ಸಾರ್ವಜನಿಕ ಸೇವಾ ಪ್ರಶಸ್ತಿ ವಿಜೇತೆ ಸುಕನ್ಯಾ ಮಂಜುನಾಥ್ "ಕೈ" ತೆಕ್ಕೆಗೆ

02 Apr 2018 10:11 PM |
495 Report

ಕೊರಟಗೆರೆ ಏ.:- ಸಾರ್ವಜನಿಕ ಸೇವೆಯ ದೃಷ್ಠಿಯಿಂದ ಜೆಡಿಎಸ್ ಪಕ್ಷ ತೊರೆದು ನೂರಾರು ಮುಖಂಡರೊಂದಿಗೆ ಸಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ತಾ.ಪಂ ಅಧ್ಯಕ್ಷೆಯೂ ಆದ ಸಾರ್ವಜನಿಕ ಸೇವಾ ಪ್ರಶಸ್ಥಿ ವಿಜೇತೆ ಸುಕನ್ಯಮಂಜುನಾಥ್ ಗೆ ನಾನು ಸಾತ್ ನೀಡುತ್ತೇನೆ  ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್     ಸಾರ್ವಜನಿಕ ಸೇವೆಗೆ ಹೆಚ್ಚಿನ ಸಹಕಾರ ನೀಡುತ್ತೇನೆ ಎಂದು ವಾಗ್ವಾನ ಮಾಡಿದ್ದಾರೆ.   

       ತಾಲೂಕಿನ ಐ.ಕೆ.ಕಾಲೋನಿ ಗ್ರಾಮದಲ್ಲಿ ಸುಕನ್ಯಮಂಜುನಾಥ್ರ ಮನೆಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

       ಡಾ.ಜಿ.ಪರಮೇಶ್ವರ್ ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಉತ್ತಮ ಸೇವೆ ಮಾಡಿರುವ ದೆಹಲಿಯಲ್ಲಿ ಸಾರ್ವಜನಿಕ ಸೇವಾ ಪ್ರಶಸ್ತಿ ಪುರಸ್ಕೃತೆ ಸುಕನ್ಯಮಂಜುನಾಥ್ ತಮ್ಮ ಸಂಗಡಿಗರೊಂದಿಗೆ ಜೆಡಿಎಸ್ ಪಕ್ಷವನ್ನು ತೊರೆದ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ  ಮಾಡಿಕೊಂಡು ಮಾತನಾಡಿದರು. 

     ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೊಂದಿಗೆ ಪ್ರವಾಸ ಮಾಡಿದ ಸಂದರ್ಭಧಲ್ಲಿ ರಾಜ್ಯದ ಎಲ್ಲಾ ಕಡೆ ಕಳೆದ 5 ವರ್ಷಗಳ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದು ಅದರಲ್ಲೂ ಸಹಕಾರ ಬ್ಯಾಂಕ್ಗಳಲ್ಲಿನ ರೈತರ 50 ಸಾವಿರ ರೂಗಳ ಸಾಲ ಮನ್ನ, ಶಾಲಾ ಮಕ್ಕಳಿಗೆ ಶೈಕ್ಷಣಿಕ ಅಭಿವೃಧ್ದಿಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಬಡಜನತೆಗೆ ವಿವಿಧ ಯೋಜನೆಗಳನ್ನು ನೀಡಿರುವ ಹಿನ್ನಲೆಯಲ್ಲಿ ಮತದಾರರು ಕಾಂಗ್ರಸ್ ಪರ ಒಲವು ತೋರುತ್ತಿದ್ದಾರೆ ಎಂದರು.

ಕುತಂತ್ರದ ರಾಜಕಾರಕ್ಕೆ ಬೇಸತ್ತು ಪಕ್ಷಬಿಟ್ಟಿದ್ದೇನೆ


       ಜೆಡಿಎಸ್ ಪಕ್ಷದಲ್ಲಿನ ಕುತಂತ್ರ ರಾಜಕಾರಣಕ್ಕೆ ಬೇಸತ್ತು ಕೊರಟಗೆರೆ ಕ್ಷೇತ್ರದ ಮುಂದಿನ ಅಭಿವೃಧ್ದಿಯ ಭವಿಷ್ಯದ ದೃಷ್ಠಿ ಯಿಂದ ಉತ್ತಮರಾಜಕಾರಣಿ ಎಂದು ಹೆಸರು ಪಡೆದಿರವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರವರನ್ನು ಬೆಂಬಲಿಸಲು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಜನಪರ ಯೋಜನೆಗಳಿಂದಾಗಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಲೆ ಎದ್ದಿದ್ದು, ಡಾ.ಜಿ.ಪರಮೇಶ್ವ ರ್ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳುತ್ತಿದ್ದು ಪಕ್ಷವನ್ನು ಮತ್ತಷ್ಟು ಬಲಪಡಿಸುವ ದೃಷ್ಠಿಯಿಂದ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಸುಕನ್ಯ ಮಂಜುನಾಥ್ ತಮ್ಮ ಮನದಾಳದ ಮಾತನ್ನು ತಿಳಿಸಿದ್ದಾರೆ.

ಯಾರ್ಯಾರು ಪಕ್ಷ ತೊರೆದ್ರು:-


        ಮಾಜಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುಖಂಡ ಮಾವತ್ತೂರು ವೆಂಕಟಪ್ಪ, ಮಾಜಿ ತಾ.ಪಂ.ಸದಸ್ಯ ಕ್ಯಾಶವಾರ ಹನುಮಂತರಾ ಯಪ್ಪ, ನೀಲಗೊಂಡನಹಳ್ಳಿ ಸತೀಶ್, ಗ್ರಾ.ಪಂ. ಮಾಜಿ ಸದಸ್ಯರುಗಳಾದ ಲಕ್ಷ್ಮೀಷಯ್ಯ, ವೆಂಕಟೇಶ್, ಗುತ್ತಿಗೆದಾರ ಬುಡ್ಡಯ್ಯ, ವೆಂಕಟರವಣಯ್ಯ, ಸಿದ್ದನಂಜಯ್ಯ, ಲಕ್ಷ್ಮಯ್ಯ, ಚಿಕ್ಕಹನುಮಯ್ಯ, ರಾಮಣ್ಣ, ತಾಲೂಕು ಬಿಜೆಪಿ ಉಪಾಧ್ಯಕ್ಷ ಶಿವಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೇಸ್ ಗೆ  ಸೇರ್ಪಡೆಯಾದರು.
      ಈ ಸಂದರ್ಭದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ವೀಕ್ಷಕ ಅನಿಲ್ಕುಮಾರ್ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ದಿನೇಶ್, ಜಿ.ಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ, ಪ್ರಸನ್ನಕುಮಾರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ  ಇತರರು ಇದ್ದರು. (ಚಿತ್ರ ಇದೆ) 

Edited By

Raghavendra D.M

Reported By

Raghavendra D.M

Comments