'ಕಮಲ' ಬಿಟ್ಟು 'ತೆನೆ' ಹೊತ್ತ ಮುಖಂಡರು...!!

12 Apr 2018 5:43 PM |
7517 Report

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರ ಹೋಬಳಿಯ ಭೈರಪ್ಪನಪಾಳ್ಯ, ಸುಗ್ಗನಹಳ್ಳಿ, ಕೆರೆಕೋಡಿಪಾಳ್ಯದ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಮುಖಂಡರಾದ ಎಂ.ಟಿ.ಕೃಷ್ಣಪ್ಪ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಎಂ.ಟಿ. ಕೃಷ್ಣಪ್ಪ ಮಾತನಾಡಿ, ರೈತರು, ಕೂಲಿ ಕಾರ್ಮಿಕರು, ಬಡವರು, ಶ್ರಮಿಕರ ಪರವಾಗಿ ಹಗಲಿರುಳು ಶ್ರಮಿಸುತ್ತಿರುವ ಏಕೈಕ ಪಕ್ಷ ಜೆಡಿಎಸ್. ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಸ್ವಯಂ ಅಭಿವೃದ್ಧಿ ಹೊರತಾಗಿ ರಾಜ್ಯದ ರೈತರ, ಜನರ ಅಭಿವೃದ್ಧಿ ಬೇಕಿಲ್ಲ ಎಂದರು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ, ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಸೇರಿದಂತೆ ಹಲವರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದು, ರೈತರ ಹಿತಕ್ಕಾಗಿ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲು ಕ್ಷೇತ್ರದ ಜನತೆ ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದರು. ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ,  ಪಕ್ಷಕ್ಕಾಗಿ ದುಡಿದವರಿಗೆ ಬೆಲೆ ಇಲ್ಲವಾಗಿದೆ. ದಶಕಗಳಿಂದ ಬಿಜೆಪಿ ಪಕ್ಷದ ಸಂಘಟನೆ ಮಾಡಿದ್ದೇವೆ, ಆದರೆ ಪಕ್ಷದ ಯಾವುದೇ ಮುಖಂಡರು ಕಾರ್ಯಕರ್ತರ ಸಮಸ್ಯೆ ಆಲಿಸಿಲ್ಲ. ಇದರಿಂದ ‌ಬೇಸತ್ತು ರೈತರ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲೇಬೇಕೆಂದು ಹಾಗೂ ಜನಪರ ಕಾಳಜಿಯುಳ್ಳ ಎಂ.ಟಿ.ಕೃಷ್ಣಪ್ಪ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಕುಮಾರ್, ರಾಜಣ್ಣ, ಯಾಸೀನ್, ಭೈರಣ್ಣ, ಪುಟ್ಟಸ್ವಾಮಿ, ಗೋವಿಂದರಾಜ್, ರಮೇಶ್, ಸಿದ್ದರಾಜು, ಕಿರಣ್ ತಿಳಿಸಿದರು.

Edited By

Shruthi G

Reported By

hdk fans

Comments