ಕಟುಂಬಕ್ಕೆ ಉಚಿತ 30 ಕೆ.ಜೆ ಅಕ್ಕಿ- ಪಡೆಯಲು ಜೆಡಿಎಸ್ ಅಧಿಕಾರಕ್ಕೆ ತನ್ನಿ- ಶಾಸಕ ಪಿ.ಆರ್ ಸುಧಾಕರ್ ಲಾಲ್

01 May 2018 6:54 PM |
2166 Report

ಕೊರಟಗೆರೆ:- ನೀವು ಹೆಬ್ಬೆಟ್ಟನ್ನು ನೀಡಲು ನ್ಯಾಯ ಬೆಲೆ ಅಂಗಡಿ ಮುಂದೆ ನಿಲ್ಲುವ ಕಿರಿಕಿರಿಯಿಲ್ಲ... ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುತ ನೀಡಿ ಅಧಿಕಾರಕ್ಕೆ ತನ್ನಿ ತತ್ ಕ್ಷಣದಿಂದಲೇ ಕುಟುಂಬಕ್ಕೆ 30ಕೆಜಿ ಉಚಿತ ಅಕ್ಕಿ ಪಡೆಯಿರಿ ಇದು ಕುಮಾರಣ್ಣನ ವಾಗ್ದಾನ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

    ತಾಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿ ಮತ್ತು ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
     ನಾನು ಕೇವಲ ಚುನಾವಣೆ ಸಮಯದಲ್ಲಿ ಮತಯಾಚನೆಗಾಗಿ  ನಿಮ್ಮೂರಿಗೆ ಬಂದಿರುವ ರಾಜಕಾರಣಿಯಲ್ಲ... ಕ್ಷೇತ್ರದ ಮನೆಮಗನಾಗಿ ಪ್ರತಿದಿನವು ಹಗಲುರಾತ್ರಿ  ನಿಮ್ಮೊಡನಿದ್ದವನು... ನಿಮ್ಮಲ್ಲರ ಕಷ್ಟದಲ್ಲಿ ಸದಾ ನಿಮ್ಮೊಟ್ಟಿಗಿದ್ದನು... ಇಂದು... ಎಂದೂ.. ಎಂದೆದೂ ನಿಮ್ಮೊಟ್ಟಿಗೇ ಇರುವವನು ನಾನು... ನಾನು ನಿಮ್ಮಗೆ ಶಾಸನಾಗಲು ನಿಮ್ಮ ಮನೆಗೆ ಬಂದವನಲ್ಲ.. ನಿಮ್ಮಲ್ಲರ ಸೇವನಾಗಲು ಬಂದವನು... ಯಾರು ಏನೇ ಹೇಳಿದರೂ... ಅವರು ಎಂದೂ ನಿಮ್ಮೊಟ್ಟಿಗೆ ಇರುವವರಲ್ಲ... ನಾನು ಎಂದೆಂದೂ ನಿಮ್ಮೊಟ್ಟಿಗಿರುವವನು ಎಂದರು.

      ಎಲ್ಲರ  ರಕ್ಷಣೆ ಮತ್ತು ರೈತರ ಸಂಪೂರ್ಣ ಸಾಲ  ಮನ್ನಾಕ್ಕೆ ಜೆಡಿಎಸ್  ಪಕ್ಷಕ್ಕೆ ಬೆಂಬಲ  ನೀಡಲೇಬೇಕು... ಬಡವರ ಪರವಾಗಿ ಕೆಲಸ ಮಾಡುವ ಕುಮಾರಣ್ಣನ ಬಗ್ಗೆ ಕೆಲವರು ಅಪಪ್ರಚಾರ  ಮಾಡುವವರು ಬರುತ್ತಾರೆ... ನಿಮಗೆ ನಿಮ್ಮ ಜೆಡಿಎಸ್ ಪಕ್ಷ ಮತ್ತು ಕುಮಾರಣ್ಣನ ಬಗ್ಗೆ ತಿಳಿದೇ ಇದೇ ಅವರ ಮಾತು ಸುಳ್ಳಿನ ಕಂತೆ.. ಎಂದು ಗುಡುಗಿದರು. 
     ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ ಕ್ಷೇತ್ರದಲ್ಲಿ ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು 20ವರ್ಷದಿಂದ ಸುಧಾಕರಲಾಲ್ ಬಡಜನರ ಸೇವೆ ಮಾಡಿದ್ದಾರೆ. 20ವರ್ಷದ ರಾಜಕೀಯ ಜೀವನದಲ್ಲಿ 240ಕ್ಕೂ ಹೆಚ್ಚು ಆರೋಗ್ಯ ಮತ್ತು ಕಣ್ಣಿನ ಶಿಭಿರ ಏರ್ಪಡಿಸುವ ಮೂಲಕ 12ಸಾವಿರ ಬಡಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು 18 ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆಯನ್ನು ನೀಡಿದ್ದಾರೆ   ಇಂತಹ ಶಾಸಕನನ್ನೇ ನೀವು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

      ಪಾತಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದ ಪ್ರಚಾರದ ಕಾರ್ಯಕ್ರಮದ ವೇಳೆ ಮಾವತ್ತೂರು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಹನುಮನರಸಯ್ಯ, ಕೋಳಾಲ ಹೋಬಳಿ ಬಿಜೆಪಿ ಅಧ್ಯಕ್ಷ ಲೊಕೇಶ್ ಮತ್ತು ಕಾಂಗ್ರೇಸ್ ಮುಖಂಡ ರಾಜಶೇಖರ್ ಸೇರಿದಂತೆ 200ಕ್ಕೂ ಹೆಚ್ಚು ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಿಪಂ ಸದಸ್ಯ ಶಿವರಾಮಯ್ಯ ಮತ್ತು ಶಾಸಕ ಪಿ.ಆರ್.ಸುಧಾಕರಲಾಲ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
    ಕೋಳಾಲ ಹೋಬಳಿ ಪಾತಗಾನಹಳ್ಳಿ ಮತ್ತು ವಜ್ಜನಕುರಿಕೆ ಗ್ರಾಪಂ ವೆಂಗಮ್ಮನಹಳ್ಳಿ, ಮಾಟಗಾನಹಳ್ಳಿ, ವಜ್ಜನಕುರಿಕೆ, ಬೈರಸಂಧ್ರ, ಸಿಂಗನಪಾಳ್ಯ, ಕ್ಯಾತಗಾನಹಳ್ಳಿ, ಗಿಡ್ಡಯ್ಯನಪಾಳ್ಯ, ತಾರೇಹಳ್ಳಿ, ಪುಟ್ಟಸಂಧ್ರ, ದುಡ್ಡನಹಳ್ಳಿ, ದೇವನಹಳ್ಳಿ, ಮೋರಗಾನಹಳ್ಳಿ, ಯರಪ್ಪನಹಳ್ಳಿ, ಹನುಮಂತನಪಾಳ್ಯ, ಬೇಡರ ಅಗ್ರಹಾರ, ಹುಲುವಂಗಲ, ಬಂಡೆಪಾಳ್ಯ, ಕರಿದುಗ್ಗನಹಳ್ಳಿ, ಹೊಸಹಳ್ಳಿ, ತಾರೇಹಳ್ಳಿ, ಮಾರಗೊಂಡನಗುಣಿ, ಗುಡಿಬೇವನಹಳ್ಳಿ, ದಿನ್ನೆಪಾಳ್ಯ, ನಾಗಮ್ಮನಪಾಳ್ಯ, ಜುನ್ನಹಳ್ಳಿ ಗ್ರಾಮದಲ್ಲಿ ಜಿಪಂ ಸದಸ್ಯ ಶಿವರಾಮಯ್ಯ ಮತ್ತು ಶಾಸಕ ಪಿ.ಆರ್.ಸುಧಾಕರಲಾಲ್ ಮತಯಾಚನೆ ಮಾಡಿದರು.
ಮತಯಾಚನೆ ವೇಳೆಯಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಯುವಧ್ಯಕ್ಷ ವೆಂಕಟೇಶ್, ತಾಪಂ ಸದಸ್ಯರಾದ ಬೋರಣ್ಣ, ಚಿಕ್ಕನರಸಪ್ಪ, ಪ್ರಸನ್ನಕುಮಾರ್, ಮುಖಂಡರಾದ ರಂಗಅರಸಪ್ಪ, ಸಿದ್ದಗಂಗಮ್ಮ, ಶ್ರೀನಿವಾಸ್, ಸೀತರಾಮ್, ರಂಗಪ್ಪ, ನಾಗರಾಜು, ರಮೇಶ್, ಮಂಜುನಾಥ, ದೀವಾಕರ, ಹನುಮಂತರಾಯಪ್ಪ, ಕಾಮಣ್ಣ, ರಾಮಕೃಷ್ಣಪ್ಪ, ಕಾಂತರಾಜು, ಲಕ್ಷ್ಮಣ್, ಸಂಜು, ಕಾಟಪ್ಪ, ಸಣ್ಣರಾಮಣ್ಣ, ಉಮೇಶ್, ಕಾಳಿಚರಣ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. 

Edited By

Raghavendra D.M

Reported By

Raghavendra D.M

Comments