ಪಕ್ಷಕ್ಕೆ ಕಾರ್ಯಕರ್ತರೇ ಸಿಪಾಯಿಗಳು: ಅನಿಲ್ ಕುಮಾರ್ ಪಾಟೀಲ್

10 Apr 2018 6:17 PM |
356 Report

ಕೊರಟಗೆರೆ ಏ.10:-  ಪಕ್ಷ ಸಂಘಟನೆ ಮತ್ತು ಪಕ್ಷದ ಬೆನ್ನೆಲುಬು ಕಾರ್ಯಕರ್ತರು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಅನಿಲ್ ಕುಮಾರ್ ಪಾಟೀಲ್ ತಿಳಿಸಿದರು.

 
      ತಾಲೂಕಿನ ನೀಲಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಚಿಕ್ಕಪಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೇಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
      ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ  ತನ್ನ ಅಧಿಕಾರಾವಧಿಯಲ್ಲಿ ಮಾಡಿರುವಂತಹ ಜನಪರ ಕೆಲಸಗಳನ್ನು ಮತ್ತು ಜನ ಸಾಮಾನ್ಯರ ಹಿತಕ್ಕಾಗಿ ರೂಪಿಸಿರುವಂತಹ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕು... ಯಾವುದೇ  ಹಂತದಲ್ಲಿಯೂ ಯಾವುದೇ ಗೊಂದನಹಳಿಲ್ಲದೇ ಎಲ್ಲರೂ ಒಮ್ಮತದಿಂದ ಪಕ್ಷ ಸಂಘಟನೆಯಲ್ಲಿ ತೊಡಗಬೇಕು, ಯಾರೊಬ್ಬರೂ ಮೇಲು-ಕೀಳು ಭಾವನೆಗಳನ್ನು ವ್ಯಕ್ತಪಡಿಸಿದೇ ಪಕ್ಷ ವಹಿಸಿರುವಂತಹ ಕೆಲಸವನ್ನು ಸಿಪಾಯಿಗಳಂತೆ  ಕ್ಷೇತ್ರದ ರಕ್ಷಣೆಗೆ ತೊಂಕಕಟ್ಟಿ ನಿಲ್ಲಬೇಕು ಎಂದರು.


     ಕಾರ್ಯರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೋಮಣ್ಣ, ರಾಮಚಂದ್ರಪ್ಪ, ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ಮಾಜಿ ತಾ.ಪಂ ಅಧ್ಯಕ್ಷೆ ಸುಕನ್ಯ ಮಂಜುನಾಥ್, ಆರ್.ಎಸ್ ರಾಜಣ್ಣ, ಜಿಲ್ಲಾ ಕಾಂಗ್ರೇಸ್ ಒಬಿಸಿ ಅಧ್ಯಕ್ಷ ಪುಟ್ಟರಾಜು, ತಾಲೂಕು ಮಹಿಳಾ ಅಧ್ಯಕ್ಷೆ ಜಯಮ್ಮ, ತಾಲೂಕು ಯೂತ್ ಕಾಂಗ್ರೇಸ್ ಅಧ್ಯಕ್ಷ ವಿನಯ್ ಕುಮಾರ್, ಮಾಜಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್,ಗ್ರಾ.ಪಂ ಸದಸದ್ಯರಾದ ಶಂಕರ್ ಆರಾಧ್ಯ, ಕೃಷ್ಣಯ್ಯ, ದೇವರಾಜು, ಭಾಗ್ಯಮ್ಮ, ನರಸಿಂಹರಾಜು, ಮುಖಂಡರಾದ ಅರಕೆರೆ ಸೋಮಶೇಖರ್,ಸೇರಿದಂತೆ ನೂರಾರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದರು.( ಚಿತ್ರ ಇದೆ) 

Edited By

Raghavendra D.M

Reported By

Raghavendra D.M

Comments