ಕಾಂಗ್ರೇಸ್ ಭ್ರಷ್ಟ ಆಡಳಿತ ಈ ಬಾರಿ ಕೊನೆಯಾಗಲಿದೆ: ವೈ.ಹೆಚ್ ಹುಚ್ಚಯ್ಯ ಬದಲಾವಣೆ ಮತ್ತು ಅಭಿವೃದ್ಧಿಗಾಗಿ ಜನರು ನನನ್ನೇ ಬೆಂಬಲಿಸಲಿದ್ದಾರೆ

29 Apr 2018 7:19 PM |
518 Report

ಕೊರಟಗೆರೆ ಏ. 29:- ರಾಜ್ಯದಲ್ಲಿ ಕಾಂಗ್ರೇಸ್ ನಡೆಸಿರುವ ಭ್ರಷ್ಟ ಆಡಳಿತಕ್ಕೆ ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೊರಟಗೆರೆ ವಿಧಾನ ಸಭಾ ಬಿಜೆಪಿ ಅಭ್ಯರ್ಥಿ ವೈ.ಹೆಚ್ ಹುಚ್ಚಯ್ಯ ತಿಳಿಸಿದರು.

ಪುರವರ ಹೋಬಳಿಯಲ್ಲಿ ಭಾನುವಾರ ಮುಖಂಡರ ಮತ್ತು ಕಾರ್ಯಕರ್ತರೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮತ್ತು ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.
ಅನ್ನಭಾಗ್ಯ ನೀಡಿದ್ದೇವೆ ಎನ್ನುವ ಒಂದೇ ಒಂದು ಟ್ರಫ್ ಕಾರ್ಡ್ ಇಟ್ಟುಕೊಂಡು ಜನರು ಇದರಿಂದಲೇ ತಮಗೆ ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿ ಕಾಂಗ್ರೇಸ್ ನಾಯಕರು ಇದ್ದಾರೆ ಆದರೆ ವಾಸ್ತವಲ್ಲಿ ಕೇಂದ್ರದ ಬಿಜೆಪಿ ಸಕರ್ಾರ ನೀಡಿರುವ ಅಕ್ಕಿಯನ್ನೇ ಬಳಕೆ ಮಾಡಿಕೊಂಡು ಅದಕ್ಕೊಂದು ಹೆಸರನ್ನು ಇಟ್ಟುಕೊಂಡು ಜನರಿಗೆ ನಮ್ಮ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕುಟುಕಿದರು.
ಕೇಂದ್ರದಲ್ಲಿ ಮೋದಿ ಸಕರ್ಾರದ ಆಡಳಿತ, ರಾಜ್ಯದಲ್ಲಿ ಯಡ್ಯೂರಪ್ಪರ ಆಡಳಿತ ನೋಡಿರುವ ಜನರು ಈ ಬಾರಿ ಬಿಜೆಪಿಯನ್ನೇ ಆಯ್ಕೆ ಮಾಡಲಿದ್ದಾರೆ. ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯಥರ್ಿ ಪರಮೇಶ್ವರ್ ಮತ್ತು ಜೆಡಿಎಸ್ ಅಭ್ಯಥರ್ಿ ಸುಧಾಕರ್ ಲಾಲ್ ಇಬ್ಬರ ಆಡಳಿತವನ್ನು ಜನರು ನೋಡಿದ್ದಾರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುತದೊಂದಿಗೆ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಒಂದು ಬದಲಾವಣೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪುರುವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಂಜುಂಡಆರಾಧ್ಯ ಜಿಲ್ಲಾ ಕಾರ್ಯಕಾರನಿ ಸದಸ್ಯ ಗೋಪಾಲ ರಾವ್, ಕೋಡ್ಲಾಪುರ ಶಕ್ತಿ ಕೇಂದ್ರದ ಅಧ್ಯಕ್ಷ ಬಾಲರಾಜು, ಮುಖಂಡರಾದ ರಮೇಶ್, ಮಂಜುನಾಥ್, ಹರೀಶ್, ಕರಿ ಬಸವಯ್ಯ, ಚಿಕ್ಕಣ್ಣ 

Edited By

Raghavendra D.M

Reported By

Raghavendra D.M

Comments