ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆಗೆ ಸಾರ್ವಜನಿಕರ ಸಹಕರಿಸಿ: ಪ್ರೇಮ್ ಕುಮಾರ್

02 Apr 2018 9:57 PM |
338 Report

ಕೊರಟಗೆರೆ ಏ.:- ವಿಧಾನಸಭಾ ಚುನಾವಣೆಯನ್ನು ಶಾಂತಿಯುತ  ಮತ್ತು ಯಶಸ್ವಿಯಾಗಿ ನಡೆಸಲು ಕೊರಟಗೆರೆ ಕ್ಷೇತ್ರದ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಪ್ರೇಮ್ ಕುಮಾರ್  ಮನವಿ ಮಾಡಿದರು.      ಪಟ್ಟಣದ ತಾಲೂಕು ಆಡಳಿತ ಸಭಾಂಗಣದಲ್ಲಿ ಸೋಮವಾರ  ಏರ್ಪಡಿಸಲಾಗಿದ್ದ  ವಿಧಾನಸಭಾ  ಚುನಾವಣೆಯ ವಿಶೇಷ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.         

 ಕೊರಟಗೆರೆ ಏ:-  ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 242 ಮತ ಕೇಂದ್ರಗಳಲ್ಲಿ 69 ಅತಿಸೂಕ್ಷ್ಮ, 43ಸೂಕ್ಷ್ಮ, 123ಮಾದರಿ ಮತ ಕೇಂದ್ರಗಳಾಗಿ ವಿಂಗಡಣೆ ಮಾಡಲಾಗಿದೆ. ಚನ್ನಸಾಗರ, ಟಿ.ಗೊಲ್ಲಹಳ್ಳಿ, ಗುಂಡಿನಪಾಳ್ಯ 3ಮತ ಕೇಂದ್ರವನ್ನು ಕ್ಷೇತ್ರವನ್ನು ಆಯ್ದ ಗಂಬೀರ ಅತಿಸೂಕ್ಷ್ಮ ಕೇಂದ್ರವೆಂದು ಪರಿಗಣಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 22 ಮಾರ್ಗಗಳ ಗುರುತು ಮಾಡಲಾಗಿದ್ದು 22  ಅಧಿಕಾರಿಗಳು ಪ್ರತಿದಿನ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

        ಕ್ಷೇತ್ರದಲ್ಲಿ ಒಟ್ಟು 1,99,517 ಮತದಾರರಿದ್ದಾರೆ. ಅದರಲ್ಲಿ ಪುರುಷರು 100240, ಮಹಿಳೆಯರು 99320  ಸೇರಿದಂತೆ ತೃತೀಯ ಲಿಂಗ 22 ಜನರಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮತದಾನ ಕೆಲಸಕ್ಕೆ ಆಯ್ಕೆಯಾಗಿದ್ದು 1640 ಜನರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿಲಾಗಿದೆ. ಅಕ್ರಮ ಹಣ ಮತ್ತು ಶಾಂತಿಯುವ ಮತದಾನಕ್ಕಾಗಿ ಕ್ಷೇತ್ರದಲ್ಲಿ 6 ಮೊಬೈಲ್ ತಂಡಗಳನ್ನು ರಚನೆ ಮಾಡಲಾಗಿದೆ. ದೂರುಗಳಿದ್ದರೇ 08138-232153ಗೆ ಕರೆ ಮಾಡಲು  ಸೂಚಿಸಿದ್ದಾರೆ.

     ಮಾರ್ಚ್  27 ರಿಂದ ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಏ.17 ರಿಂದ 24 ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಏ.25 ರಂದು ನಾಮಪತ್ರ ಪರಿಶೀಲನೆ ಮತ್ತು ಏ.27ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ.12ರಂದು ಮತದಾನ ನಡೆಯಲಿದ್ದು ಮೇ.15ರಂದು ಫಲಿತಾಂಶ ಪ್ರಕಟಣೆ. ಮೇ 18ರಂದು ಚುನಾವಣೆಯ ನೀತಿ ಸಂಹಿತೆ ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದರು.       

ಆಯೋಗದ ಹದ್ದಿನ ಕಣ್ಣು:- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಹಲವಾರು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ವ್ಯಕ್ತಿಗಳು ಹಣಕಾಸು ವ್ಯವಹಾರ ಮಾಡುವವರು 50ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸುತ್ತೀದ್ದಲ್ಲಿ ಸೂಕ್ತ ದಾಖಲೆ ಹೊಂದಿರಬೇಕು. 2ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿದವರ ವಿವರವನ್ನು ಬ್ಯಾಂಕಿನಿಂದ ಪ್ರತಿದಿನ ಮಾಹಿತಿ ಪಡೆಯಲಾಗುವುದು. ದಾಖಲಾತಿ ಸಿಗದಿದ್ದಲ್ಲಿ ಅಂತಹವರ ಹಣವನ್ನು ವಶಕ್ಕೆ ಪಡೆಯಲಾಗುವುದು.

4 ಕಡೆ ಚೆಕ್ ಪೋಷ್ಟ್ :- ಕ್ಷೇತ್ರದಲ್ಲಿ ಅಕ್ರಮವನ್ನು ತಡೆಯಲು ಮತ್ತು ಕಟ್ಟುನಿಟ್ಟಾಗಿ ಚುನಾವಣೆ ನಡೆಸುವ ಸಲುವಾಗಿ ಕ್ಷೇತ್ರದ ಬೈರೇನಹಳ್ಳಿ, ತೋವಿನಕೆರೆ, ಊರ್ಡಗೆರೆ ಮತ್ತು ಕೋಳಾಲ ವ್ಯಾಪ್ತಿಯಲ್ಲಿ  ಒಟ್ಟು 4 ಕಡೆ  ಚೆಕ್ ಪೋಸ್ಟ್ ತೆರೆಯಲಾಗಿದೆ.  ಪ್ರತಿಯೊಂದು ಚೆಕ್ ಪೋಸ್ಟ್ 6 ಜನರ ಒಳಗೊಂಡ ತಂಡ ದಿನದ 24ಗಂಟೆಯೂ ಮೂರು ಪಾಳೇಯದಲ್ಲಿ ತಪಾಸಣೆ ಕಾರ್ಯ ನಡೆಸಲಿದ್ದಾರೆ. ಸಾರ್ವಜನಿಕರು ಸೌಜನ್ಯದಿಂದ ವರ್ತಿಸುವ ಮೂಲಕ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.

ಕ್ಷೇತ್ರದಲ್ಲಿ ಈಗಾಗಲೇ 6ವಿವಿಧ ಸಂಚಾರಿ ತಂಡಗಳನ್ನು ರಚಿಸಲಾಗಿದೆ. ರಾಜಕೀಯ ಉದ್ದೇಶಕ್ಕಾಗಿ ರಾಜಕಾರಣಿಗಳು ಆಯೋಜನೆ ಮಾಡುವ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚುನಾವಣೆಗಾಗಿ ನಿಯೋಜನೆ ಆಗಿರುವ ಅಧಿಕಾರಿಗಳು ವೀಡಿಯೋ ಚಿತ್ರೀಕರಣ ಮಾಡಿ ಕಾರ್ಯಕ್ರಮಕ್ಕೆ ತಗಲಿರುವ ವೆಚ್ಚವನ್ನು ನಿರ್ಧರಿಸಿ ಅಭ್ಯರ್ಥಿಗಳ ಹೆಸರಿಗೆ ಸೇರಿಸುವ ಕಾರ್ಯ ಮಾಡಲಿದೆ.ಕಾರ್ಯಕ್ರಮಗಳಲ್ಲಿ ವೈಯಕ್ತಿಕ ನಿಂದನೆ, ಜಾತಿ ಮತ್ತು ಧರ್ಮದ ಬಗೆ ನಿಂದನೆಯಾಗಿದೆಯೇ ಎಂಬುದನ್ನು ಸಹ ಪರಿಶೀಲನೆ ಮಾಡಲಾಗುವುದು ಎಂದರು.

ರಾಜಕಾರಣಿಗಳ ಜಾಹಿರಾತುಗಳನ್ನು ದೃಶ್ಯಮಾದ್ಯಮ ಮತ್ತು ಪತ್ರಿಕೆಯಲ್ಲಿ ಪ್ರಕಟಣೆ ಮಾಡಲು ತುಮಕೂರು ಜಿಲ್ಲಾ ಚುನಾವಣೆ ಆಯುಕ್ತರ ಪರವಾನಗಿ ಪಡೆಯಬೇಕು. ಪೇಸ್ ಬುಕ್, ವಾಟ್ಸಪ್ ಮತ್ತು ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಾಯಕರ ಪರವಾಗಿ ಪೋಸ್ಟ್ ಅಪ್ಲೋಡ್ ಮತ್ತು ಶೇರ್ ಮಾಡಲು ಜಿಲ್ಲಾ ಸಾಮಾಜಿಕ ಜಾಲತಾಣದ ವಿಭಾಗದ ಮುಖ್ಯಸ್ಥರ ಪರವಾನಗಿ ಕಡ್ಡಾಯವಾಗಿದ್ದು ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ ಸೂಚನೆ ನೀಡಿದರು.

ಕೊರಟಗೆರೆ ಕ್ಷೇತ್ರದಲ್ಲಿ ಚುನಾವಣೆ ಕಾರ್ಯಕ್ರಮ, ಮದುವೆ, ಜಾತ್ರೆ ನಡೆಸಲು ಚುನಾವಣಾಧಿಕಾರಿ ಹತ್ತಿರ ಪರವಾನಗಿ ಪಡೆಯಬೇಕು. ಮುಂಜಾನೆ 8ರಿಂದ ರಾತ್ರಿ 10ಗಂಟೆಯ ವರೇಗೆ ಮಾತ್ರ ಮೈಕ್ ಬಳಸಲು ಅವಕಾಶವಿದೆ. ರಾತ್ರಿ ಪಾಳೇಯದಲ್ಲಿ ನಡೆಯುವ ನಾಟಕವನ್ನು ನಿಷೇದಿಸಲಾಗಿದೆ. ಸುದ್ದಿಗೋಷ್ಟಿಯಲ್ಲಿ ಉಪಚುನಾವಣೆ ಅಧಿಕಾರಿ ಗಿರೀಶ್, ಕಂದಾಯ ಇಲಾಖೆಯ ಗುರುಪ್ರಸಾದ್ ಸೇರಿದಂತೆ ಇತರರು ಇದ್ದರು. 

                                                              &n

Edited By

Raghavendra D.M

Reported By

Raghavendra D.M

Comments