ಜ಼ಮೀರ್ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಪ್ರಭಾವಿ ಕೈ ನಾಯಕ ಜೆಡಿಎಸ್ ಗೆ ಸೇರ್ಪಡೆ..!!

02 Apr 2018 10:21 AM |
11010 Report

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ಪಕ್ಷಾಂತರ ಪರ್ವ ಹೆಚ್ಚಿದೆ. ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರಗಳು ಉಲ್ಟಾ ಆದಾಗ ಪಕ್ಷಗಳನ್ನ ಬದಲಿಸುವ ಕ್ರಿಯೇ ಆರಂಭವಾಗುತ್ತೆ. ಅಲ್ಲಿದ್ದವರು ಇಲ್ಲಿಗೆ ಇಲ್ಲಿದ್ದವರು ಅಲ್ಲಿಗೆ ಎಂಬಂತೆ ಬದಲಾವಣೆ ಆಗುತ್ತಲ್ಲೇ ಇರುತ್ತೆ.

ರಾಜಕಾರಣದ ಬದಲಾವಣೆಯಲ್ಲಿ ಒಂದು ಸುದ್ಧಿ ಸಂಚಲನ ಮೂಡಿಸಿದೆ.ಕಾಂಗ್ರೆಸ್ ಪಕ್ಷದಲ್ಲಿದ್ದ ಅಲ್ತಾಫ್ ಈಗ ಜೆಡಿಎಸ್ ಅಂಗಳದಲ್ಲಿದ್ದಾರೆ. ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಅಲುಗಾಡಿಸುವರೇ ಇಲ್ಲಾ ಎಂದು ಜಮೀರ್ ಅಹಮದ್ ಬೀಗುತ್ತಿದ್ದರು,ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ಅಹಮದ್ ಮುಂದೆ ತಾವೇ ಬೆಳೆದ ಜೆಡಿಎಸ್ ಪಕ್ಷದ ಬಗ್ಗೆ ಪುಂಕಾನು ಪುಂಕವಾಗಿ ಟೀಕೆಗಳನ್ನ ಮಾಡುತ್ತಲ್ಲೇ ಬಂದಿದ್ದರು.ಎಲ್ಲವನ್ನೂ ಮೌನದಿಂದಲ್ಲೇ ನೋಡುತ್ತಾ ಸುಮ್ಮನಿದ್ದ ದೇವೇಗೌಡರು ಈಗ ದಿಢೀರ್ ಅಂತ ಜಮೀರ್ ಗೆ ಜರ್ಕ್ ಹೊಡಿಯುವಂತೆ ಮಾಡಿದ್ದಾರೆ. ಚಾಮರಾಜಪೇಟೆಯಲ್ಲ ಅಲ್ತಾಫ್ ಖಾನ್ ಹವಾ ಚೂರಾಗಿದೆ.ಹಿರಿಯರು ಕಿರಿಯರು ಹೀಗೆ ಎಲ್ಲಾ ವರ್ಗದ ಜನರನ್ನ, ಎಲ್ಲಾ ಧರ್ಮದ ಜನರನ್ನ ಸಮಾನವಾಗಿ ಪ್ರೀತಿ ವಿಶ್ವಾಸಗಳಿಂದ ಸ್ವೀಕರಿಸುವ ಅಲ್ತಾಫ್ ಆ ಭಾಗದಲ್ಲಿ ಜನಮನವನ್ನ ಗೆದ್ದಿದ್ದಾರೆ. ಪ್ರತಿ ಬಡಾವಣೆಯಲ್ಲೂ ತಮ್ಮದೇ ನೆಟ್ ವರ್ಕ್ ಹೊಂದಿದ್ದಾರೆ.ಅವರ ಕರೆಗೆ ಜನಸಾಗರ ಹರಿದು ಬರುತ್ತೆ. ಅಲ್ತಾಫ್ ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಬಹುದೊಡ್ಡ ಜನಶಕ್ತಿಯನ್ನ ಹೊಂದಿದ್ದಾರೆ. ಅಲ್ತಾಫ್ ಖಾನ್ ಗೆ ಕಾಂಗ್ರೆಸ್ ಟಿಕೆಟ್ ಖಚಿತವೆಂಬುದು ಬಹುತೇಕ ಕನ್ ರ್ಫಮ್ ಆಗಿದ್ದ ಸಂದರ್ಭದಲ್ಲೇ ಜಮೀರ್ ಅಹಮದ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.ಅಲ್ಲಿಗೆ ಅಲ್ತಾಫ್ ಗಿದ್ದ ಸೀಟಿನ ಮೇಲೆ ಜಮೀರ್ ಕುಳಿತುಬಿಟ್ಟರು.ಇತ್ತ ಜೆಡಿಎಸ್ ಗೂ ಒಬ್ಬ ಪ್ರಭಾವಿ ಅಭ್ಯರ್ಥಿ ಅಗತ್ಯವಿತ್ತು. ಜಮೀರ್ ಮುಂದೆ ಜಬರ್ ದಸ್ತಾಗಿ ನಿಲ್ಲುವ ಖಡಕ್ ವ್ಯಕ್ತಿಗೆ ದೇವೇಗೌಡರು ಕಾದಿದ್ದರು,ಸಮಯಕ್ಕೆ ಸರಿಯಾಗಿ ಅಲ್ತಾಫ್ ಖಾನ್ ಜೆಡಿಎಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.ಕಾಂಗ್ರೆಸ್ ಕೋಟೆಯಿಂದ ದೊಡ್ಡ ಪಡೆಯೊಂದಿಗೆ ಹೊರಬರುತ್ತಿರುವ ಅಲ್ತಾಫ್ ಜೆಡಿಎಸ್ ಗೆ ಲಾಭದಾಯಕವಾಗಿ ಪರಿಣಮಿಸುತ್ತಾರೆ. ಇಂದು ಅಲ್ತಾಫ್ ತಮ್ಮ ಬೃಹತ್ ಬೆಂಬಲಿಗರೊಂದಿಗೆ ಜೆ.ಪಿ ಭವನದಲ್ಲಿ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

Edited By

Shruthi G

Reported By

hdk fans

Comments