ಜೆಟ್ಟಿ ಅಗ್ರಹಾರ ನಾಗರಾಜು ಪಕ್ಷೇತರವಾಗಿ ಎಂಎಲ್ ಎಗೆ ಸ್ಪರ್ಧೆ

23 Apr 2018 7:30 PM |
1395 Report

ಕೊರಟಗೆರೆ ಏ.:- ಕೆಪಿಸಿಸಿ ಅಧ್ಯಕ್ಷ ಜಿ,ರಮೇಶ್ವರ್ ಸ್ಪರ್ಧೆಯ ಕಾರಣದಿಂದಲೇ ಬಾರೀ ಚರ್ಚೆಗೆ ಕಾರಣವಾಗಿರುವ ಕೊರಟಗೆರೆ ಪರಿಶಷ್ಟ ಮೀಸಲು ವಿಧಾನ ಸಭಾ ಕ್ಷೇತ್ರವು ಹಲವು ವಿಭಿನ್ನ ವ್ಯಕ್ತಿತ್ವದ ಮತ್ತಷ್ಟು ಅಭ್ಯರ್ಥಿಗಳ ಸ್ಪರ್ಧೆಯ ಕಾರಣದಿಂದಲೂ ರಾಜ್ಯದ ಜನರ ಗಮನ ತನ್ನತ್ತ ಸೆಳೆಯುತ್ತಿದೆ.

 

  ತಾಲೂಕಿನ ಜೆಟ್ಟಿ ಅಗ್ರಹಾರ ವಾಸಿ ನಾಗರಾಜು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ  ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್  ನಾಮಪತ್ರ ಸಲ್ಲಿಸಿದ ದಿನವೇ ನಾಗರಾಜು ನಾಮಪತ್ರ ಸಲ್ಲಿಸಿರುವುದು ವಿಶೇಷವಾಗಿದೆ.

 ಚಿತ್ರನಟ,ಮತ್ತು ಮಾದಿಗ ದಂಡೋರ ಯುವಸೇನೆ ತುಮಕೂರು ಜಿಲ್ಲಾ ಅಧ್ಯಕ್ಷರಾದ ಜೆಟ್ಟಿ ಅಗ್ರಹಾರ ನಾಗರಾಜು ಕಳೆದ 8  ವರ್ಷಗಳಿಂದ ದಲಿತರ ಒಳಮೀಸಲಾತಿ.ರೈತರ ಪರ,ಅಲ್ಪ ಸಂಖ್ಯಾತ ಹಿಂದುಳಿದವರ ಪರ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು.

ಇತ್ತೀಚೆಗೆ  ಕೊರಟಗೆರೆಗೆ ಮುಖ್ಯಮಂತ್ರಿಗಳು ಆಗಮಿಸಿದ್ದಾಗ ದಲಿತ ಒಳಮೀಸಲಾತಿಗೆ ಆಗ್ರಹಿಸಿ ಕಪ್ಪು ಬಾವುಟ ಪ್ರದರ್ಶಿಸಿ ಬಂಧಿತರಾಗಿದ್ದರು . ಕಪ್ಪು ಬಾವುಟ ಪ್ರದರ್ಶನದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರ ಪೇಚಿಗೆ ಸಿಲುಕಿತ್ತು.

           ಕೊರಟಗೆರೆ ಪರಿಶಿಷ್ಟ ಮೀಸಲು ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳೇ ಯಾವುದೇ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕ.ಹಾಗಾಗಿ ಗಣನೀಯ ಸಂಖ್ಯೆಯಲ್ಲಿರುವ ಇಲ್ಲಿನ ಪರಿಶಷ್ಟರ ಮನಸೆಳೆಯಲು ವಿವಿಧ ಪಕ್ಷಗಳ ನಾಯಕರು ಮುಗಿಬಿದ್ದಿದ್ದಾರೆ.ಕೆಲವರಂತೂ ಸಮಸ್ತ ದಲಿತರೆಲ್ಲರ ಓಟು ನಮ್ಮದೇ ಆಸ್ತಿ ಎಂಬ ಭ್ರಮೆಯಲ್ಲಿದ್ದು ಇನ್ನು ಕೆಲವರು ಎಲ್ಲ ದಲಿತರೂ ತಮಗೇ ಮತ ಹಾಕಲೇ ಎಂಬ ಹಲಗು ಗನಸು ಕಾಣುತ್ತಿದ್ದಾರೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಹೋರಾಟ ನೆಡೆಸುತ್ತಿರುವ ಮಾದಿಗ ಸಂಘಟನೆಗಳು,ಸಂಸ್ಥೆಗಳು ಹಾಗು ಕ್ಷೇತ್ರದಲ್ಲಿರುವ ಸರ್ಕಾರಿ ನೌಕರ ಬಂಧುಗಳೂ ಸಹ ಬೆಂಬಲ ಘೋಷಿಸಿದ್ದಾರೆ. ಅಲ್ಲದೇ ಸ್ಥಳೀಯ ಅಭ್ಯರ್ಥಿ ದಿನದ 24 ಗಂಟೆಗಳೂ ಲಭ್ಯವಿರುವ ಯುವಕ ಎಂದು ಕ್ಷೇತ್ರದ ಜನರೂ ಸಹ ಸಹಮತ ವ್ಯಕ್ತಪಡಿಸಿದ್ದು ನಾಗರಾಜ್ ಸ್ಪರ್ಧೆ ಎಲ್ಲರೂ ಕಣ್ಣುತಿರುಗಿ ನೋಡುವಂತಾಗಿದೆ. (ಚಿತ್ರಗಳು ಇವೆ) 

23ಕೆಆರ್ ಟಿ ಚಿತ್ರ3:- ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜೆಟ್ಟಿ ಅಗ್ರಹಾರ ನಾಗರಾಜು ಸೋಮವಾರ ತಮ್ಮ ಬಂಬಲಿಗರೊಂದಿಗೆ ನಾಮ ಪತ್ರಸಲ್ಲಿಸಿದರು.

Edited By

Raghavendra D.M

Reported By

Raghavendra D.M

Comments