ಸ್ಯಾಂಡಲ್ ವುಡ್ ನ ಈ ಸ್ಟಾರ್ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುತ್ತಾರಂತೆ..! ಆ ಸ್ಟಾರ್ ಯಾರು ಗೊತ್ತಾ?

04 Apr 2018 10:08 AM |
7051 Report

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಕನ್ನಡ ಚಲನಚಿತ್ರದ ಪ್ರಸಿದ್ಧ ನಿರ್ದೇಶಕ ಹಾಗೂ ನಟ ಉಪೇಂದ್ರ ಅವರು ಇತ್ತೀಚಿಗೆ ತಮ್ಮ ಬೆಂಬಲಿಗರು ಹಾಗೂ ಸ್ನೇಹಿತರೊಂದಿಗೆ ಸೇರಿ ಖಾಕಿ  ಬಣ್ಣದ ಶರ್ಟ್ ಧರಿಸಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು ( ಕೆಪಿಜೆಪಿ ) ಘೋಷಿಸಿದ್ದರು.

ಕಳೆದ ವರ್ಷದ ಅಕ್ಟೋಬರ್ ರಂದು ಮಹೇಶ್ ಗೌಡರವರು ನೋಂದಾಯಿಸಿರುವ ಕೆಪಿಜೆಪಿಯನ್ನು ಉಪೇಂದ್ರರವರು ಪುನಃ ಪ್ರಾರಂಭಿಸಿದರು. ಆದರೆ ಚುನಾವಣೆ ಹತ್ತಿರ ಬಂದಾಗ ಮಹೇಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉಪೇಂದ್ರ ನಡುವಿನ ಭಿನ್ನಾಭಿಪ್ರಾಯವು ಜೋರಾಯಿತು. ಪಕ್ಷದ ಟಿಕೇಟ್ ಆಯ್ಕೆ ವಿಷಯದಲ್ಲಿ ಉಪೇಂದ್ರರವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಮಹೇಶ್ ಅವರು ಆರೋಪಿಸಿದ್ದಾರೆ. ಹೀಗಾಗಿ ಉಪೇಂದ್ರ ಅವರು ಕೆಪಿಜೆಪಿ ತೊರೆದಿದ್ದು, ಮತ್ತೊಂದು ಪಕ್ಷವೊಂದನ್ನು ಪ್ರಾರಂಭಿಸುವುದಾಗಿ ಹೇಳಿದ್ದರು. ಉಪೇಂದ್ರ ಅವರು ಯಾವುದೇ ರಾಷ್ತ್ರೀಯ ಪಕ್ಷವನ್ನು ಸೇರದೆ ರಾಜ್ಯದ ಹಿತ ಕಾಯಲು ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ತನ್ನ ಆಪ್ತ ಬೆಂಬಲಿಗರ ಜೊತೆ ಹೇಳಿಕೊಂಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಉಪೇಂದ್ರರವರು ಕೆಪಿಜೆಪಿಯನ್ನು ಬಿಟ್ಟು ಕೆಲವು ಸ್ನೇಹಿತರ ಜೊತೆಗೂಡಿ ಬೇರೆ ಪಕ್ಷ ‘ಪ್ರಜಾಕೀಯ’ ಕಟ್ಟಲು ಹೊರಟ್ಟಿದ್ದರು. ಆದರೆ ಇನ್ನೂ ಪಕ್ಷದ ನೋಂದಣಿ ಆಗಿಲ್ಲ ಹಾಗೂ ಪಕ್ಷದ ಸಂಘಟನೆ, ಪಕ್ಷದ ಯಾವುದೇ ಕಾರ್ಯಗಳು ಆರಂಭವಾಗದೇ ಇರುವ ಕಾರಣ ಉಪೇಂದ್ರರವರು ಈ ಬಾರಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಲು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಸಿದ್ದರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Edited By

Shruthi G

Reported By

hdk fans

Comments