A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಅಂತರ್ ಜಲ ವೃದ್ದಿಗೆ ಕೆರೆ ರಕ್ಷಣೆ ಮಾಡಿ: ವೀರಭದ್ರಶಿವಾಚಾರ್ಯಸ್ವಾಮೀಜಿ | Civic News

ಅಂತರ್ ಜಲ ವೃದ್ದಿಗೆ ಕೆರೆ ರಕ್ಷಣೆ ಮಾಡಿ: ವೀರಭದ್ರಶಿವಾಚಾರ್ಯಸ್ವಾಮೀಜಿ

10 Apr 2018 6:48 PM |
679 Report

ಕೊರಟಗೆರೆ ಏ.:- ಅಂತರ್ ಜಲ ರಕ್ಷಣಗೆ ಎಲ್ಲರೂ ಪಣ ತೊಟ್ಟು    ಕೆರೆ-ಕಟ್ಟೆಗಳ  ರಕ್ಷಣೆಗೆ ಮುಂದಾಗಬೇಕು  ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ  ಹೇಳಿದರು.

     ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಂಡಿದ್ದ ತಾಲೂಕಿನ ಕೆರೆಗಳ ಪುನರ್ಚೇತನ ಸಮಿತಿ ರಚನೆಯಲ್ಲಿ ಕರೆದಿದ್ದ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು. 

      ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳು ಬಯಲು ಪ್ರದೇಶಗಳಾಗಿದ್ದು   ಇಲ್ಲಿ  ರೈತರ ಒಂದು ಸಾವಿರ ಅಡಿ ಬೋರು  ಕೊರೆಸಿದರೂ ನೀರು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ  ಜೀವ ಸಂಕುಲಗಳು ಮತ್ತು ರೈತರ ಜಾನುವಾರುಗಳಿಗೆ ನೀರಿಲ್ಲದೇ  ಸಂಕಷ್ಟದ ಸ್ಥಿತಿ ರೈತರು ಎದುರಿಸುತ್ತಿದ್ದಾರೆ  ಪ್ರತಿಯೊಬ್ಬರೂ ಕೆರೆಗಳನ್ನು ನಿರ್ಲಕ್ಷಿಸಿರುವುದರಿಂದ ಕೆರೆಗಳ್ಲಲಿ ಹೂಳು ತುಂಬಿಕೊಂಡು  ದಿನದಿಂದ ದಿನಕ್ಕೆ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿದ್ದು, ಇದಕ್ಕಾಗಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯತೆ ಇದ್ದು ನಾವೆಲ್ಲಾ ಒಟ್ಟಾಗಿ ಕೆರೆ ಉಳಿಸಿ ಭವಿಷ್ಯದ ದಿನಗಳಲ್ಲಿ  ಕೆರೆಗಳನ್ನು  ಉಳಿಸಬೇಕು ಎಂದರು.

     ಪ್ರತೀ ವರ್ಷ ಬೇಸಿಗೆಯಲ್ಲಿ ಕೆರೆಗಳಲ್ಲಿ ತುಂಬಿರುವ ಹೊಳನ್ನು ತೆಗೆದು ಕೆರೆಗಳನ್ನು ಪುನಶ್ವೇತನಗೊಳಿಸಲು ಈ ಸಮಿತಿ ಪ್ರಾಮಾಣಿಕ ಕೆಲಸ ಮಾಡಲು ನಿಶ್ವಯಿಸಿದ್ದು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

       ಸಭೆಯಲ್ಲಿ ಸಮಿತಿಯನ್ನು ಪಕ್ಷತೀತವಾಗಿ ಆಯ್ಕೆ  ಮಾಡಲಾಯಿತು, ಅದರಂತೆ ಸಮಿತಿಯ ಅಧ್ಯಕ್ಷರಾಗಿ ಸಿದ್ದರಬೆಟ್ಟ ಖಾಸಾಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಆಯ್ಕೆ ಮಾಡಲಾಯಿತು.  ತಾಲ್ಲೂಕಿನ ಪ್ರತಿ ಹೋಬಳಿಯಿಂದ 5 ಜನ  ಉಪಾಧ್ಯಕ್ಷರು, ಕಾರ್ಯದರ್ಶಿ ,ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡಿ 100 ಜನರ ನಿರ್ದಶಕರನ್ನ ಆಯ್ಕೆ ಮಾಡಲಾಯಿತು, 600 ಜನರ ಸದಸ್ಯರು ಸಮಿತಿಯಲ್ಲಿ  ಪ್ರತೀ ಸದ್ಯರೂ 5 ಸಾವಿರ ನೀಡುವುದಾಗಿ ಒಪ್ಪಿಕೊಂಡರು.

      ಸಭೆಯಲ್ಲಿ ಜಿಪಂ ಸದಸ್ಯ ಶಿವರಾಮಯ್ಯ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ  ಮಹಾಲಿಂಗಪ್ಪ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು,  ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಸ್.ಪವನ್ ಕುಮಾರ್, ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ  ಪರ್ವತಯ್ಯ, ಕೊರಟಗೆರೆ ಹೊಸ ಬಡಾವಣೆ ನಾಗರೀಕ ಹಿತರಕ್ಷಣಾ ವೇಧಿಕೆಯ ಅಧ್ಯಕ್ಷ ಕೆ.ಕೆ ನೀನ್ ಕುಮಾರ್, ಮಾಜಿ ತಾ.ಪಂ ಅಧ್ಯಕ್ಷ  ಆರ್.ಎಸ್ ರಾಜಣ್ಣ,  ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ದಗಿರಿ ನಂಜುಡಸ್ವಾಮಿ,  ಜಿಲ್ಲಾ ಜಗ್ಗೇಶ್ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಡಿ.ಎಲ್ ಮಲ್ಲಯ್ಯ, ಮುಖಂಡರಾದ ಕೆ.ವಿ ಪುರುಷೋತ್ತಮ್, ಬೆನಕ ವೆಂಕಟೇಶ್, ಪ್ರಕಾಶ್,   ಪ್ರಭಾಕರ್, ಜಯಪ್ರಕಾಶ್, ಪದ್ಮಾರಮೇಶ್, ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)

 

 

Edited By

Raghavendra D.M

Reported By

Raghavendra D.M

Comments