ರಾಜ್ಯದ ಪ್ರತೀ ಕುಟುಂಬವೂ ಕಾಂಗ್ರೇಸ್ ಸರ್ಕಾರದ ಫಲಾನುಭವಿಗಳೇ: ಡಾ. ಜಿ ಪರಮೇಶ್ವರ್

29 Apr 2018 7:08 PM |
906 Report

ಕೊರಟಗೆರೆ ಏ. :- ಸಾಮಾನ್ಯ ಜನರ ಆಶಯಗಳನ್ನ  ಅರಿತು ಅವರಿಗಾಗಿಯೇ ಯೋಜನೆಗಳನ್ನು ರೂಪಿಸಿ ಆಡಳಿತ ನಡೆಸಿದ   ಶ್ರೇಯ ಕಾಂಗ್ರೇಸ್ ಸರ್ಕಾರದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು.              ಶನಿವಾರ ಪುರವರ ಹೋಬಳಿಯ ಹಲವು ಗ್ರಾಮಗಳಲ್ಲಿ ಸಭೆ ಮತ್ತು ಮತಯಾಚನೆಯನ್ನು ಮಾಡಿ ಮಾತನಾಡಿದರು.

 

      ಕೇವಲ ಬಹುರಾಷ್ಟ್ರೀಯ ಕಂಪನಿಗಳ ಉದ್ದೇರಕ್ಕಾಗಿ ಬಿಜೆಪಿ, ಅವಕಾಶಕ್ಕಾಗಿ ಜೆಡಿಎಸ್ ಇದೆ ಯಾರೊಬ್ಬರೂ ಯಾವ ಆಮಿಸಕ್ಕೂ, ಸುಳ್ಳು ಮಾತುಗಳಿಗೆ ಮರುಳಾಗಬೇಡಿ ಚುನಾವಣೆಯಲ್ಲಿ ಸಾಮಾನ್ಯ ಜನರನ್ನು ದಾರಿ ತಪ್ಪಿಸಲು ಹಲವರು ಬರುತ್ತಾರೆ ಅವರೆಲ್ಲರಿಗೂ ತಕ್ಕ ಉತ್ತರವನ್ನು ನೀಡಲು ನೀವು ತಯಾರಾಗಿ ಎಂದರು.

            ಒಂದಲ್ಲಾ ಒಂದು ರೀತಿಯಲ್ಲಿ ರಾಜ್ಯದಲ್ಲಿ ಪ್ರತಿಯೊಂದು ಕುಟುಂಬವೂ ಕಾಂಗ್ರೇಸ್ ಸರ್ಕಾರದ ಫಲಾನುಭವಿಗಳೇ ಆಗಿದ್ದೀರಿ… ನಿಮ್ಮೆಲ್ಲರಿಗೂ ಏನು ಬೇಕು ಎನ್ನುವುದನ್ನು ನಾವು ಅರಿತೇ ಹಿಂದೆ ನಮ್ಮ ಪ್ರಣಾಳಿಕೆಯನ್ನು ಸಿದ್ದ ಪಡಿಸಿದ್ದೆವು ಅದೇ ರೀತಿ ನೀಡಿದ ಬಹುತೇಕ ಎಲ್ಲಾ ಭರವಸೆಗಳನ್ನು ಸಕಾರಗೊಳಿಸಿದ್ದೇವೆ ಈ ಬಾರಿಯೂ ನಮ್ಮ ಪ್ರಣಾಳಿಕೆ ಬಿಡುಗಡೆಮಾಡಿದ್ದು ನಿಮ್ಮಲ್ಲರ ಬೇಕು-ಬೇಡ, ನಿಮ್ಮಕನಸ್ಸುಗಳಿಗೆ ಪೂರಕವಾಗಿಯೇ ನಮ್ಮ ಪ್ರಣಾಳಿಕೆಯಿದ್ದು ನೀವೆಲ್ಲರೂ ಈ ಭಾರಿ ಕಾಂಗ್ರೇಸ್ ಪಕ್ಷಕ್ಕೆ ಮತಹಾಕಬೇಕು ಎಂದು ಮನವಿ ಮಾಡಿದರು.

ನಾನು ಎಲ್ಲೂ ಹೋಗಲ್ಲ:-

ಚುನಾವಣೆಗಷ್ಟೇ ನಾನು ನಿಮ್ಮ ಬಳಿ ಬರುತ್ತೇನೆ ಮತ್ತೆಲ್ಲೋ ಹೋಗುತ್ತೇನೆ ಎಂದು ನಮ್ಮ ವಿರೋಧಿಗಳು ಹೇಳುತ್ತಾರೆ ನಾನು ಕೊರಟಗೆರೆಯಲ್ಲಿಯೇ ಮನೆ ಮಾಡಲಿದ್ದೇನೆ… ಪ್ರತೀ ಹೋಬಳಿ ಕೇಂದ್ರಕ್ಕೊಂದು ಕಚೇರಿಯನ್ನು ತೆರೆಯಲಿದ್ದು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಗುರಿಯಾಗಿಸಿಕೊಂಡಿದ್ದೇನೆ ಎಲ್ಲರೂ ನನಗೆ ಮತಹಾಕಿ ಗೆಲ್ಲಿಸಬೇಕು ಎಂದರು.

 

ಗೊಂದಿಹಳ್ಳಿ ,ತಿಮ್ಮಲಾಪುರ, ದೊಡ್ಡಗಾಳಿಹಳ್ಳಿ, ಪುರವರ ,ದೊಡ್ಡ ಹೊಸಹಳ್ಳಿ ,ಗಮಕಾರನಹಳ್ಳಿ ,ತಗ್ಗಿಹಳ್ಳಿ ,ಗಿಡ್ಡಯ್ಯನ ಪಾಳ್ಯ.ಕೊಡ್ಲಾಪುರ , ಇಮ್ಮಡಗೊಂಡನಹಳ್ಳಿ ,ವೀರನಾಗೇನಹಳ್ಳಿ,ಬಡಕನಹಳ್ಳಿ,ಗಿರೇಗೌಡನಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.

            ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ತೆಂಗು ಮತ್ತು ನಾರು ಅಭಿವೃದ್ದಿ ನಿಮಗದ ಅಧ್ಯಕ್ಷ ವೆಂಕಟಾಚಲಯ್ಯ, ತಾಲೂಕು ಮಹಿಳಾ ಅಧ್ಯಕ್ಷೆ ಜಯಮ್ಮ, ಜಿಲ್ಲಾ  ಮಹಿಳಾ ಕಾರ್ಯದರ್ಶಿ ಕವಿತಾ, ಮಾಜಿ ಶಾಸಕ ಹನುಮಂತಯ್ಯ, ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾರಪ್ಪ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ ಅಶ್ವಥನಾರಾಯಣ, ಮುಖಂಡರಾದ ಸುವರ್ಣಮ್ಮ, ಬೈರಪ್ಪ, ಅರವಿಂದ್ ಕೆ.ಆರ್ ರಘು, ದಿಲೀಪ್ ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments