ಜಮೀರ್ ವಿರುದ್ಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟ 'ಕೈ' ಬಿಟ್ಟು 'ತೆನೆ' ಹೊತ್ತ ನಾಯಕ...!!

02 Apr 2018 2:32 PM |
15686 Report

ಇಂದು ಜೆಡಿಎಸ್​ ಕಚೇರಿಯಲ್ಲಿ ಅಲ್ತಾಫ್​ ಖಾನ್ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದರು. ಇದೇ ವೇಳೆ ಮಾತನಾಡಿದ ಅವರು, ಮತ ಹಾಕಿಸುವಂತೆ ಜಮೀರ್​ ತನ್ನ ಕೈಕಾಲು ಹಿಡಿದು ಬೇಡಿದ ವಿಡಿಯೋ ಮತ್ತು ಅಕ್ರಮಗಳ ದಾಖಲೆ ತಮ್ಮ ಬಳಿ ಇದೆ ಎಂದು ಹೇಳಿದರು, ಇದೇ ವೇಳೆ ಅವರು ಮಾತನಾಡುತ್ತ ಜಮೀರ್ ಮುಸ್ಲಿಂ ನಾಯಕ ಆದರೆ, ನಾನು ಜನನಾಯಕ. ಚಾಮರಾಜಪೇಟೆ ಒಂದೇ ಅಲ್ಲ ಎಲ್ಲ ಕ್ಷೇತ್ರದಲ್ಲಿ ಓಡಾಡುತ್ತೇನೆ, ಪಕ್ಷ ಸಂಘಟಿಸುತ್ತೇನೆ ಎಂದರು.

ಚಾಮರಾಜಪೇಟೆಯಲ್ಲಿ ಮನೆ ಮಾಡು, ಬಾಡಿಗೆ, ಅಡ್ವಾನ್ಸ್ ನಂದು, ನಿನ್ನ ಕೈ ಹಿಡಿತೀನಿ, ಕಾಲು ಹಿಡ್ಕೋತೀನಿ. ಓಟು ಹಾಕಿಸು ಎಂದು ಜಮೀರ್ ಬೇಡಿಕೊಂಡ ವಿಡಿಯೋ ನನ್ನ ಬಳಿ ಇದೆ. ಅದನ್ನು ಕೂಡಲೇ ಬಿಡುಗಡೆ ಮಾಡುತ್ತೇನೆ. ಹೀಗಂತ ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿರುವ ಚಾಮರಾಜಪೇಟೆಯ ಸ್ಥಳೀಯ ಮುಖಂಡ ಅಲ್ತಾಫ್​ ಖಾನ್​, ಜಮೀರ್​ ಅಹ್ಮದ್​ ವಿರುದ್ಧ ಹರಿಹಾಯ್ದಿದ್ದಾರೆ.

 

Edited By

Shruthi G

Reported By

hdk fans

Comments