ಬೊಂಬೆನಗರಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ತಿರುಗೇಟು ಕೊಟ್ಟ ದೇವೇಗೌಡರ ಕುಟುಂಬ

04 Apr 2018 2:20 PM |
7445 Report

ದೇವೇಗೌಡರಿಗೆ ದೇವೇಗೌಡರೇ ಸಾಟಿ, ಕುಮಾರಸ್ವಾಮಿ ಅವರಿಗೆ ಕುಮಾರಸ್ವಾಮಿ ಅವರೇ ಸಾಟಿ ಎಂದು ಅನಿತಾಕುಮಾರಸ್ವಾಮಿ ಗುಡುಗಿದರು. ಚನ್ನಪಟ್ಟಣದಲ್ಲಿ ನಡೆದ ವಿಕಾಸಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಮಾವನವರಾದ ದೇವೇಗೌಡರ ಬಗ್ಗೆ ಈ ಭಾಗದ ಶಾಸಕರು ಲಘುವಾಗಿ ಮಾತನಾಡಿದ್ದರು. ಅವರಿಗೆ ಬೇಕಾದರೇ ನಾನು ಜನರನ್ನು ಕಳಿಸಿಕೊಡುತ್ತೇವೆ ಎಂದಿದ್ದರು. ಅದಕ್ಕೆ ತಕ್ಕ ಉತ್ತರವನ್ನು ನೀವು ಇವತ್ತು ನೀಡಿದ್ದೀರಿ. ಸಿದ್ದರಾಮಯ್ಯನವರ ಸರ್ಕಾರ ಸಾಲಗಳ ಭಾಗ್ಯವನ್ನಾಗಿ ಮಾಡಿದ್ದಾರೆ. ಈ ಭಾಗದ ರಾಜಕಾರಣಿ (ಸಿ.ಪಿ.ಯೋಗೇಶ್ವರ್) ಕಮಿಷನ್ ಹೆಸರಿನಲ್ಲಿ ಲೂಟಿಯನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುವ ಚುನಾವಣೆಯಾಗಿದೆ ಎಂದರು.

ರಾಮನಗರ- ಚನ್ನಪಟ್ಟಣ ಎರಡು ಕ್ಷೇತ್ರಗಳು ಬೇಕು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ನಿರ್ಣಯವನ್ನು ಎಚ್ ಡಿಕೆ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹೋರಾಟ ಮಾಡಬೇಕು ಎಂದು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್.​ ಡಿ. ದೇವೇಗೌಡ ಹೇಳಿದರು. ಸಿಪಿವೈ ಅಧುನಿಕ ಭಗೀರಥ ಎಂದು ಶಿಲೆ ಹಾಕಿಕೊಂಡಿದ್ದಾರೆ.  ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲ್ಲ. ಎಚ್.ಡಿ.ಬ್ಯಾರೇಜ್ ಮಂಚನ ಬೆಲೆ ಕಟ್ಟಿಸಿದವರು ಯಾರು? ಯಾರು ಇಗ್ಗಲೂರಿನಲ್ಲಿ ಬ್ಯಾರೇಜ್ ಮಾಡಿ ಅಂತಾ ಅರ್ಜಿ ಹಾಕಿರಲಿಲ್ಲ.  ಇಲ್ಲಿ ನಮ್ಮ ಎದುರಾಳಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಟಾಂಗ್​ ನೀಡಿದರು. ಇದೇ ವೇಳೆ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.​ ಡಿ. ಕುಮಾರಸ್ವಾಮಿ ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ಚನ್ನಪಟ್ಟಣ.  ಚನ್ನಪಟ್ಟಣ ರಾಜಕೀಯ ಇತಿಹಾಸದಲ್ಲಿ ಇಂತಹ ಜೆಡಿಎಸ್ ಸಮಾವೇಶ ನಡೆದಿರಲಿಲ್ಲ. ಇವತ್ತಿನ ಕಾರ್ಯಕ್ರಮವನ್ನ ಬಹಳ ಕುತೂಹಲದಿಂದ ಕೂಡಿದೆ ಎಂದರು. ಈಗಾಗಲೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪ್ರಚಾರ ಪ್ರಾರಂಭಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ರೇಷ್ಮೆ ಬೆಳೆಗಾರರ ಸಂವಾದ ಹೇಗೆ ನಡೆಯಿತು ಅಂತಾನು ಗೊತ್ತು. ಇಲ್ಲಿನ ಶಾಸಕರ ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಪಟ್ಟಣಕ್ಕೂ ದೇವೇಗೌಡರಿಗೂ ಅಭಿನಾವ ಸಂಬಂಧ ಇದೆ. ಚನ್ನಪಟ್ಟಣದ ಸ್ಥಳೀಯ ಮುಖಂಡರಲ್ಲಿ ಯಾರಾದರೂ ಅಭ್ಯರ್ಥಿಯಾಗಿ ಅಂತಾ ಹೇಳಿದ್ದೆ .  ಅನಿತಾ ಅವರನ್ನ ಅಭ್ಯರ್ಥಿ ಮಾಡಿ ಅಂತಾ ಹೇಳುತ್ತಿದ್ದಾರೆ. ಈ ಚುನಾವಣೆ ನನಗೆ ಅಗ್ನಿ ಪರೀಕ್ಷೆಯಾಗಿದೆ ಎಂದರು.

