ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ತಂತ್ರಕ್ಕೆ ಸೆಡ್ಡು ಹೊಡೆದ ಜೆಡಿಎಸ್..!!

02 Apr 2018 11:44 AM |
9202 Report

ರಾಜಕೀಯದಲ್ಲಿ ಎಷ್ಟೆ ಆಮಿಷ ಹೊಡ್ಡಿದ್ದರೂ ಕೂಡ ಜನ ನಿರ್ಧಾರ ಮಾಡುವುದು ಒಬ್ಬ ಒಳ್ಳೆಯ ಜನನಾಯಕನ್ನೆ ಹೊರತು ಮತ್ಯಾರನ್ನೂ ಅಲ್ಲ. ಆಮಿಷಗಳನ್ನು ಹೊಡ್ಡಿ ಮತ ಹಾಕಿಸಿಕೊಂಡು ರಾಜಕೀಯ ಎಂಬ ಚದುರಂಗದ ಆಟಕ್ಕೆ ಎಷ್ಟೋ ಮುಖಂಡರು ಬಂದ್ರೂ ಕೂಡ ಅವರಲ್ಲಿ ಉಳಿಯೋ ದಾಳಗಳು ಮಾತ್ರ ಬಲಿಷ್ಟವಾದವು. ಅದಕ್ಕೆ ಸಾಕ್ಷಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಕಾಸಪರ್ವಕ್ಕೆ ಸೇರಿದ್ದ ಜನ ಸಾಗರ.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ವಿಕಾಸಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಬ್ಯಾಂಕಿನಲ್ಲಿರುವ ರೈತರ 51 ಸಾವಿರ ಕೋಟಿ ಮತ್ತು ಸ್ತ್ರೀಶಕ್ತಿ ಸಂಘದ 4300 ಕೋಟಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ತಿಳಿಸಿದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ರಾಜ್ಯದ ರೈತರ ಅಭಿವೃದ್ದಿ ಸಾಧ್ಯವಿಲ್ಲ. ರಾಜ್ಯದಲ್ಲಿ ಆರೋಪ, ಪ್ರತ್ಯಾರೋಪದಲ್ಲಿಯೇ ಕಾಲ ಕಳೆದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕೊನೆಗಾಲ ಹತ್ತಿರವಾಗಿದೆ ಎಂದು ಹೇಳಿದರು. ವಿಕಾಸಪರ್ವ ಕಾರ್ಯಕ್ರಮಕ್ಕೆ ಜನರನ್ನು ಬರದಂತೆ ತಡೆಯಲು ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದ ಪ್ರತಿ ಭೂತ್‍ಗೂ ತಲಾ 10 ಸಾವಿರದಂತೆ 24 ಲಕ್ಷಕ್ಕೂ ಅಧಿಕ ಹಣ ನೀಡಿದ್ದರೂ ಸಹ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಅಧಿಕ ಜನ ಆಗಮಿಸಿರುವುದೇ ಜೆಡಿಎಸ್ ಭದ್ರಕೋಟೆಗೆ ಸಾಕ್ಷಿಯಾಗಿದೆ ಎಂದರು. ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಕ್ಷೇತ್ರದ ಮನೆಮಗನಾಗಿ ಪ್ರಾಮಾಣಿಕವಾಗಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನತೆ ನನಗೆ ತೋರಿಸಿದ ಪ್ರೀತಿ, ವಿಶ್ವಾಸದ ಋಣವನ್ನು ನಾನು ಸಾಯುವವರೇಗೂ ಅವರ ಸೇವೆಗೆ ಮೀಸಲಿಡುವ ಮೂಲಕ ತೀರಿಸುತ್ತೇನೆ ಎಂದು ಹೇಳಿದರು. ಜೆಡಿಎಸ್ ಯುವ ರಾಜ್ಯಧ್ಯಕ್ಷ ಮಧುಬಂಗಾರಪ್ಪ ಮಾತನಾಡಿ, 5 ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಬರುವ ಧನನಾಯಕ ಬೇಕೋ.. ಕೊರಟಗೆರೆ ಕ್ಷೇತ್ರದಲ್ಲಿಯೇ ಹುಟ್ಟಿಬೆಳೆದು 3ಬಾರಿ ಜಿಪಂ ಸದಸ್ಯ ಮತ್ತು ಶಾಸಕನಾಗಿ ತಮ್ಮ ಗ್ರಾಮಕ್ಕೆ ಬಂದು ಬಡಜನರ ಸೇವೆ ಮಾಡುವ ಜನಸೇವಕ ಬೇಕೊ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಪಿ.ಆರ್.ಸುಧಾಕರಲಾಲ್ ಮತ್ತು ಕುಮಾರಣ್ಣ ಯುವಪಡೆ ವತಿಯಿಂದ ಕುಮಾರಸ್ವಾಮಿಗೆ 50ಕೆಜಿಯ ಪಂಚಲೋಹದ ಜೆಡಿಎಸ್ ಪಕ್ಷದ ಚಿಹ್ನೆಯ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. 

 

 

Edited By

Shruthi G

Reported By

hdk fans

Comments