಂಡಿದ್ದಾರೆ. ಏಳು ಜನರನ್ನ ಚುನಾವಣಾ ಅಖಾಡದಲ್ಲಿ ಮೀಸೆ ಮಣ್ಣಾಗಿಸಲೇಬೇಕೆಂದು ಖೆಡ್ಡಾ ತೋಡಿದ್ದಾರೆ.

Edited By

Shruthi G

Reported By

hdk fans

Comments