ಪ .ಪಂ ಚುನಾವಣೆ ಲೆಕ್ಕಾಚಾರದಲ್ಲಿ ತೊಡಗಿರುವ ಸ್ಪರ್ಧಾಳುಗಳು.

28 Mar 2018 7:56 PM |
371 Report

ಕೊರಟಗೆರೆ ಮಾ:-ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಕೊರಟಗೆರೆ ಪಟ್ಟಣ ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳ ಕರುಡು ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ ಈ ಕುರಿತಂತೆ ರಾಜ್ಯ ಅಧಿಸೂಚನೆ ಹೊರಡಿಸಿದೆ, ಅಧಿಕೃತವಾಗಿ ರಾಜ್ಯಪತ್ರದಲ್ಲಿಯೂ ವಿವರ ಪ್ರಕಟಿಸಲಾಗಿದ್ದು ಪಟ್ಟಣದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

 

2018 ರಲ್ಲಿ ಅಧಿಕಾರಾವಧಿ ಪೂರ್ಣಗೊಳಿಸುವ ಕೊರಟಗೆರೆ ಪಟ್ಟಣ ಪಂಚಾಯಿತಿ ನಿಗದಿತ ಸಮಯದಲ್ಲಿಯೇ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು ಅವಧಿ ಪೂರ್ಣಗೊಳುವ ಮುನ್ನವೇ 2011 ರ ಜನಗಣತಿ ಆಧಾರದ ಮೇಲೆ ವಾರ್ಡ್  ಪುನರ್ ವಿಂಗಡಣೆಗೊಳಿಸಿ ಮತ್ತು ನಿಯಮಾನುಸಾರ ಕಳೆದ ಸಾಲಿನಲ್ಲಿದ್ದ 14 ವಾರ್ಡ್ ಳೊಂದಿಗೆ ಈ ಬಾರಿ ಮತ್ತೊಂದು ವಾರ್ಡ್ ಒಟ್ಟು 15 ವಿಂಗಡನೆ ಮಾಡಿ ಮೀಸಲಾತಿ ಕರಡು ಪಟ್ಟಿ ಸಿದ್ದಪಡಿಸಿ ಸಾರ್ವಜನಿಕರಿಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಕೊರಟಗೆರೆ ಪಟ್ಟಣ ಪಂಚಾಯಿತಿ ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ:-(ಒಟ್ಟು 15 ವಾರ್ಡ್ಳ) 1ನೇ ವಾರ್ಡ್  ಪಂಗಡ, 2ನೇ ವಾಡರ್್ ಸಾಮಾನ್ಯ, 3ನೇ ವಾರ್ಡ್  ಪರಿಶಿಷ್ಟ ಜಾತಿ ಮಹಿಳೆ, 4ನೇ ವಾಡರ್್ ಪರಿಶಿಷ್ಟ ಜಾತಿ, 5ನೇ ವಾಡ್ ಪರಿಶಿಷ್ಟ ಜಾತಿ, 6ನೇ ವಾರ್ಡ್ ಸಾಮಾನ್ಯ, 7ನೇ ವಾರ್ಡ್ ಹಿಂದುಳಿದವರ್ಗ-2, 8ನೇ ವಾರ್ಡ್ ಪರಿಶಿಷ್ಟ ಪಂಗಡ, 9ನೇ ವಾರ್ಡ್ ಸಾಮಾನ್ಯ ಮಹಿಳೆ, 10ನೇ ವಾರ್ಡ್ ಪರಿಶಿಷ್ಠ ಪಂಗಡ ಮಹಿಳೆ, 11ನೇ ವಾರ್ಡ್  ಸಾಮಾನ್ಯ, 12ನೇ ವಾರ್ಡ್ ಸಾಮಾನ್ಯ, 13ನೇ ವಾರ್ಡ್  ಸಾಮಾನ್ಯ ಮಹಿಳೆ, 14ನೇ ವಾರ್ಡ್ ಸಾಮಾನ್ಯ ಮಹಿಳೆ, 15ನೇ ವಾರ್ಡ್ ಸಾಮಾನ್ಯ ಮಹಿಳೆ.
ಲಭ್ಯ ಮಾಹಿತಿ ಪ್ರಕಾರ ಚುನಾವಣಾ ಆಯೋಗವು ಆಗಸ್ಟ್ ನಂತರ ಆದಿಕಾರವಧಿ ಪೂರ್ಣಗೊಳ್ಳಲಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಇದು ಸ್ಪರ್ಧಾಳುಗಳು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ ಎನ್ನಲಾಗಿದೆ.

 

Edited By

Raghavendra D.M

Reported By

Raghavendra D.M

Comments