ಬಿಎಂಟಿಸಿ ಪ್ರಯಾಣಿಕರಿಗೆ ಬಂಪರ್ ಆಫರ್ ಕೊಟ್ಟ ಜೆಡಿಎಸ್..!!

07 Apr 2018 9:35 AM |
12154 Report

ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಬಿಎಂಟಿಸಿ ಬಸ್ಸುಗಳ ಟಿಕೆಟ್‌ ದರ ರದ್ದುಪಡಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವುದು. ಜತೆಗೆ ಖಾಸಗಿ ಶಾಲೆಗಳ ಡೊನೇಶನ್‌ ಹಾವಳಿಗೆ ಬ್ರೇಕ್‌ ಹಾಕಲಾಗುವುದು ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ ಹೇಳಿದ್ದಾರೆ.

ನಗರದಲ್ಲಿ 'ನಾಗರೀಕ ಸಮಾಜ ವೇದಿಕೆ' ಹಮ್ಮಿಕೊಂಡಿದ್ದ ವಿವಿಧ ಪಕ್ಷಗಳ ಮುಖಂಡರೊಂದಿಗಿನ ಚುನಾವಣಾ ಪ್ರಣಾಳಿಕೆ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ನಗರ ಸಂಚಾರ ದಟ್ಟಣೆ ನಿವಾರಣೆ ನೆಪದಲ್ಲಿ ಮೆಟ್ರೋಗಾಗಿ 40 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ, ಮೆಟ್ರೋದಿಂದ ಮಾತ್ರವೇ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಧ್ಯವಿಲ್ಲ. ಬದಲಿಗೆ ಬಿಎಂಟಿಸಿ, ಮೆಟ್ರೋ, ಮೋನೋ ರೈಲು ಎಲ್ಲವೂ ಸದ್ಬಳಕೆಯಾಗಬೇಕು.ಅದೇ ರೀತಿ ಬಿಎಂಟಿಸಿ ಪ್ರತಿಯೊಬ್ಬರೂ ಬಳಸುವಂತೆ ಉತ್ತೇಜಿಸಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್‌ ಉಚಿತ ಸೇವೆ ನೀಡಲಾಗುವುದು ಎಂದು ಭರವಸೆ ನೀಡಿದರು. ಬಿಎಂಟಿಸಿಗೆ ಪ್ರಯಾಣಿಕರಿಂದ ಮಾತ್ರವಲ್ಲದೇ ಬೇರೆ ರೀತಿಯ ಆದಾಯ ಕೂಡ ಇದೆ. ಪ್ರಸ್ತುತ ನಗರದ ವಿವಿಧ ಕಡೆ ಬಿಎಂಟಿಸಿ ಹೊಂದಿರುವ ಆಸ್ತಿಗಳು ಹಾಗೂ ಕಟ್ಟಡಗಳನ್ನು ಕಡಿಮೆ ಮೊತ್ತಕ್ಕೆ ಬಾಡಿಗೆಗೆ ನೀಡಿದೆ. ಇದನ್ನು ಸೂಕ್ತವಾಗಿ ನಿರ್ವಹಿಸಿದರೆ ಪ್ರತಿ ವರ್ಷ ಒಂದು ಸಾವಿರ ಕೋಟಿ ಆದಾಯ ಬರುತ್ತದೆ. ಹೀಗಾಗಿ ನಮ್ಮ ಸರ್ಕಾರ ಬಂದರೆ ಟಿಕೆಟ್‌ ಪದ್ದತಿಯನ್ನು ರದ್ದುಗೊಳಿಸಲಾಗುವುದು ಎಂದರು.ಪ್ರಸ್ತುತ ಬಸ್‌ ನಿರ್ವಾಹಕ ಟಿಕೆಟ್‌ ನೀಡಿ ಹಣ ಸಂಗ್ರಹಿಸುವುದು ವಾಡಿಕೆಯಲ್ಲಿದೆ. ಇದರ ಬದಲು ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್‌ ಹೆಸರಿನಲ್ಲಿ ಹಣ ಸಂಗ್ರಹವೇ ಮಾಡಬಾರದು. ಈ ಕ್ರಾಂತಿಕಾರಿ ಪ್ರಸ್ತಾವನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೇ ಇಟ್ಟಿದ್ದೆ. ಆದರೆ, ಅವರು ಸ್ಪಂಧಿಸಲ್ಲಿಲ್ಲ ಎಂದು ಸಿಂಧ್ಯಾ ಹೇಳಿದರು. ಖಾಸಗಿ ಶಾಲೆಗಳು ಡೊನೇಶ್‌ಗಾಗಿ ಭಿಕ್ಷುಕರಾಗಿ ಬದಲಾಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಬಂದರೆ ಡೊನೇಶನ್‌ ರದ್ದು ಮಾಡಲು ಪ್ರಯತ್ನಿಸುತ್ತೇವೆ. ಜತೆಗೆ ಆಹಾರ ಪೋಲು ತಡೆಯಲು ಕಾನೂನು ತರಲಾಗುವುದು. ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ಉದ್ಯೋಗಿಗಳಾಗಿ ಪರಿಗಣಿಸಿ 18 ಸಾವಿರ ಕನಿಷ್ಠ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ಚುನಾವಣೆಯಲ್ಲಿ ಕೋಟಿಗಳಲ್ಲಿ ಮಾತನಾಡುವುದು ಜಾಸ್ತಿಯಾಗಿದೆ. 

Edited By

Shruthi G

Reported By

hdk fans

Comments