ರಾಜ್ಯದ ಜನರ ಭಾವನೆಯಲ್ಲಿ 150-160 ಸ್ಥಾನ ಗೆಲ್ಲಿಸುವ ಉತ್ಸಾಹ ಇದೆ. ನಮ್ಮ ಅಪ್ಪನ ಆರೋಗ್ಯಕ್ಕಿಂತ ರಾಜ್ಯದ ರೈತರ ಹಿತ ಮುಖ್ಯ. 51 ಸಾವಿರ ಕೋಟಿ ರೈತರ ಸಾಲವನ್ನು 24  ಗಂಟೆಯಲ್ಲಿ ಮನ್ನಾ ಮಾಡುವ ಕನಸು ಕಂಡಿದ್ದೇನೆ.  ನಿಮ್ಮ ಮನೆ ಮಗ ನಾನೇ ಸಾಲ ಮನ್ನಾ ಮಾಡಬೇಕು.  ಚನ್ನಪಟ್ಟಣದ ಜನತೆ ಸಿದ್ದರಾಮಯ್ಯ ಅವರ ಜಾಹೀರಾತಿಗೆ ಮರುಳಾಗಬೇಡಿ. ದೇವೇಗೌಡರ ಕಾಲದಲ್ಲಿ ತಾಲ್ಲೂಕಿನ ಗರಕಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದರು.  ಸಿಪಿವೈ ನೀರಾವರಿ ಭಗೀರಥ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪಿತಾಮಹ ಹೆಚ್.ಡಿ.ದೇವೇಗೌಡ ಅವರು ಎಂದು ಹೇಳಿದರು. ದೇವೇಗೌಡರ ಬಗ್ಗೆ ಸಿಎಂ ಲಘುವಾಗಿ ಮಾತನಾಡುತ್ತಾರೆ. ಜೆಡಿಎಸ್ 15 ಬರುತ್ತಾ 30  ಬರುತ್ತಾ ಅಂತಾ ಲಘುವಾಗಿ ಮಾತನಾಡುತ್ತಾರೆ.  ಮೇ.18 ರಂದು ನಮ್ಮ ತಂದೆಯ ಹುಟ್ಟುಹಬ್ಬದಂದು ಜೆಡಿಎಸ್ ಸರಕಾರದ ಉಡುಗರೆ ಕೊಡಬೇಕು. ನೀವು ನನಗೆ ವಿಷವನ್ನಾದ್ರು ಕೊಡಿ ಹಾಲನ್ನಾದ್ರು ಕೊಡಿ. ರಾಮನಗರ- ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಿದ್ದ.  ಪ್ರತಿ ಹಳ್ಳಿಗಳಿಗೆ ಬಂದು ಪ್ರಚಾರ ಮಾಡಲು ಸಾಧ್ಯವಿಲ್ಲ. ಪ್ರತಿ ಮನೆಯ ಕಾರ್ಯಕರ್ತರೆ ಹೆಚ್.ಡಿ.ಕುಮಾರಸ್ವಾಮಿ ಅಂತಾ ತಿಳಿದುಕೊಳ್ಳಿ. ನನ್ನನ್ನ ಉಳಿಸಿಕೊಂಡ್ರೆ ಪ್ರತಿಯೊಂದು ಮನೆಯ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.


Edited By

Shruthi G

Reported By

hdk fans

Comments